ದಾವಣಗೆರೆ: ಪೊಲೀಸ್ ಹೆಡ್ ಕಾನ್‍ಸ್ಟೇಬಲ್ ಮನೆಯ ಬೀಗ ಒಡೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ (Gold) ದೋಚಿದ ಘಟನೆ ಹರಿಹರ (Harihara) ಪಟ್ಟಣದ ವಿದ್ಯಾನಗರದಲ್ಲಿ ನಡೆದಿದೆ.
ಹೆಡ್ ಕಾನ್‍ಸ್ಟೇಬಲ್ ಜಯನಾಯ್ಕ್ ಎಂಬವರ ಮನೆಯ ಬೀಗ ಒಡೆದು, ಕಳ್ಳರು 4.80 ಲಕ್ಷ ರೂ. ಮೌಲ್ಯದ ಬಂಗಾರದ ಅಭರಣ, 5 ಸಾವಿರ ರೂ. ನಗದು ಹಣವನ್ನು ಕಳ್ಳರು ಕದ್ದೋಯ್ದಿದ್ದಾರೆ. ರಜೆ ಇದ್ದಿದ್ದರಿಂದ ಕುಟುಂಭಸ್ಥರು ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದಾಗ ಈ ದರೋಡೆ ನಡೆದಿದೆ. ಇಂದು (ಏ.5) ಬೆಳಗ್ಗೆ ಮನೆಗ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.