ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಷ್ಟು ದಿನ ಬೈಕ್, ಸರ ಹಾಗು ಮನೆಗಳ್ಳರ ಹಾವಳಿ ಹೆಚ್ಚಾಗಿತ್ತು. ಆದರೆ ಈಗ ಪೆಟ್ರೋಲ್ ಹಾಗೂ ಹೆಲ್ಮೆಟ್ ಕಳ್ಳರ ಹಾವಳಿ ಶುರುವಾಗಿದೆ.
ನಗರದ ಮಾನ್ಯತಾ ಟೆಕ್ ಪಾರ್ಕ್ ಬಳಿಯಲ್ಲಿರುವ ನಂದಗೋಕುಲ ಬಡವಣೆಯಲ್ಲಿ ರಜೆ ದಿನಗಳಲ್ಲಿ ಇಲ್ಲಿ ಜನ ಸಂಚಾರ ಕಡಿಮೆ ಇರುತ್ತೆ. ಸಂಚಾರ ಕಡಿಮೆ ಇರುವ ಕಾರಣ ಮೂವರು ಯುವಕರು ಅಲ್ಲಿಯೇ ದೂರದಲ್ಲಿದ್ದ ಬಾಡಿಗೆ ಟೂ ವಿಲ್ಲರ್ ಗಾಡಿಯನ್ನು ತಳ್ಳಿಕೊಂಡು ಬರುತ್ತಾರೆ. ಇದನ್ನೂ ಓದಿ: ತುಮಕೂರಲ್ಲಿ ಹೆಲ್ಮೆಟ್ ಮಾಫಿಯಾ- ಬೆಲೆ ಬಾಳುವ ಹೆಲ್ಮೆಟ್‌ಗಳೇ ಇವರ ಟಾರ್ಗೆಟ್
Advertisement
Advertisement
ಅಲ್ಲಿಗೆ ಬಂದ ನಂತರ ಎರಡು ಲೀಟರ್ ವಾಟರ್ ಬಾಟಲ್‌ಗೆ ಗಾಡಿಯಲ್ಲಿದ್ದ ಪೆಟ್ರೋಲ್ ಅನ್ನು ಕದ್ದಿದ್ದಾರೆ. ಸ್ಕೂಟರ್ ಇಂಜಿನ್ ಕೆಳಗೆ ಪೆಟ್ರೋಲ್ ಪೈಪ್ ಕಿತ್ತು ಇವರು ತಂದಿರುವ ಪೈಪ್ ಹಾಕಿ ಪೆಟ್ರೋಲ್ ಕದಿಯುತ್ತಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
ಇತ್ತ ಕೋರಮಂಗಲದ ಫೋರಂ ಮಾಲ್‌ನ ಪಾರ್ಕಿಂಗ್‌ನಲ್ಲಿ ಹೆಲ್ಮೆಟ್ ಕಳ್ಳತನ ನಡೆದಿದೆ. ಪತಿ-ಪತ್ನಿ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ವಾಹನಗಳಲ್ಲಿ ಹೆಲ್ಮೆಟ್ ಇದ್ದರೆ ಸೈಲೆಂಟ್ ಆಗಿ ಅದನ್ನು ಬ್ಯಾಗಿನಲ್ಲಿ ಹಾಕಿಕೊಂಡು ಎಸ್ಕೇಪ್ ಆಗುತ್ತಾರೆ.
Advertisement
ಮಾಲ್, ಸಿನಿಮಾ ಥಿಯೇಟರ್‌ಗಳನ್ನೇ ಟಾರ್ಗೆಟ್ ಮಾಡುವ ಇವರು ಕ್ಷಣಮಾತ್ರದಲ್ಲಿ ಹೆಲ್ಮೆಟ್ ಕದ್ದು ಎಸ್ಕೇಪ್ ಆಗುತ್ತಾರೆ. ಇಬ್ಬರು ಹೆಲ್ಮೆಟ್ ಕಳ್ಳತನ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಇವರಿಗಾಗಿ ಆಡುಗೋಡಿ ಪೊಲೀಸರು ಹುಡುಕಾಡುತ್ತಿದ್ದಾರೆ.