ಮುಂಬೈ: ಕುಖ್ಯಾತ ಗ್ಯಾಂಗ್‍ಸ್ಟರ್ ಅಬು ಸಲೇಂ ತನಗೆ ಮುಂಬೈ ಜೈಲಿನಲ್ಲಿ ಚಿಕನ್ ನೀಡುತ್ತಿಲ್ಲ ಎಂದು ಪೋರ್ಚುಗೀಸ್ ವಿದೇಶಾಂಗ ಅಧಿಕಾರಿಗಳಿಗೆ ದೂರು ನೀಡಿದ್ದು, ಮಂಗಳವಾರ ಅಧಿಕಾರಿಗಳು ಮುಂಬೈನ ಜೈಲಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಮುಂಬೈನ ತಲೋಜ ಜೈಲಿನಲ್ಲಿ ಇರುವ ಸಲೀಂ ತಮಗೇ ಉತ್ತಮ ಊಟ ಹಾಗೂ ಸರಿಯಾದ ವ್ಯವಸ್ಥೆ ಕಲ್ಪಿಸುತ್ತಿಲ್ಲ ಎಂದು ತನ್ನ ವಕೀಲರ ಮೂಲಕ ದೂರು ನೀಡಿದ್ದ. ಈ ದೂರಿನ ಅನ್ವಯ ಅಧಿಕಾರಿಗಳು ಹಾಗೂ ವೈದ್ಯರ ತಂಡ ಪರಿಶೀಲನೆ ನಡೆಸಿದ್ದು, ಸಲೀಂ ನನ್ನು ಸಸ್ಯಾಹಾರಿ ಊಟ ಸೇವಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
Advertisement
ಅಬು ಸಲೇಂ ನೀಡುತ್ತಿರುವ ವ್ಯವಸ್ಥೆ ಕುರಿತು ಮಾಹಿತಿ ನೀಡಿದರುವ ಸಲೇಂ ಪರ ವಕೀಲ ಸಬ ಖುರೇಷಿ, ಸಲೇಂಗೆ ನೀಡುತ್ತಿರುವ ಆಹಾರ ಗುಣಮಟ್ಟ ತೀರ ಕೆಟ್ಟದಾಗಿದೆ. ಅವರು ಸಸ್ಯಾಹಾರ ಸೇವನೆ ಮಾಡುವುದಿಲ್ಲ. ಅಲ್ಲದೇ ಆತನ ಕೋಣೆಗೆ ಸರಿಯಾಗಿ ಸೂರ್ಯನ ಬೆಳಕು ಬರುವುದಿಲ್ಲ. ಕೋಣೆಯ ಶೌಚಾಲಯ ಚಿಕ್ಕದಾಗಿದ್ದು, ಉತ್ತಮ ಸ್ಥಿತಿಯಲ್ಲಿ ಇಲ್ಲ. ಇಂತಹ ಸ್ಥಿತಿಯಲ್ಲಿ ಅವರಿಗೆ ಅನಾರೋಗ್ಯ ಕಾಡುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
Advertisement
Advertisement
ಸಲೇಂ ಈಗಾಗಲೇ ಕಣ್ಣಿನ ದೃಷ್ಟಿ ಹಾಗೂ ಮಂಡಿ ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ವೈದ್ಯಕೀಯ ಸೇವೆ ಅವಶ್ಯಕತೆ ಇದ್ದು, ಪೊಲೀಸರು ಸೂಕ್ತ ರಕ್ಷಣೆ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.
Advertisement
ಈ ಪ್ರತಿಕ್ರಿಯೆ ನೀಡಿರುವ ಜೈಲು ಅಧಿಕಾರಿ ಎಸ್ಪಿ ಸದಾನಂದ್ ಗೈಕ್ವಾಡ್, ಅಪರಾಧಿಗೆ ಮಾಂಸಹಾರ ಪೂರೈಸಲು ಸಾಧ್ಯವಿಲ್ಲ. ವೈದ್ಯರು ಕೇವಲ ಮೊಟ್ಟೆ ನೀಡಲು ತಿಳಿಸಿದ್ದಾರೆ. ಅದನ್ನು ನೀಡಿದ್ದೇವೆ. ಅಲದೇ ಜೈಲಿನ ಕ್ಯಾಂಟೀನ್ ನಲ್ಲಿ ಆತ ಮೊಟ್ಟೆ ಖರೀಸಬಹುದು. ಇನ್ನು ಎಲ್ಲ ಕೈದಿಗಳು ಸಹ ಅಂತಹ ಕೋಣೆಗಳಲ್ಲೇ ಇದ್ದು, ಪ್ರತ್ಯೇಕ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಆತ ಯಾವಾಗಲು ಆರೋಗ್ಯ ಕುರಿತು ದೂರು ನೀಡುತ್ತಾನೆ, ಆದರೆ ವೈದ್ಯರು ಯಾವುದೇ ಸಮಸ್ಯೆ ಇಲ್ಲ ಎಎಂದು ತಿಳಿಸಿದ್ದಾರೆ. ಆತನ ಆಧಾರ ರಹಿತ ಮಾಡುತ್ತಾನೆ ಎಂದು ಹೇಳಿದ್ದಾರೆ.
ವಕೀಲ ಖುರೇಷಿ ಅವರ ಪ್ರಕಾರ ಸಲೇಂ ಜೀವಾವಾಧಿ ಶಿಕ್ಷೆ ಯನ್ನು ಪಡೆದಿದ್ದು, ಭಾರತ ಪೋರ್ಚುಗಿಸ್‍ನೊಂದಿಗೆ ಮಾಡಿಕೊಂಡಿರುವ ಒಪ್ಪಂದವನು ಉಲ್ಲಂಘಿಸಿದೆ. ನಿಯಮಗಳ ಅನ್ವಯ ಸಲೇಂ ಪೋರ್ಚುಗೀಸ್ ದೇಶದ ಪ್ರಜೆಯಾಗಿದ್ದು, ಇಂತಹ ಅವರಿಗೆ 25 ವರ್ಷ ಮೇಲ್ಪಟ್ಟು ಶಿಕ್ಷೆ ನೀಡುವಂತಿಲ್ಲ ಎಂದು ಹೇಳಿದ್ದಾರೆ.
ಭೂಗತ ಪಾತಕಿ ಮುಂಬೈ ಬಾಂಬ್ ಸ್ಫೋಟಕ ಸಂಚುಕೋರ ದಾವೂದ್ ಡಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಬು ಸಲೇಂ 2002 ರಲ್ಲಿ ದೆಹಲಿ ಮೂಲದ ಉದ್ಯಮಿಯೊಬ್ಬರಿಗೆ 5 ಕೋಟಿ ರೂ. ಬೇಡಿಕೆ ಇಟ್ಟ ಆರೋಪದಲ್ಲಿ 7 ವರ್ಷ ಶಿಕ್ಷೆಗೆ ಗುರಿಯಾಗಿದ್ದ.