ಮದುವೆಯಲ್ಲಿ ಕಳ್ಳರ ಕೈಚಳಕ- ಕಣ್ಣಾಮುಚ್ಚಾಲೆ ಆಡುವ ನೆಪದಲ್ಲಿ ಚಿನ್ನಾಭರಣ ಕಳ್ಳತನ

Public TV
1 Min Read
bengaluru cctv chain snaching

ಬೆಂಗಳೂರು: ಬಾಲಕನನ್ನು ಆಟವಾಡುವ ನೆಪದಲ್ಲಿ ಕರೆದುಕೊಂಡು ಹೋಗಿ ಆತನ ಮೈಮೇಲಿದ್ದ ಸುಮಾರು ಮೂರುವರೆ ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಸಿದು ಪಾರಾರಿಯಾಗಿರುವ ಘಟನೆ ಬೆಂಗಳೂರಿನ ಮಾಗಡಿ ರೋಡ್‍ನಲ್ಲಿ ನಡೆದಿದೆ.

ಬೆಂಗಳೂರಿನ ಮಾಗಡಿ ರೋಡ್‍ನಲ್ಲಿ  ಉದ್ಯಮಿ ರಾಘವೇಂದ್ರ, ತನ್ನ ಪತ್ನಿ ಮತ್ತು 6 ವರ್ಷದ ಪುತ್ರನೊಂದಿಗೆ ಸಂಬಂಧಿಕರ ಮನೆಗೆ ಮದುವೆಗೆ ಹೋಗಿದ್ದರು. ಕನ್ವೆನ್ಷನ್ ಹಾಲ್‌ನಲ್ಲಿ ಪೋಷಕರು ಬ್ಯುಜಿಯಾದಂತೆ, ಉದ್ಯಮಿ ಪುತ್ರ ಇತರೆ ಮಕ್ಕಳ ಜೊತೆಗೆ ಆಟವಾಡುತ್ತಿದ್ದ.

bengaluru chain cctv

ಈ ವೇಳೆ ಅಲ್ಲೇ ಇದ್ದ ಇಬ್ಬರು, ಅಪರಿಚಿತ ಯುವಕರು, ಕಣ್ಣಾಮುಚ್ಚಾಲೆ ಆಡೋಣ ಅಂತಾ ಬಾಲಕನನ್ನು ಕರೆದುಕೊಂಡು ಹೋದರು. ಕಣ್ಣಾಮುಚ್ಚಾಲೆ ಆಟವಾಡುವ ನೆಪದಲ್ಲಿ ಬಾಲಕನ ಮೈಮೇಲಿದ್ದ ಸುಮಾರು ಮೂರುವರೇ ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಸಿದು ಪರಾರಿ ಆಗಿದ್ದಾರೆ. ಇದನ್ನೂ ಓದಿ: ಜನರಲ್ ಟಿಕೆಟ್‍ಗಾಗಿ ರೈಲು ಪ್ರಯಾಣಿಕರ ನೂಕಾಟ

ಪುತ್ರ ಆಳುತ್ತ ತನ್ನ ತಂದೆಯ ಬಳಿ ಬಂದಾಗ ಚಿನ್ನಭರಣ ಕಳವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಗೋವಿಂದ ರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ತನಿಖೆ ವೇಳೆ ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಇಬ್ಬರು ಅಪರಿಚಿತ ಯುವಕರು ಮದುವೆ ಮಧ್ಯದಲ್ಲಿ ಬೈಕ್‍ನಲ್ಲಿ ಅನುಮಾನಸ್ಪದವಾಗಿ ಹೊರಗೆ ಹೋಗಿರುವ ದೃಶ್ಯ ಸೆರೆಸಿಕ್ಕಿದ್ದು, ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ. ಇದನ್ನೂ ಓದಿ: ಶಾಲಾ ಪಠ್ಯದಲ್ಲಿ ಕೆಂಪೇಗೌಡ, ಸಿದ್ದರೂಢ ಜಾತ್ರೆ – ಮೋದಿ `ವೋಕಲ್ ಫಾರ್ ಲೋಕಲ್’ ಮಂತ್ರವೂ ಸೇರ್ಪಡೆ

Share This Article
Leave a Comment

Leave a Reply

Your email address will not be published. Required fields are marked *