– ಇ.ಡಿ ತನಿಖೆ ಕಾರ್ಯವೈಖರಿ ಪಾರದರ್ಶಕವಾಗಿರಬೇಕು
– ಕೇಂದ್ರಕ್ಕೆ ಇ.ಡಿ, ಐಟಿ, ಸಿಬಿಐ ಅಸ್ತ್ರ
ಬೆಂಗಳೂರು: ಇಡಿ ದಾಳಿಯು ಸರ್ವೇ ಸಾಮಾನ್ಯವಾಗಿದೆ. ಇಡಿ ತನಿಖೆ ಮಾಡಬೇಕು ಅಂದರೆ ಅವರು ಕೆಲವೊಂದು ಪ್ರೊಸೀಜರ್ ಫಾಲೋ ಮಾಡಬೇಕು. ಅವರ ಕಾರ್ಯವೈಖರಿ ಪಾತದರ್ಶಕವಾಗಿರಬೇಕು. ಇಲ್ಲಿ ಯಾವುದೇ ಹಣಕಾಸು ವಹಿವಾಟು ನಡೆದಿಲ್ಲ. ಹಣಕಾಸಿನ ವಿಚಾರ ಎಲ್ಲೂ ತನಿಖೆಯಾಗಿಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ (D K Suresh) ಹೇಳಿದ್ದಾರೆ.
Advertisement
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡಿಯವರು ಹತ್ತು ಹದಿನೈದು ದಿನದ ಹಿಂದೆ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಅವರ ದಾಳಿ ಸರ್ವೇ ಸಾಮಾನ್ಯವಾದದ್ದು. ಇಲ್ಲಿ ಯಾವುದೇ ಹಣಕಾಸು ವಹಿವಾಟು ನಡೆದಿಲ್ಲ. ಹಣಕಾಸಿನ ವಿಚಾರ ಎಲ್ಲೂ ತನಿಖೆಯಾಗಿಲ್ಲ. ಕೊನೆಗೆ ಈ ಕೇಸ್‌ನಲ್ಲಿ ಏನೂ ಇಲ್ಲ ಅನ್ನೋದು ಅವರಿಗೆ ಗೊತ್ತಾಗುತ್ತದೆ ಎಂದರು. ಇದನ್ನೂ ಓದಿ: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಬಿಂದಾಸ್ ಲೈಫ್ – ಪ್ರಕರಣ ಸಿಸಿಬಿಗೆ ವರ್ಗಾವಣೆ
Advertisement
Advertisement
ಈ ಪ್ರಕರಣ ಸರ್ಕಾರದ ನಡುವಿನ ವ್ಯವಹಾರವಾಗಿದೆ ಹೊರತು ಖಾಸಗಿ ವ್ಯಕ್ತಿಗಳಿಗೆ ಸಂಬಂಧ ಪಟ್ಟಿದ್ದು ಅಲ್ಲ. ಲೋಕಾಯುಕ್ತದಲ್ಲಿ 120 ಬಿ ಹಾಕಿದ್ದಾರೆ. ಇದರಲ್ಲಿ ಲೋಕಾಯುಕ್ತ ಪ್ರವೇಶಕ್ಕೆ ಅವಕಾಶವಿದೆ. ಆ ನಿಟ್ಟಿನಲ್ಲಿ ತನಿಖೆ ನಡೆದಾಗ ಸತ್ಯಾಂಶ ಹೊರಗೆ ಬರುತ್ತದೆ. ಇದೊಂದು ರಾಜಕೀಯ ಪ್ರೇರಿತ ದಾಳಿ, ಪ್ರಕರಣವಾಗಿದೆ. ಇಲ್ಲಿ ಯಾವುದೇ ಸತ್ಯಾಂಶ ಇಲ್ಲ. ಇದರ ಬಗ್ಗೆ ನ್ಯಾಯಾಲಯದಲ್ಲಿ ಕೂಲಂಕಷವಾಗಿ ತನಿಖೆ ನಡೆದಿದೆ. ಇದಕ್ಕೆ ಸಿಎಂ ಹೆದರಬೇಕಿಲ್ಲ. ಇದರಲ್ಲಿ ಏನು ಇಲ್ಲ ಎಂದು ಅವರಿಗೂ ಕೊನೆಗೆ ಅರಿವಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಹಮಾಸ್ ಮುಖ್ಯಸ್ಥನ ಕೊನೆ ಕ್ಷಣಗಳ ಡ್ರೋನ್ ದೃಶ್ಯ ಬಿಡುಗಡೆ ಮಾಡಿದ ಇಸ್ರೇಲ್
Advertisement
