ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ನೇಲೋಗಿ ಗ್ರಾಮದ ಜಮೀನಿನಲ್ಲಿ ಹಿಂದೂ ಕಾರ್ಯಕರ್ತರೊಬ್ಬರನ್ನು ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಲಾಗಿದೆ.
30 ವರ್ಷದ ಶರಣು ಕೊಲೆಯಾದ ಹಿಂದೂ ಕಾರ್ಯಕರ್ತ. ಶರಣು ಕಲಬುರಗಿಯ ಶ್ರೀರಾಮ ಸೇನೆಯಲ್ಲಿ ಸಕ್ರೀಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಶರಣು ಕಲಬುರಗಿ ನಗರದ ದೇವಿ ಕಾಲೋನಿಯ ನಿವಾಸಿಯಾಗಿದ್ದರು. ಮೂರು ದಿನಗಳ ಹಿಂದೆ ನೆಲೋಗಿ ಗ್ರಾಮದ ಬಸವರಾಜ್ ಗುಜಗೊಂಡ ಎಂಬವರ ಜಮೀನಿನಲ್ಲಿ ಶರಣು ಅವರ ಶವ ಪತ್ತೆಯಾಗಿತ್ತು. ಆದರೆ ಅಂದು ಶವವನ್ನು ಯಾರು ಗುರುತು ಹಿಡಿದಿರಲಿಲ್ಲ. ಇದೀಗ ಇಂದು ಕೊಲೆಯಾದ ಯುವಕನ ಗುರುತು ಪತ್ತೆಯಾಗಿದೆ.
Advertisement
Advertisement
ಎಕ್ಸಾಂಗೆಂದು ಕಾರ್ ಬುಕ್ ಮಾಡಿದ್ರು: ಶರಣು ನಗರದಲ್ಲಿ ಕಾರ್ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದರು. ನವೆಂಬರ್ 17ರಂದು ಶರಣು ಬಳಿ ಬಂದು ಮೂವರು ಧಾರವಾಡಕ್ಕೆ ಪರೀಕ್ಷೆಗಾಗಿ ಹೋಗಬೇಕು ಎಂದು ಕಾರ್ ಬುಕ್ ಮಾಡಿದ್ದಾರೆ. ಈ ವೇಳೆ ಮಾರ್ಗ ಮಧ್ಯೆಯೇ ಶರಣು ಕೊಲೆಯಾಗಿದೆ. ಆದರೆ ಶರಣು ಕೊಲೆ ಇದೇ ಕಾರಣಕ್ಕೆ ನಡೆದಿದೆ ಎಂಬುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕಾರ್ ಬುಕ್ ಮಾಡಲು ಬಂದಿದ್ದ ಮೂವರನ್ನು ಸ್ನೇಹಿತರು ಗುರುತು ಹಿಡಿದಿದ್ದಾರೆ ಎಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
Advertisement
Advertisement
ಮೃತದೇಹ ಪತ್ತೆಯಾದ ಬಳಿಕ ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಅಪರಿಚಿತ ಶವ ಎಂದು ಸುದ್ದಿ ಪ್ರಸಾರಗೊಂಡಿತ್ತು. ಸುದ್ದಿ ನೀಡಿದ ಕುಟುಂಬಸ್ಥರು ಶರಣು ಮೃತ ದೇಹವನ್ನು ಗುರುತಿಸಿದ್ದಾರೆ. ಶರಣು ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದ್ದು, ಇಂದು ಕುಟುಂಬಸ್ಥರಿಗೆ ಶವವನ್ನು ಹಸ್ತಾಂತರಿಸಲಾಗುವುದು. ಶವಾಗಾರದ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಬಂಧ ನೇಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.