25 ದಿನಗಳಿಗೆ ಸಾಕಾಗುವಷ್ಟು ಆಹಾರ ಸುರಂಗದಲ್ಲೇ ಉಳಿದಿದೆ: ಕಾರ್ಮಿಕ ಅಖಿಲೇಶ್‌

Public TV
2 Min Read
Uttarakhand tunnel 3

ಡೆಹ್ರಾಡೂನ್: 17 ದಿನಗಳಿಂದ ಉತ್ತರಾಖಂಡದ ಸುರಂಗದಲ್ಲಿ (Uttarakhand Tunnel) ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಣಾ ಸಿಬ್ಬಂದಿ ಹೊರಗಡೆ ಕರೆತಂದಾಗ, ಹರ್ಷೋದ್ಗಾರ ಮತ್ತು ಹೂವಿನ ಹಾರಗಳೊಂದಿಗೆ ಸ್ವಾಗತಿಸಲಾಯಿತು. ಕಾರ್ಮಿಕರ ಕುಟುಂಬದ ಸದಸ್ಯರು ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡು ಎಲ್ಲರನ್ನೂ ಅಪ್ಪಿಕೊಂಡು ಬರಮಾಡಿಕೊಂಡರು. ಸೋಷಿಯಲ್‌ ಮೀಡಿಯಾದಲ್ಲಿ ಕಾರ್ಮಿಕರನ್ನು ಹೀರೋಗಳು ಎಂದು ಕೊಂಡಾಡಲಾಯಿತು.

ಎಲ್ಲ ಅಂದುಕೊಂಡಂತೆ ಆಗಿ ಸುರಕ್ಷಿತವಾಗಿ ಕಾರ್ಮಿಕರನ್ನು ರಕ್ಷಿಸಲಾಗಿದೆ. ಸಿಲ್ಕ್ಯಾರಾ ಸುರಂಗ 17 ದಿನಗಳ ನಂತರ ತನ್ನ ಒಡಲಿಂದ ಕಾರ್ಮಿಕರನ್ನು ಕಳುಹಿಸಿಕೊಟ್ಟಿತು. ಈಗ ಮತ್ತೊಂದನ್ನು ಉಳಿಸಿಕೊಂಡು ಸುರಂಗ ಸುದ್ದಿಯಾಗಿದೆ. ಹೌದು, ಕಾರ್ಮಿಕರಿಗಾಗಿ ಹೊರಗಡೆಯಿಂದ ಸುರಂಗದೊಳಕ್ಕೆ ಕಳುಹಿಸಿಕೊಟ್ಟಿದ್ದ ಆಹಾರ ಈಗ ಅಲ್ಲೇ ಉಳಿದಿದೆ. ಸುಮಾರು 25 ದಿನಗಳಿಗೆ ಆಗುವಷ್ಟು ಆಹಾರ ಸುರಂಗದೊಳಗೆ ಸೇರಿಕೊಂಡಿದೆ. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆಯಾಯ್ತು.. ದೇಗುಲಕ್ಕೆ ತೆರಳಿ ದೇವರಿಗೆ ಧನ್ಯವಾದ ಹೇಳ್ತೀನಿ: ಸುರಂಗ ತಜ್ಞ ಅರ್ನಾಲ್ಡ್‌

Uttarakhand Uttarkashi Tunnel 2

ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕ ಅಖಿಲೇಶ್‌ ಸಿಂಗ್ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನನ್ನ ಮುಂದೆಯೇ ಸುರಂಗ ಕುಸಿದು ಬಿದ್ದಿತು. ನಾವು 18 ಗಂಟೆಗಳ ಕಾಲ ಹೊರಗಿನ ಪ್ರಪಂಚದ ಸಂಪರ್ಕವನ್ನು ಕಳೆದುಕೊಂಡೆವು. ನಮಗಿದ್ದ ತರಬೇತಿಯಂತೆ, ನಾವು ಸಿಕ್ಕಿಬಿದ್ದ ನಂತರ ನೀರಿನ ಪೈಪ್ ಅನ್ನು ತೆರೆದೆವು. ನೀರು ಬೀಳಲು ಪ್ರಾರಂಭಿಸಿದಾಗ, ಜನರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೊರಗಿನ ಜನರು ಅರ್ಥಮಾಡಿಕೊಂಡರು. ಆ ಪೈಪ್ ಮೂಲಕ ನಮಗೆ ಆಮ್ಲಜನಕವನ್ನು ಕಳುಹಿಸಲು ಪ್ರಾರಂಭಿಸಿದರು.