ಇಡಿ ವಿರುದ್ಧ ನಾಗೇಂದ್ರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ವಿರೋಧ ಪಕ್ಷದ ಮೇಲಿನ ದಾಳಿ ಹೊಸದೇನಲ್ಲ. ಬಲಿಷ್ಟವಾಗಿರುವ ರಾಜಕೀಯ ನಾಯಕರನ್ನು ಕುಗ್ಗಿಸುವುದಕ್ಕೆ ಇಂತಹ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಅವರು ವಿರೋಧ ಪಕ್ಷದ ಮೇಲೆ ಐಟಿ, ಇಡಿ, ಸಿಬಿಐಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ವಿಪಕ್ಷಗಳ ಮೇಲೆ ಆ ಅಸ್ತ್ರಗಳನ್ನು ಪದೇ ಪದೇ ಪ್ರಯೋಗ ಮಾಡ್ತಿದ್ದಾರೆ. ನಮಗೆ ಅನುಕೂಲ ಆಗುತ್ತೆ ಎಂದು ಕಳೆದ 10 ವರ್ಷಗಳಿಂದ ಅವರು ಇದನ್ನೇ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಚನ್ನಪಟ್ಟಣ ಚುನಾವಣೆ ಟಿಕೆಟ್ ವಿಚಾರವಾಗಿ ಮಾತನಾಡಿ, ಸಹೋದರನ ಜೊತೆ ಪ್ರತಿದಿನ ಭೇಟಿ ಮಾಡುತ್ತೇನೆ. ಅದರಲ್ಲಿ ಹೊಸದೇನು ಇಲ್ಲ, ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದೇವೆ. ಅಭ್ಯರ್ಥಿ ತಯಾರಿ ಬಗ್ಗೆ ಮಾತನಾಡಿದ್ದೇವೆ. ಮುಖಂಡರು ಕಾರ್ಯಕರ್ತರ ಜೊತೆ ಚರ್ಚಿಸಿದ್ದೇವೆ. ಜನ ನನಗೆ ವಿಶ್ರಾಂತಿ ಕೊಟ್ಟಿದ್ದಾರೆ. ವಿಶ್ರಾಂತಿ ತೆಗೆದುಕೊಳ್ಳಿ ಎಂದಿದ್ದಾರೆ. ಅಚ್ಚರಿಯ ಅಭ್ಯರ್ಥಿಯನ್ನ ನಮ್ಮ ಪಕ್ಷ ಕೊಡಲಿದೆ ಎಂದು ತಿಳಿಸಿದರು. ಇದನ್ನೂ ಓದಿ:ದರ್ಶನ್ ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮಿ
ಮೈತ್ರಿಕೂಟದದಿಂದ ಅಚ್ಚರಿ ಅಭ್ಯರ್ಥಿ ಬರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಮೈತ್ರಿಕೂಟಕ್ಕೂ ನಮಗೂ ಸಂಬಂಧವಿಲ್ಲ. ನೀವು ಯಾರನ್ನ ಮೈತ್ರಿಕೂಟದ ಅಭ್ಯರ್ಥಿ ಅಂತೀರೋ ಗೊತ್ತಿಲ್ಲ. ನಾವು ಕಳೆದ ಮೂರು ತಿಂಗಳಿಂದ ಕೆಲಸ ಮಾಡುತ್ತಿದ್ದೇವೆ. ಚನ್ನಪಟ್ಟಣಕ್ಕೆ ಹೊಸದಿಕ್ಕು ಕೊಡುತ್ತಿದ್ದೇವೆ. ಸಿಎಂ, ಡಿಸಿಎಂ ಕೂಡ ಕೆಲಸ ಮಾಡುತ್ತಿದ್ದಾರೆ. ಚನ್ನಪಟ್ಟಣ ಗೆಲ್ಲೋಕೆ ಬೇಕಾದ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕೋಲ್ಕತ್ತಾ ಆಸ್ಪತ್ರೆಯಲ್ಲಿ ಭಾರಿ ಬೆಂಕಿ ಅವಘಡ: ಐಸಿಯುನಲ್ಲಿದ್ದ ರೋಗಿ ಸಾವು