– ಉಸಿರುಗಟ್ಟಿಸುತ್ತಿದೆ ದೆಹಲಿ; 400ರ ಗಡಿ ದಾಟಿದ ವಾಯು ಗುಣಮಟ್ಟ
ನವದೆಹಲಿ: ದೀಪಾವಳಿ ಹಬ್ಬದ 2ನೇ ದಿನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ (Air Pollution) ಮತ್ತಷ್ಟು ಹೆಚ್ಚಾಗಿದೆ. ಸೋಮವಾರ (ಇಂದು) ಮುಂಜಾನೆ ನಗರದಾದ್ಯಂತ ದಟ್ಟ ಹೊಗೆ ಹಾಗೂ ಮಂಜು ಇಡೀ ನಗರವನ್ನೇ ಮುಚ್ಚಿಕೊಂಡಂತೆ ಕಾಣುತ್ತಿದೆ.
ಮಂಜು ಮತ್ತು ದಟ್ಟ ಹೊಗೆಯ ವಾತಾವರಣದಿಂದಾಗಿ ಮುಂಜಾನೆ ವೇಳೆ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ನಗರದ ಹಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 400ರ ಗಡಿ ದಾಟಿದೆ.
#WATCH | Delhi: Air Quality Index (AQI) in the area around South Extension is 360, categorised as ‘Very Poor’, as per the CPCB (Central Pollution Control Board).
(Visuals shot at 04:00 am) https://t.co/MrnHwzd0Ok
— ANI (@ANI) November 8, 2026
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಸಮೀರ್ (Sameer) ಆ್ಯಪ್ ನೀಡಿದ ಮಾಹಿತಿಯ ಪ್ರಕಾರ, ನವೆಂಬರ್ 8ರ ರಾತ್ರಿ 11:05ರ ವೇಳೆಗೆ ದೆಹಲಿಯ ಒಟ್ಟಾರೆ ವಾಯುಗುಣಮಟ್ಟ ಸೂಚ್ಯಂಕ 373 (ಅತ್ಯಂತ ಕಳಪೆ) ದಾಖಲಾಗಿತ್ತು. ಇಂದು ಬೆಳ್ಳಂಬೆಳಗ್ಗೆಯೇ ಹಲವು ಪ್ರದೇಶಗಳಲ್ಲಿ 400ರ ಗಡಿ ದಾಟಿದೆ.
ಎನ್ಸಿಆರ್ ನಗರಗಳಲ್ಲೂ ಹೆಚ್ಚಿದ ವಾಯುಮಾಲಿನ್ಯ
ದೆಹಲಿಯ ಸುತ್ತಮುತ್ತಲಿನ ನಗರಗಳಲ್ಲಿಯೂ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿದೆ. ನೋಯ್ಡಾದಲ್ಲಿ ಎಕ್ಯೂಐ 319, ಗಾಜಿಯಾಬಾದ್ನಲ್ಲಿ 360, ಗುರುಗ್ರಾಮ್ನಲ್ಲಿ 280 ಹಾಗೂ ಫರಿದಾಬಾದ್ನಲ್ಲಿ 297 ದಾಖಲಾಗಿತ್ತು.
ಆದ್ರೆ ದೆಹಲಿಯ ನಗರದ ಆಲಿಪುರ, ಬವಾನಾ, ಬುರ್ವಾರಿ, ಚಾಂದಿನಿ ಚೌಕ್, ಮುಂಡ್ಕಾ, ಪಂಜಾಬಿ ಬಾಗ್, ರೋಹಿಣಿ ಹಾಗೂ ವಿವೇಕ್ ವಿಹಾರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಎಕ್ಯೂಐ 400ರ (ತೀವ್ರ ಕಳಪೆ) ಗಡಿ ದಾಟಿದೆ. ಅಂಕಿಅಂಶಗಳ ಪ್ರಕಾರ, ಸೋಮವಾರ ಮುಂಜಾನೆ ಸುಮಾರು 4:20ರ ವೇಳೆಗೆ ಈ ಗುಣಮಟ್ಟ ದಾಖಲಾಗಿದೆ ಎಂದು ತಿಳಿದುಬಂದಿದೆ. ಇಂದರ್ಲೋಕ್ ಪ್ರದೇಶವೂ ದಟ್ಟ ಹೊಗೆಯಿಂದ ಆವೃತವಾಗಿದ್ದು, ಗೋಚರತೆ ಗಣನೀಯವಾಗಿ ಕುಸಿದಿತ್ತು.
ಒಟ್ಟಿನಲ್ಲಿ ದೀಪಾವಳಿ ಸಂಭ್ರಮದ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಏರಿಕೆಯಾಗಿರುವುದು ಸಾರ್ವಜನಿಕರ ಆರೋಗ್ಯ ಮತ್ತು ಪರಿಸರದ ಬಗ್ಗೆ ಮತ್ತೊಮ್ಮೆ ಆತಂಕ ಮೂಡಿಸಿದೆ.

