ಮಂಗಳೂರು: ಪ್ರಜಾಪ್ರಭುತ್ವದಲ್ಲಿ (Democracy) ಕಳ್ಳರ ಹಾವಳಿ ಹೆಚ್ಚಾಗಿದೆ. ಬೇರೆ ಬೇರೆ ರಾಜ್ಯದಲ್ಲಿ ನಮ್ಮವರ ಕಳ್ಳತನ ಆಗಿದೆ. ಇಡಿ, ಐಟಿ ಎಲ್ಲವೂ ಬಿಜೆಪಿಯವರ (BJP) ಕೈಯಲ್ಲಿದೆ. ಹಾಗಾಗಿ ಕಳ್ಳತನ ಆಗುತ್ತಿದೆ ಎಂದು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಗಳವಾರ ಮಂಗಳೂರಿನಲ್ಲಿ (Mangaluru) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಎಲ್ಲಾ ಕಡೆ ಎಟಿಎಂ ಇಟ್ಟಿದ್ದಾರೆ. ದುಡ್ಡಿನ ಮೇಲೆ ಬಿಜೆಪಿ ಚುನಾವಣೆ (Election) ನಡೆಸುತ್ತಿದೆ. ಅಲ್ಲದೇ ಮನಿ ಮತ್ತು ಮಸಲ್ ಪವರ್ ಬಳಸುತ್ತಿದ್ದಾರೆ. ರಾಜ್ಯದ ಬಜೆಟ್‌ನಲ್ಲಿ 3 ಲಕ್ಷ ಕೋಟಿ ಹಣ ಇದೆ. ಅದರಲ್ಲಿ 40 ಪರ್ಸೆಂಟ್ ಕಮಿಷನ್ ಹೋಗುತ್ತದೆ. ಅನೇಕ ಎಂಎಲ್‌ಎಗಳು ಹಾಗೂ ಅವರ ಸಂಬಂಧಿಗಳು ಭ್ರಷ್ಟಾಚಾರ (Corruption) ಮಾಡುತ್ತಿದ್ದಾರೆ. ಈಗ ಅವರ ಬಗಲಲ್ಲೇ ಭ್ರಷ್ಟಾಚಾರ ನಡೆಯುತ್ತಿದ್ದರೂ ಅವರು ಮಾತನಾಡುವುದಿಲ್ಲ. ಒಂಭತ್ತು ವರ್ಷಗಳಲ್ಲಿ ಅವರ ಕೊಡುಗೆ ಏನಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸ್ವಾಭಿಮಾನಿಗಳು ಜೆಡಿಎಸ್‌ನಲ್ಲಿ ಇರಲ್ಲ ಎಂಬುದು ಮತ್ತೆ ಪ್ರೂವ್ ಆಗಿದೆ: ಸುಮಲತಾ
Advertisement
Advertisement
40% ಕಮಿಷನ್ ಕೊಟ್ಟರೆ ಎಲ್ಲಾ ಕೆಲಸ ಆಗುತ್ತದೆ ಎನ್ನುವುದು ಜಗತ್ತಿಗೇ ಗೊತ್ತಾಗಿದೆ. ಇದಕ್ಕೆ ನಾವು ಸಾಕ್ಷಿ ಕೊಡಬೇಕಾಗಿಲ್ಲ. ಕರ್ನಾಟಕದಲ್ಲಿದ್ದ ಕಾಂಟ್ರಾಕ್ಟರ್ ಸೇರಿದಂತೆ ಎಲ್ಲರೂ ಬರವಣಿಗೆಯ ರೂಪದಲ್ಲಿ ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲ ಹಾಗೂ ಲೋಕಾಯುಕ್ತರಿಗೆ ಕಳುಹಿಸಿದ್ದಾರೆ. ಇಂತಹ ಭ್ರಷ್ಟಾಚಾರದ ಸರ್ಕಾರ ಇರುವುದರಿಂದ ಇದನ್ನು ತೆಗೆದು ಹಾಕಲು ಜನರು ನಿರ್ಧರಿಸಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಂಘ ಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಿ: ಬಿಜೆಪಿ ವಿರುದ್ಧ ದೇಮ ಕಿಡಿ
Advertisement
