ಅವಕಾಶ ಸಿಕ್ಕಾಗೆಲ್ಲ ಮಹಿಳಾ ದೌರ್ಜನ್ಯ, ಮಹಿಳಾಪರವಾದ ಮಾತುಗಳನ್ನು ಹೇಳುತ್ತಲೇ ಇರುತ್ತಾರೆ ಬಾಲಿವುಡ್ (Bollywood) ನಟಿ ಪ್ರಿಯಾಂಕಾ ಚೋಪ್ರಾ (Priyanka Chopra). ಈ ಬಾರಿ ಅವರು ತಮ್ಮ ಬಗ್ಗೆ ತಾವೇ ಹೇಳಿಕೊಂಡಿದ್ದಾರೆ. ತಮಗಾದ ಅವಮಾನವನ್ನು ಭಾವುಕರಾಗಿ ಹಂಚಿಕೊಂಡಿದ್ದಾರೆ. ಸಿನಿಮಾ ರಂಗಕ್ಕೆ ಬಂದಾಗ ತಮ್ಮನ್ನು ಯಾರಿಗೆ ಹೋಲಿಸಿ ಮಾತನಾಡುತ್ತಿದ್ದರು ಎನ್ನುವುದರ ಬಗ್ಗೆ ಮೊದಲ ಬಾರಿಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಬಾಡಿ ಶೇಮಿಂಗ್ (Body Shaming) ಕುರಿತಾಗಿ ಇತ್ತೀಚಿನ ದಿನಗಳಲ್ಲಿ ಸಿಲೆಬ್ರಿಟಿಗಳು ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ. ತಮಗಾದ ಕಹಿ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಇದೀಗ ಆ ಸಾಲಿಗೆ ಪ್ರಿಯಾಂಕಾ ಚೋಪ್ರಾ ಕೂಡ ಸೇರಿಕೊಂಡಿದ್ದಾರೆ. ದಕ್ಷಿಣ ಏಷ್ಯಾಗೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿರುವ ಅವರು, ತಮ್ಮನ್ನು ಸಿನಿಮಾ ರಂಗಕ್ಕೆ ಬಂದಾಗ ಕರಿಬೆಕ್ಕಿಗೆ ಹೋಲಿಸುತ್ತಿದ್ದರು ಎಂದು ತುಸು ಭಾವುಕರಾಗಿಯೇ ಹೇಳಿದ್ದಾರೆ. ತಮ್ಮ ಮೈಬಣ್ಣದ ಬಗ್ಗೆ ಮಾತನಾಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮೌನ ಮುರಿದ ಕನ್ನಡದ `ಗಿಲ್ಲಿ’ ನಟಿ ರಾಕುಲ್
ಸಿನಿಮಾ ರಂಗಕ್ಕೆ ಬಂದಾಗ ತುಸು ದಪ್ಪ ಇದ್ದೆ. ನನ್ನ ಮೈಬಣ್ಣ ಕೂಡ ಕಪ್ಪು. ಅವೆರಡನ್ನೂ ಅಸ್ತ್ರವಾಗಿ ಬಳಸಿಕೊಂಡು ನನ್ನನ್ನು ಹೀಯಾಳಿಸುತ್ತಿದ್ದರು. ಪ್ರಾಣಿಗಳಿಗೆ ಹೋಲಿಸಿ ತಮಾಷೆ ಮಾಡುತ್ತಿದ್ದರು. ನನಗೆ ತುಂಬಾ ನೋವಾಗುತ್ತಿತ್ತು. ಎಷ್ಟೋ ಬಾರಿ ಅತ್ತಿದ್ದೇನೆ. ಆ ಸಂಕಟವನ್ನು ದಾಟಿಕೊಳ್ಳಲು ನಾನು ಏನೆಲ್ಲ ಮಾಡಬೇಕಾಯಿತು ಎಂದು ಅವರು ಮಾತನಾಡಿದ್ದಾರೆ.