ತಿರುವನಂತಪುರಂ: ಕೇವಲ ಬಿಸ್ಕೆಟ್, ಬೇಕರಿ ಉತ್ಪನ್ನಗಳನ್ನು ಬಳಸಿಕೊಂಡು ಕೇರಳದ ಕಲಾ ಪ್ರಕಾರವಾದ ತೆಯ್ಯಂ ಕಲಾಕೃತಿಯನ್ನು ತಯಾರಿಸಲಾಗಿದೆ. ಕಲಾಕಾರನ ಈ ಬುದ್ದಿವಂತಿಕೆ ಮತ್ತು ಕೈಚಳಕಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಲಾಕಾರ ಡಾವಿಂಚಿ ಸುರೇಶ್ ಈ ಕಾಲಕೃತಿಯನ್ನು ರಚಿಸಿದ್ದಾರೆ. ಇವರು ಸುಮಾರು 15 ಗಂಟೆಗಳ ಸಮಯ ತೆಗೆದುಕೊಂಡು 24 ಅಡಿ ಉದ್ದದ ತ್ಯೆಯಂ ಚಿತ್ರವನ್ನು ರಚಿಸಿದ್ದಾರೆ. ಕೇರಳದ ಕಣ್ಣೂರಿನ ಬೇಕರಿ ಅಂಗಡಿಯೊಂದರಲ್ಲಿ ತೆಯ್ಯಂ ಕಲಾಕೃತಿಯನ್ನು ರಚಿಸಿದ್ದಾರೆ. ಇದನ್ನೂ ಓದಿ: ಗೊಬ್ಬರಕ್ಕೆ 28,6555 ಕೋಟಿ ಸಬ್ಸಿಡಿ
Advertisement
Advertisement
ಹಲವು ಟೇಬಲ್‍ಗಳನ್ನು ಜೋಡಿಸಿ ಅದರ ಮೇಲೆ ಬಿಳಿ ಬಣ್ಣದ ವಸ್ತ್ರವನ್ನಿಟ್ಟು, ಬಳಿಕ ವಿವಿಧ ಬಿಸ್ಕೆಟ್ ಮತ್ತು ಬೇಕರಿ ಉತ್ಪನ್ನಗಳನ್ನು ಈ ಕಲಾಕೃತಿ ರಚಿಸಲು ಬಳಸಲಾಗಿದೆ. ನನ್ನ ಸ್ನೇಹಿತರು ನನಗೆ ಸಹಾಯ ಮಾಡಿದರು. ಅವರ ಬೆಂಬಲದಿಂದ ಕೆಲಸ ಸುಲಭವಾಯಿತು. ನಾವು 24 ಅಡಿ ಉತ್ತದ ಈ ಕಲಾಕೃತಿಗೆ 25,000 ಬಿಸ್ಕೆಟ್ ಬಳಕೆ ಮಾಡಲಾಗಿದೆ. ಬೇಕರಿ ಉತ್ಪನ್ನಗಳಿಂದಲೇ ಮಾಡಿದ್ದೇವೆ ಎಂದು ಕಲಾಕಾರ ಸುರೇಶ್ ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ಸಿನಲ್ಲಿ ಪರ್ಸಂಟೇಜ್ ಕೋಲಾಹಲ – ಡಿಕೆಶಿ ಕಲೆಕ್ಷನ್ ಗಿರಾಕಿ ಅಂದ್ರು ಸಲೀಂ
Advertisement
Advertisement
ಬೇಕರಿ ಬಾಣಸಿಗ ಮಹಮ್ಮದ್ ರಶೀದ್ ಬೇಕ್ ಸ್ಟೋರಿ ಬೇಕರಿ ಎಂಬ ಹೊಸ ಯೋಜನೆಯನ್ನು ಯೋಚಿಸಿ, ಈ ಚಿತ್ರವನ್ನು ರಚಿಸುವಂತೆ ಕಲಾಕಾರ ಸುರೇಶ್ ಬಳಿ ಕೇಳಿಕೊಂಡಿದ್ದೆ. ಬಳಿಕ ಎಲ್ಲರೂ ಸೇರಿ ಬೇಕರಿ ಅಂಗಡಿಯ ಹಾಲ್‍ನಲ್ಲಿ ಟೇಬಲ್ ಮೇಲೆ ವಿಶಿಷ್ಟ ಕಲಾಕೃತಿಯನ್ನು ರಚನೆ ಮಾಡಿದ್ದಾರೆ ಎಂದು ಮಹಮ್ಮದ್ ರಶೀದ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಮಂತಾರಿಂದ ದೂರವಾಗ್ತಿದ್ದಂತೆ ಹೊಸ ಮನೆ ಖರೀದಿಸಿದ ನಟ ನಾಗಚೈತನ್ಯ