ಮೋದಿ ಖಾನೆ ದೂಂಗಾ ಎನ್ನುವುದು ಬರೀ ಸ್ಲೋಗನ್ ಅಷ್ಟೆ. ಇಲ್ಲಿ 25 ಲಕ್ಷ ನಿರುದ್ಯೋಗಿ ಡಾಕ್ಟರ್ ಹಾಗೂ ಎಂಜಿನಿಯರ್ ಪದವೀಧರರಿದ್ದಾರೆ. 100 ಕೋಟಿ ಜನ ಎಜುಕೇಟೆಡ್ ಇದ್ದಾರೆ. 7.70 ಲಕ್ಷ ಜನ ಸರ್ಕಾರಿ ನೌಕರಿಯಲ್ಲಿದ್ದಾರೆ. 2.60 ಲಕ್ಷ ಹುದ್ದೆ ಖಾಲಿ ಇದೆ. ಇದನ್ನು ಯಾಕೆ ಮೋದಿಯವರು (Narendra Modi) ನೋಡುವುದಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಪರ ಪ್ರಚಾರಕ್ಕೆ ರಮ್ಯಾ, ದುನಿಯಾ ವಿಜಯ್ ಬರ್ತಾರೆ – ಯತೀಂದ್ರ
Advertisement
ಸಾಕಷ್ಟು ವಿಮಾನ ನಿಲ್ದಾಣ, ಹೆದ್ದಾರಿ, ಬಂದರು ಹಾಗೂ ಕೈಗಾರಿಕೆ ಎಲ್ಲಾ ಕಾಂಗ್ರೆಸ್ (Congress) ಕಾಲದಲ್ಲಿಯೇ ಆಗಿತ್ತು. ಮೋದಿಯವರು ಕಾಂಗ್ರೆಸ್ 70 ವರ್ಷಗಳಿಂದ ಏನು ಮಾಡಿದೆ ಎಂದು ಕೇಳುತ್ತಾರೆ. ರಾಜ್ಯದ ಡಬಲ್ ಎಂಜಿನ್ ಸರ್ಕಾರ ಏನು ಮಾಡಿದೆ? ಎಂಜಿನ್ ಫಾಕ್ಟರಿ ವಾರಣಾಸಿಯಲ್ಲಿದೆ. ಒಂದು ಎಂಜಿನ್ ಸರ್ಕಾರ 40 ಪರ್ಸೆಂಟ್‌ನಲ್ಲಿ ಕೆಟ್ಟುಹೋಗಿದೆ. ಇನ್ನು ಡಬಲ್ ಎಂಜಿನ್ ಸರ್ಕಾರ ಬಂದರೆ 80% ಆಗಬಹುದು. ಅವರು ನಾವು ಇಂತಹದೊಂದು ಹೂಡಿಕೆ ಮಾಡಿದ್ದೇವೆ ಎಂದು ಹೇಳಲಿ. ನಾನು ರೈಲ್ವೇ ಸಚಿವನಾಗಿದ್ದಾಗ ಒಂದೇ ವರ್ಷದಲ್ಲಿ ವಾರಣಾಸಿ ಸೇರಿ ಎಲ್ಲಾ ಕಡೆ 37 ಹೊಸ ರೈಲುಗಳನ್ನು ಬಿಟ್ಟಿದ್ದೆ. ಈಗ ಏನು ಅವರು ರೈಲು ಬಿಡೋದು ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ರದ್ದು ಆದೇಶಕ್ಕೆ ತಡೆ – ಮೇ 9 ರವರೆಗೆ ಜಾರಿ ಬೇಡವೆಂದು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ
185 ಸೀಟ್ ಎಲ್ಲರಿಗೂ ಮೊದಲೇ ನಾವು ಘೋಷಣೆ ಮಾಡಿದ್ದೇವೆ. ಕೆಲವು ಕಡೆ ನಾಯಕರ, ಆಕಾಂಕ್ಷಿಗಳ ಬೇಡಿಕೆ ಹೆಚ್ಚಾಗಿ ತಡವಾಗಿದೆ. ನಮಗೆ 150 ಸೀಟ್ ಕೊಡಿ, ಒಂದೆರಡು ಕಳ್ಳತನ ಆದರೂ ನಾವು ಉಳಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು. ಇದನ್ನೂ ಓದಿ: ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಅಣ್ಣಾಮಲೈ ಎಂದ ತೇಜಸ್ವಿ ಸೂರ್ಯ