ಲಕ್ನೋ: ಅಂಗಡಿಯೊಂದರಿಂದ 10 ಅಡಿ ಸುರಂಗವನ್ನು ಚರಂಡಿ ಮೂಲಕ ಕೊರೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು (Thieves) ದೋಚಿದ ಘಟನೆ ಉತ್ತರ ಪ್ರದೇಶದ (Uttar Pradesh) ಮೀರತ್‍ನಲ್ಲಿ ನಡೆದಿದೆ.
ಜ್ಯುವೆಲರಿ ಶೋ ರೂಮ್ (Jewellery Shop) ಮಾಲೀಕರು ವ್ಯಾಪಾರಕ್ಕಾಗಿ ಅಂಗಡಿಯನ್ನು ತೆರೆಯಲು ಬಂದಾಗ ಚರಂಡಿಯ ಮೂಲಕ ಸುರಂಗವೊಂದು (Tunnel) ಕೊರೆದಿರುವುದನ್ನು ಗಮನಿಸಿದರು. ಕಳ್ಳರು ಅಂಗಡಿಯೊಳಗೆ ಪ್ರವೇಶಿಸಲು ಡ್ರೈನ್‍ನ್ನು ಬಳಕೆ ಮಾಡಿಕೊಂಡು ಇಟ್ಟಿಗೆ ಹಾಗೂ ಮಣ್ಣನ್ನು ಕೆಡವಿದ್ದಾರೆ.
ಅದಾದ ಬಳಿಕ ಅಂಗಡಿಯೊಳಗೆ ಬಂದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳೊಂದಿಗೆ ಕಳ್ಳರು ಪರಾರಿಯಾಗಿದ್ದಾರೆ. ಆದರೆ ಚಿನ್ನಾಭರಣದ ನಿಖರವಾದ ಮೊತ್ತ ತಿಳಿದುಬಂದಿಲ್ಲ. ಇದನ್ನೂ ಓದಿ: ಶಾಸಕ ಶಾಮನೂರು ಕೊಟ್ಟ ಗಿಫ್ಟನ್ನು ರಸ್ತೆಗೆ ಎಸೆದು ಮಹಿಳೆಯರ ಆಕ್ರೋಶ
ಘಟನೆ ಬಳಿಕ ಮೀರತ್ ಬುಲಿಯನ್ ಟ್ರೇಡರ್ಸ್ ಅಸೋಸಿಯೇಷನ್ ಸದಸ್ಯರು ಶೋರೂಮ್ ಬಳಿ ಪ್ರತಿಭಟನೆ ನಡೆಸಿದ್ದಾರೆ. ಗಲಾಟೆಯಾದ ಕೂಡಲೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಬೇಕೆಂಬುದು ನನ್ನ ಆಸೆ: ವರ್ತೂರು ಪ್ರಕಾಶ್