-ಶ್ರೀನಿವಾಸಪುರದ ಮಾಜಿ ಸ್ಪೀಕರ್ ಅರಣ್ಯ ಭೂಮಿ ಒತ್ತುವರಿ ಪ್ರಸ್ತಾಪಿಸಿ ಟಾಂಗ್
ಬೆಂಗಳೂರು: ಕೋರ್ಟ್ ಕೊಟ್ಟಿರುವ ತೀರ್ಪನ್ನು ಕುರ್ಚಿ ಕೆಳಗೆ ಹಾಕಿಕೊಂಡು ಕೂತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಕೇಂದ್ರ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್‌ಎಂಟಿ ಕಂಪನಿಗೆ (HMT Company) ಸೇರಿದ ಐದು ಎಕರೆ ಜಮೀನನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ವಶಕ್ಕೆ ಪಡೆದುಕೊಂಡಿದೆ. ವಶಕ್ಕೆ ಪಡೆದುಕೊಂಡಿದ್ದಕ್ಕೆ ನಾವು ಕಾನೂನು ಹೋರಾಟ ಮಾಡುತ್ತೇವೆ. ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗುವುದು ಖಚಿತ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: Photo Gallery | ಹೆಚ್.ಡಿ.ದೇವೇಗೌಡರ ಭೇಟಿಯಾದ ಉಪರಾಷ್ಟ್ರಪತಿ – ಪುತ್ರ ಹೆಚ್‌ಡಿಕೆ ಹೆಗಲ ಮೇಲೆ ಕೈಹಾಕಿ ಫೋಟೋಗೆ ದೊಡ್ಡಗೌಡ್ರು ಪೋಸ್
ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ಒಬ್ಬರು ನೂರಾರು ಎಕರೆ ಅರಣ್ಯ ಭೂಮಿ ಲೂಟಿ ಹೊಡೆದಿದ್ದಾರಲ್ಲ. ಈ ಕುರಿತು ಸಚಿವ ಈಶ್ವರ್ ಖಂಡ್ರೆಯವರು (Eshwar Khandre) ಮೊದಲು ನೋಡಬೇಕು. ಇದರ ಬಗ್ಗೆ ನ್ಯಾಯಾಲಯ ಕೊಟ್ಟಿರುವ ತೀರ್ಪನ್ನೇ ಕುರ್ಚಿ ಕೆಳಗೆ ಹಾಕಿಕೊಂಡು ಕೂತಿದ್ದಾರೆ. ಮೊದಲು ಲೂಟಿ ಹೊಡೆದಿರುವುದನ್ನು ನೋಡಿ, ಎಷ್ಟು ಎಕರೆ ಲೂಟಿ ಆಗಿದೆ? ತಿಳಿದುಕೊಳ್ಳಿ. ಶುಕ್ರವಾರ (ಅ.25) ಐದು ಎಕರೆ ಭೂಮಿಗೆ ಬಲವಂತವಾಗಿ ಹೋಗಿ ಫೆನ್ಸಿಂಗ್ ಹಾಕಿಸಿಕೊಂಡಿದ್ದಾರೆ. ಕೋರ್ಟ್ ಆದೇಶಗಳಿಗೆ ಹೆಚ್‌ಎಂಟಿ ಹಾಗೂ ಅಧಿಕಾರಿಗಳು ತಲೆ ಬಾಗಬೇಕಾಗುತ್ತದೆ ಎಂದು ಆಗ್ರಹಿಸಿದರು.ಇದನ್ನೂ ಓದಿ: ಧರ್ಮ ಕಾರ್ಯಗಳ ಮೂಲಕ ಶೃಂಗೇರಿ ಮಠ ಮುಂಚೂಣಿಯಲ್ಲಿದೆ: ಡಿಕೆಶಿ