ನಮಗೆ ಅಗತ್ಯವಿದ್ದ ನೀರು, ಆಹಾರ, ಆಮ್ಲಜನಕವನ್ನು ಪೂರೈಸಲು ಹೊರಗಿನಿಂದ ರಕ್ಷಕರು ವ್ಯವಸ್ಥೆ ಮಾಡಿದರು. ಅವಶೇಷಗಳ ಮೂಲಕ ಉಕ್ಕಿನ ಪೈಪ್ ಸಂಪರ್ಕ ಕಲ್ಪಿಸಿ, ಅದರ ಮೂಲಕ ನಮಗೆ ಆಹಾರ ಒದಗಿಸಿದರು. ಈಗ ನಾವೆಲ್ಲ ಹೊರಗಡೆ ಸುರಕ್ಷಿತವಾಗಿ ಬಂದಿದ್ದೇವೆ. ಸುರಂಗದಲ್ಲಿ ಇನ್ನೂ 25 ದಿನಗಳ ವರೆಗೆ ಸಾಕಾಗುವಷ್ಟು ಆಹಾರವಿದೆ ಎಂದು ಅಖಿಲೇಶ್‌ ಸಿಂಗ್‌ ತಿಳಿಸಿದ್ದಾರೆ. ಇದನ್ನೂ ಓದಿ: ನಾವು ಆರಾಮಾಗಿದ್ದು, ಈಗ ದೀಪಾವಳಿ ಆಚರಿಸುತ್ತೇವೆ: ಸಂತಸ ಹಂಚಿಕೊಂಡ ಕಾರ್ಮಿಕರು

Uttarakhand Uttarkashi Tunnel 1

ಇದು ಪರಿಸರ ವಿಪತ್ತು. ಇದಕ್ಕೆ ಯಾರನ್ನೂ ದೂಷಿಸಲು ಆಗುವುದಿಲ್ಲ ಎಂದು ಅಖಿಲೇಶ್‌ ಹೇಳಿಕೊಂಡಿದ್ದಾರೆ. ಆರೋಗ್ಯ ತಪಾಸಣೆ ಮಾಡಿದ ನಂತರ ನಾನು ಮನೆಗೆ ಹೋಗಲು ಯೋಜಿಸಿದ್ದೇನೆ. ಮುಂದೆ ಏನು ಮಾಡಬೇಕೆಂದು ನಿರ್ಧರಿಸುವ ಮೊದಲು ನಾನು 1-2 ತಿಂಗಳ ಕಾಲ ವಿರಾಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

ಉತ್ತರಕಾಶಿಯಿಂದ ಸುಮಾರು 30 ಕಿಮೀ ದೂರದಲ್ಲಿರುವ ಸಿಲ್ಕ್ಯಾರಾ ಸುರಂಗವು ಕೇಂದ್ರ ಸರ್ಕಾರದ ಚಾರ್ ಧಾಮ್ ಸರ್ವಋತು ರಸ್ತೆ ಯೋಜನೆಯ ಅವಿಭಾಜ್ಯ ಅಂಗವಾಗಿದೆ. ಇದು ದುರ್ಬಲವಾದ ಹಿಮಾಲಯದ ಭೂಪ್ರದೇಶದಲ್ಲಿ ಸುಮಾರು 889 ಕಿಲೋಮೀಟರ್‌ಗಳವರೆಗೆ ವಿಸ್ತರಿಸಿದೆ. ನವೆಂಬರ್ 12 ರಂದು ಸುರಂಗದ ಒಂದು ಭಾಗವು ಪ್ರವೇಶದ್ವಾರದಿಂದ ಸುಮಾರು 200 ಮೀಟರ್‌ಗಳಷ್ಟು ಕುಸಿದು, ಅದರೊಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಿಲುಕಿಕೊಂಡಿದ್ದರು. ಘಟನೆಯ ನಂತರ ಸರ್ಕಾರವು ಸುರಂಗದ ಸುರಕ್ಷತಾ ಲೆಕ್ಕಪರಿಶೋಧನೆಯನ್ನು ಪ್ರಾರಂಭಿಸಿದೆ. ಇದನ್ನೂ ಓದಿ: ಧೈರ್ಯ ಮೆಚ್ಚುವಂತದ್ದು: ಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರ ಜೊತೆ ಮೋದಿ ಮಾತುಕತೆ

Share This Article