ಬೆಂಗಳೂರು: 10 ವರ್ಷಗಳಿಂದ ಕಳ್ಳತನದ ಆರೋಪದಡಿ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ವಾಹನ ಕಳ್ಳರ ಗ್ಯಾಂಗ್ ಒಂದನ್ನು ಅರೆಸ್ಟ್ ಮಾಡಲು ಕಾಮಾಕ್ಷಿ ಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
Advertisement
ನಿಹಾಲ್ ಅಲಿಯಾಸ್ ಇರ್ಫಾನ್, ಭಾಸ್ಕರ್, ಶಾಹಿದ್ ಮತ್ತು ಹಿದಾಯತ್ ಶರೀಫ್ ಬಂಧಿತ ಅರೋಪಿಗಳು. ನಿಹಾಲ್ ಅಲಿಯಾಸ್ ಇರ್ಫಾನ್ ವಾಹನ ಕಳ್ಳತನದ ಗ್ಯಾಂಗ್ ಲೀಡರ್ ಆಗಿದ್ದು, ಕಳೆದ ಹತ್ತು ವರ್ಷಗಳಿಂದ ಪೊಲೀಸರ ಕೈಗೆ ಸಿಗದಂತೆ ತಪ್ಪಿಸಿಕೊಂಡು ಓಡಾಡುತ್ತಿದ್ದರು. ಆರೋಪಿಗಳು ಲಾಕ್ ಹಾಕಿ ಪಾರ್ಕ್ ಮಾಡಿ ಹೋಗುತ್ತಿದ್ದ ವಾಹನಗಳನ್ನು ಕಳ್ಳತನ ಮಾಡುತ್ತಿದ್ದರು. ಇದನ್ನೂ ಓದಿ: ಮೈಸೂರಿನಲ್ಲಿ ಮತ್ತೊಂದು ಪ್ರಕರಣ – ಕಾಲೇಜು ವಿದ್ಯಾರ್ಥಿನಿ ಮೇಲೆ ಹಲ್ಲೆ, ಅತ್ಯಾಚಾರ ಯತ್ನ
Advertisement
Advertisement
ಅರೋಪಿಗಳಾದ ಭಾಸ್ಕರ್, ಶಾಹಿದ್ ಮತ್ತು ಹಿದಾಯತ್ ಕಳ್ಳತನ ಮಾಡಿ ಬಳಿಕ ಇರ್ಫಾನ್‍ಗೆ ನೀಡುತ್ತಿದ್ದರು. ನಂತರ ಕದ್ದ ವಾಹನಗಳನ್ನು ಸಂಪೂರ್ಣವಾಗಿ ಆಲ್ಟರ್ ಮಾಡಿ, ಈ ಹಿಂದೆ ಆಕ್ಸಿಡೆಂಟ್ ಅಗಿದ್ದ ವಾಹನಗಳ ದಾಖಲಾತಿ ಹಾಗೂ ವಾಹನ ಸಂಖ್ಯೆ ಗಳನ್ನು ನಮೂದಿಸಿ ವಾಹನಗಳನ್ನು ಮಾರಾಟ ಮಾಡುತ್ತಿದ್ದರು.
Advertisement
ಕೆಲವಾಹನಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡಿ ಜೇಬು ತುಂಬಿಸಿಕೊಳ್ಳುತ್ತಿದ್ದ ಗ್ಯಾಂಗ್ ಇದೀಗ ಅಂದರ್ ಆಗಿದ್ದು, ಆರೋಪಿಗಳಿಂದ ಒಂದು ಕಾರು ಹಾಗೂ ಒಂಬತ್ತು ಅಶೋಕ್ ಲೇಲ್ಯಾಂಡ್ ಮಿನಿ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಒಟ್ಟು ಮೌಲ್ಯ ಒಂದು ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಇಟ್ಟ ಪ್ರಕರಣ- ಕೇಸ್ ಸಿಸಿಬಿಗೆ ವರ್ಗಾವಣೆ