ಹೈದರಾಬಾದ್: ತಾನೇ ತೊಡಿದ ಕೆಡ್ಡಕ್ಕೆ ತಾನೇ ಬಿದ್ದನಂತೆ, ಹಾಗೆಯೇ ಆಂಧ್ರಪ್ರದೇಶದಲ್ಲಿ ಕಳ್ಳನೊಬ್ಬ ಚಿನ್ನಾಭರಣ ಕದಿಯಲೆಂದು ಗೋಡೆಯನ್ನು ಕೊರೆದಿದ್ದನು. ಆದರೆ ಅದೇ ಗೋಡೆಯಲ್ಲಿ ಸಿಲುಕಿ ಕೊಳ್ಳುವ ಮೂಲಕ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
Advertisement
ಆಂಧ್ರಪ್ರದೇಶದ ಶ್ರೀಕಾಕುಳಂನ ಕರಾವಳಿ ಜಿಲ್ಲೆಯ ಜಾಮಿ ಯಲಮ್ಮ ದೇವಸ್ಥಾನದ ಆಭರಣಗಳನ್ನು ಕದಿಯಲು ಯತ್ನಿಸುತ್ತಿದ್ದ ಆರೋಪಿ, ತಾನೇ ಕೊರೆದಿದ್ದ ರಂಧ್ರದಲ್ಲಿ ಸಿಲುಕಿಕೊಂಡಿದ್ದಾನೆ. ಆರೋಪಿಯನ್ನು 30 ವರ್ಷದ ಪಾಪ ರಾವ್ ಎಂದು ಗುರುತಿಸಲಾಗಿದ್ದು, ಈತ ದೇವಸ್ಥಾನದ ಚಿಕ್ಕ ಕಿಟಕಿ ಮುರಿದು ದೇವರ ವಿಗ್ರಹಗಳಲ್ಲಿದ್ದ ಆಭರಣಗಳನ್ನು ದೋಚಿದ್ದಾನೆ. ಇದನ್ನೂ ಓದಿ: ಕರ್ನಾಟಕದಲ್ಲಿ ಇಸ್ಲಾಂ ಸ್ಲೀಪರ್ ಸೆಲ್ ಕೆಲಸ ಮಾಡ್ತಿದೆ: ಚಕ್ರವರ್ತಿ ಸೂಲಿಬೆಲೆ
Advertisement
Advertisement
ನಂತರ ಅಲ್ಲಿಂದ ಪರಾರಿಯಾಗುವ ವೇಳೆ ಗೋಡೆಯಲ್ಲೇ ಸಿಲುಕಿಕೊಂಡಿದ್ದಾನೆ. ಕೊನೆಗೆ ಹೊರ ಬರಲು ಆಗದೇ ಪಾಪ ರಾವ್ ಸಹಾಯಕ್ಕಾಗಿ ಅಳಲು ಪ್ರಾರಂಭಿಸಿದ್ದಾನೆ. ನಂತರ ಗ್ರಾಮಸ್ಥರು ಆತನಿಗೆ ಎಚ್ಚರಿಕೆ ನೀಡಿ, ಆತನನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಸಮಾಧಿ ಮಾಡಿದ 24 ಗಂಟೆ ನಂತ್ರ ಮತ್ತೆ ಮನೆಗೆ ಬಂದ ವ್ಯಕ್ತಿ – ಬೆಚ್ಚಿಬಿದ್ದ ಕುಟುಂಬಸ್ಥರು