ಕಾರವಾರ: ಸಣ್ಣಪುಟ್ಟ ಕಳ್ಳತನ ಮಾಡಿ ಊರು ಬಿಟ್ಟು ಬೆಂಗಳೂರಿಗೆ ಸೇರಿದ್ದ ಯುವಕನೊಬ್ಬ, ಊರಿಗೆ ಬಂದು ಪಕ್ಕದ ಮನೆಗೆ ಕನ್ನ ಹಾಕಿ ಚಿನ್ನ (Gold) ಲೂಟಿ ಮಾಡಿ ಪೊಲೀಸರ (Police) ಅತಿಥಿಯಾಗಿದ್ದಾನೆ.
ಬಂಧಿತ ಆರೋಪಿಯನ್ನು ಬೇಡ್ಕಣಿಯ ಗಣೇಶ್ ಎಂದು ಗುರುತಿಸಲಾಗಿದೆ. ಈತ ಚಿಕ್ಕಪುಟ್ಟ ಕಳ್ಳತನ ಮಾಡಿ, ಊರು ಬಿಟ್ಟು ಬೆಂಗಳೂರು ಸೇರಿ ಕೂಲಿ ಕೆಲಸ ಮಾಡಿಕೊಂಡಿದ್ದ. ಊರಿಗೆ ಬಂದವನೆ ಪಕ್ಕದ ಮನೆಗೆ ಕನ್ನ ಹಾಕಿ 1.26 ಲಕ್ಷ ರೂ. ಮೌಲ್ಯದ 21 ಗ್ರಾಂ ಚಿನ್ನ ಕದ್ದು, ಪರಾರಿಯಾಗಿದ್ದ.
- Advertisement
ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಪೊಲೀಸರು ಚಿನ್ನಾಭರಣ ಸಮೇತ ಈತನನ್ನು ಬಂಧಿಸಿದ್ದಾರೆ.
- Advertisement
ಈ ಹಿಂದೆ ಆರೋಪಿಯ ಚಿಕ್ಕಪುಟ್ಟ ತಪ್ಪುಗಳನ್ನು ಊರಿನ ಜನ ಕ್ಷಮಿಸಿದ್ದರು. ಇದೀಗ ದೊಡ್ಡ ಕಳ್ಳತನ ಮಾಡಿ ಕಂಬಿ ಹಿಂದೆ ಸೇರಿದ್ದಾನೆ.