– ಆತಂಕಕ್ಕೀಡಾದ ಭಕ್ತರು
ಚಿತ್ರದುರ್ಗ: ದೇವಸ್ಥಾನಗಳಿಗೆ ಕನ್ನ ಹಾಕುವ ಖದೀಮರ ಹಾವಳಿ ಹೆಚ್ಚಾಗಿದ್ದು, ಜಿಲ್ಲೆ ಹಿರಿಯೂರು ತಾಲೂಕಿನ ಕ್ಯಾತನಮಳೆ ಗ್ರಾಮದ ಮಹಾಲಿಂಗೇಶ್ವರ ದೇಗುಲದ ಆವರಣದಲ್ಲಿದ್ದ ನಾಗರ ವಿಗ್ರಹವನ್ನೂ ನಿಧಿಯಾಸೆಗೆ ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಇತ್ತೀಚಿನ ದಿನಗಳಲ್ಲಿ ನಿಧಿಗಳ್ಳರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಕಾವಲುಗಾರರು ಹಾಗೂ ಬಿಗಿ ಬಂದೋಬಸ್ತ್ ಇಲ್ಲದ ದೇಗುಲಗಳನ್ನೇ ಟಾರ್ಗೆಟ್ ಮಾಡುವ ಖದೀಮರು ದೇವಸ್ಥಾನಗಳಿಗೆ ಕನ್ನ ಹಾಕುತ್ತಿದ್ದಾರೆ. ಅಲ್ಲದೆ ನಿಧಿಯಾಸೆಗಾಗಿ ದೇವಸ್ಥಾನದಲ್ಲಿನ ದೇವರ ಮೂರ್ತಿಗಳನ್ನು ವಿರೂಪಗೊಳಿಸಿ ಭಕ್ತರ ನಂಬಿಕೆ ಮೇಲೆ ಬಾರಿ ದುಷ್ಪರಿಣಾಮ ಬೀರುತ್ತಿದ್ದಾರೆಂಬ ಆರೋಪಗಳು ನಿರಂತರವಾಗಿವೆ. ಹಿರಿಯೂರು ತಾಲೂಕಿನ ಕ್ಯಾತನಮಳೆ ಗ್ರಾಮದ ಮಹಾಲಿಂಗೇಶ್ವರ ದೇಗುಲದ ಆವರಣದಲ್ಲಿದ್ದ ನಾಗರ ವಿಗ್ರಹವನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ.
Advertisement
Advertisement
ಕಳೆದ ಹುಣ್ಣಿಮೆಯ ರಾತ್ರಿ ಈ ಕೃತ್ಯವೆಸಗಿರಬಹುದೆಂಬ ಅನುಮಾನ ಸಹ ಭಕ್ತರಲ್ಲಿ ಕಾಡುತ್ತಿದ್ದು, ಶನಿವಾರ ರಾತ್ರಿ ಪ್ರಕರಣ ಬೆಳಕಿಗೆ ಬಂದಿದೆ. ಹಾಗೆಯೇ ಇತ್ತೀಚೆಗೆ ಈ ದೇವರ ಕಾರ್ತಿಕ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತು. ಭಕ್ತರು ಸಹ ಈ ದೇವರ ಮೇಲೆ ಅಪಾರವಾದ ನಂಬಿಕೆ ಹಾಗೂ ಭಕ್ತಿ ಹೊಂದಿದ್ದರು. ಆದರೆ ಈ ವೇಳೆ ದೇಗುಲದಲ್ಲಿ ಇಂತಹ ದುಷ್ಕೃತ್ಯ ನಡೆದಿರೋದು ಗ್ರಾಮಸ್ಥರಲ್ಲಿ ಹಾಗೂ ಭಕ್ತರಲ್ಲಿ ಆತಂಕ ಸೃಷ್ಠಿಸಿದೆ. ಈ ಘಟನೆ ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.