– ಇಂಡಸ್ಟ್ರಿಯಲ್ ಏರಿಯಾಗಳೇ ಟಾರ್ಗೆಟ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಐನಾತಿ ಕಳ್ಳಿಯರಿದ್ದು, ಇಂಡಸ್ಟ್ರಿಯಲ್ ಏರಿಯಾನೇ ಇವರ ಟಾರ್ಗೆಟ್ ಆಗಿದೆ. ಪೇಪರ್ ಆಯೋ ರೀತಿ ಬಂದು ಕಂಡಕಂಡಿದ್ದನ್ನ ದೋಚಿಕೊಂಡಿ ಪರಾರಿಯಾಗುತ್ತಾರೆ.
ಹೀಗೆ ದೋಚುತ್ತಿರೋ ಖತರ್ನಾಕ್ ಕಳ್ಳಿಯರು ನಾಗರಾಜ್ ಎಂಬವರ ಫ್ಯಾಕ್ಟರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ಕಳ್ಳತನ ಮಾಡಿದ್ದಾರೆ. ಈ ಐನಾತಿ ಕಳ್ಳಿಯರ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೊದಲಿಗೆ ಇಬ್ಬರು ಬರ್ತಾರೆ ಫ್ಯಾಕ್ಟರಿಯನ್ನ ಸೂಕ್ಷ್ಮವಾಗಿ ನೋಡ್ತಾರೆ. ತದನಂತರ ಇಬ್ಬರಿಗೆ ಇನ್ನೂ 6 ಜನ ಸಾಥ್ ನೀಡ್ತಾರೆ. ಕೈಯ್ಯಲ್ಲಿ ರಾಡ್ ಹಿಡಿದು ಬರ್ತಾರೆ ಕಳ್ಳತನ ಮಾಡ್ತಾರೆ. ಸದ್ಯ ಈ ಖತರ್ನಾಕ್ ಕಳ್ಳಿಯರು ಪೀಣ್ಯ ಜನತೆಯನ್ನ ಬೆಚ್ಚು ಬೀಳಿಸುವಂತೆ ಮಾಡುತ್ತಿದ್ದಾರೆ. ಇತ್ತ ಸಿಸಿಟಿವಿ ಕೊಟ್ಟು ದೂರು ಕೊಟ್ರೂ ಪೊಲೀಸರು ಯಾವುದೇ ರೀತಿಯಾಗಿ ಸ್ಪಂದಿಸುತ್ತಿಲ್ಲ ಅಂತ ಸ್ಥಳಿಯರು ಆರಪ ಮಾಡುತ್ತಿದ್ದಾರೆ.
ಏರಿಯಾದಲ್ಲಿ ಕಳ್ಳತನ ಮಾಡೋಕೆ ಶಿಫ್ಟ್ ಮಾಡಿಕೊಂಡಿರುವ ಕಳ್ಳಿಯರು, ಒಂದು ದಿನ ಒಂದೊಂದು ಏರಿಯಾಗೆ ಹೋಗಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಮುಂಜಾನೆಯೇ ಕೆಲಸ ಶುರುವಿಟ್ಟುಕೊಳ್ಳುತ್ತಾರೆ.
ಸದ್ಯ ನಾಗರಾಜ್ ಅವರು ಈ ಐನಾತಿ ಕಳ್ಳಿಯರ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv