ದಕ್ಷಿಣದ ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha) ಇದೇ ಮೊದಲ ಬಾರಿಗೆ ಹಲವು ಖಾಸಗಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ನಾಗ ಚೈತನ್ಯ (Nagachaitanya) ಜೊತೆಗಿನ ಬಾಂಧವ್ಯವನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ, ಸಪರೇಷನ್ ನಂತರ ತಮ್ಮ ಬದುಕಿನಲ್ಲಿ ಆದ ಘಟನೆಗಳನ್ನೂ ಅವರು ಯೂಟ್ಯೂಬ್ ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ತಪ್ಪು ಮಾಡದೇ ಇರುವ ನಾನು ಯಾಕೆ ಹೆದರಿಕೊಳ್ಳಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಮುಂದುವರೆದ ಮಾತನಾಡಿದ ಅವರು ‘ನಾಗ ಚೈತನ್ಯ ಜೊತೆ ಬಾಂಧವ್ಯವನ್ನು (Divorce) ಕಡಿದುಕೊಳ್ಳುವಾಗ ಸಾಕಷ್ಟು ಯೋಚನೆ ಮಾಡಿದ್ದೇನೆ. ಅವರಿಂದ ಆಚೆ ಬಂದ ನಂತರ ಸಿನಿಮಾ ಉದ್ಯಮದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂದು ಕಲಿತಿದ್ದೇನೆ. ಕೆಲವರು ಏನೇ ಸಲಹೆ ನೀಡಿದರೂ, ನನಗೆ ಸರಿ ಅನಿಸಿದ್ದನ್ನು ಮಾಡಿದ್ದೇನೆ. ಸರಿ ದಾರಿಯಲ್ಲೇ ನಡೆದಿದ್ದರಿಂದ ನನಗೆ ಯಾವುದೇ ಪಾಪಪ್ರಜ್ಞೆ ಕಾಡುತ್ತಿಲ್ಲ’ ಎಂದಿದ್ದಾರೆ. ಇದನ್ನೂ ಓದಿ: ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ನ್ಯೂಸ್; ಮಾ.31 ರಿಂದ IPL ಧಮಾಕ – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಪುಷ್ಪಾ (Pushpa) ಸಿನಿಮಾದಲ್ಲಿ ಐಟಂ ಡಾನ್ಸ್ (Item Dance) ಮಾಡಲು ಅವಕಾಶ ಬಂದಿದ್ದು ಡಿವೋರ್ಸ್ ನಂತರವಂತೆ. ಕುಟುಂಬಸ್ಥರು ಮತ್ತು ಕೆಲವು ಸ್ನೇಹಿತರು ಈ ಹಾಡನ್ನು ಒಪ್ಪಿಕೊಳ್ಳಬೇಡ ಎಂದು ಹೇಳಿದ್ದರಂತೆ. ಟ್ರೋಲ್ ಮಾಡುವವರು ಕೂಡ ಇದೇ ಸಲಹೆಯನ್ನೇ ನೀಡಿದ್ದರಂತೆ. ಆದರೆ, ನಾನು ಏನೂ ತಪ್ಪು ಮಾಡಿಲ್ಲ. ಸುಮ್ಮನೆ ಮನೆಯಲ್ಲಿ ಏಕೆ ಕೂರಬೇಕು. ಅಷ್ಟಕ್ಕೂ ನನಗೆ ಅದು ಐಟಂ ಡಾನ್ಸ್ ಅಂತ ಅನಿಸಲಿಲ್ಲ. ಅದೊಂದು ಕ್ಯಾರೆಕ್ಟರ್ ಅಂತ ಅನಿಸಿತ್ತು. ಹಾಗಾಗಿ ಹಾಡು ಒಪ್ಪಿಕೊಂಡೆ ಎಂದಿದ್ದಾರೆ ಸಮಂತಾ.
ಸದ್ಯ ಸಮಂತಾ, ಶಾಕುಂತಲಂ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಮಯದಲ್ಲಿ ಹಲವಾರು ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಖಾಸಗಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ತಮಗಾದ ನೋವು, ಅವಮಾನಗಳನ್ನು ಎದುರಿಸಿದ ಬಗೆಯನ್ನು ಹೇಳಿಕೊಳ್ಳುತ್ತಿದ್ದಾರೆ.