CrimeLatestMain PostNational

ಕಾಲೇಜು ವಿದ್ಯಾರ್ಥಿನಿಯನ್ನು 500 ಮೀಟರ್ ಎಳೆದೊಯ್ದ ಆಟೋ ಚಾಲಕ!

ಮುಂಬೈ: ಚಾಲಕನೊಬ್ಬ 21 ವರ್ಷದ ಕಾಲೇಜು ವಿದ್ಯಾರ್ಥಿನಿ (College Student) ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಲ್ಲದೇ ಆಕೆಯನ್ನು 500 ಮೀಟರ್ ಎಳೆದುಕೊಂಡು ಹೋದ ಘಟನೆ ನಡೆದಿದೆ.

ಈ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ವಿಷಯ ಬೆಳಕಿಗೆ ಬಂದಿದೆ. ಶುಕ್ರವಾರ ಬೆಳ್ಳಂಬೆಳಗ್ಗೆ 6.40ರ ವೇಳೆಗೆ ವಿದ್ಯಾರ್ಥಿನಿ ತನ್ನ ಪಾಡಿಗೆ ತಾನು ಕಾಲೇಜಿಗೆ ತೆರಳುತ್ತಿದ್ದಳು. ಈ ವೇಳೆ ಆಟೋ ಚಾಲಕ (Auto Driver) ಕೃತ್ಯ ಎಸಗಲು ಪ್ರಯತ್ನಿಸಿದ್ದಾನೆ.

POLICE JEEP

ಆರೋಪಿ ಹಾಗೂ ವಿದ್ಯಾರ್ಥಿನಿ ನಡುವೆ ವಿಚಾರವೊಂದಕ್ಕೆ ಮೊದಲು ವಾಗ್ವಾದ ನಡೆದಿದೆ. ಈ ವೇಳೆ ಆಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಇದರಿಂದ ಸಿಟ್ಟುಗೊಂಡ ಆರೋಪಿ, ವಿದ್ಯಾರ್ಥಿಯನ್ನು ಸುಮಾರು 500 ಮೀಟರ್ ಧರಧರನೇ ಎಳೆದುಕೊಂಡು ಬಂದು ತನ್ನ ಆಟೋದ ಒಳಗಡೆ ತಳ್ಳಲು ಯತ್ನಿಸಿದ್ದಾನೆ. ಇದನ್ನೂ ಓದಿ: ಪ್ರೀತಿ ಮಾಡ್ಬೇಡ ಎಂದಿದ್ದಕ್ಕೆ ಅಪ್ರಾಪ್ತೆ ಆತ್ಮಹತ್ಯೆ – ದ್ವೇಷಕ್ಕೆ ಹುಡುಗಿ ಮನೆಯವರಿಂದ ಪ್ರಿಯಕರನ ಕೊಲೆ ಆರೋಪ

ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿ, ಆಟೋ ಚಾಲಕನನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದ್ದಾಳೆ. ಇದನ್ನರಿತ ಆಟೋ ಚಾಲಕ ಅಲ್ಲಿಂದ ಕಾಲ್ಕಿತ್ತಿದ್ದು, ವಿದ್ಯಾರ್ಥಿನಿಯನ್ನು 500 ಮೀಟರ್ ಎಳೆದೊಯ್ದಿದ್ದಾನೆ. ಪರಿಣಾಮ ವಿದ್ಯಾರ್ಥಿನಿ ಗಂಭೀರ ಗಾಯಗೊಂಡಿದ್ದಾಳೆ. ಮೂರು ಚಕ್ರದ ವಾಹನದಿಂದ ಎಳೆದುಕೊಂಡು ಹೋಗಿದ್ದರಿಂದ ಯುವತಿ ರಸ್ತೆಗೆ ಬಿದ್ದಿದ್ದಾಳೆ. ಬಳಿಕ ಆಟೋ ಚಾಲಕ ಪರಾರಿಯಾಗಿದ್ದಾನೆ.

POLICE JEEP

ಘಟನೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button