ರಾಜ್ಯಕ್ಕೆ ಕಲ್ಲಿದ್ದಲು ಸರಬರಾಜಿನಲ್ಲಿ ವ್ಯತ್ಯಯವಿದೆ, ಕಾಂಗ್ರೆಸ್ ಆರೋಪಿಸಿದಷ್ಟು ಅಲ್ಲ: ಜೋಶಿ

Public TV
1 Min Read
prahlad joshi

ರಾಯಚೂರು: ದೇಶದಲ್ಲಿ ವಿದ್ಯುತ್ ಉತ್ಪಾದನೆ ಕಲ್ಲಿದ್ದಲಿನ ಮೇಲೆ ಈಗ ಹೆಚ್ಚು ಅವಲಂಬನೆಯಾಗಿರುವುದರಿಂದ ರಾಜ್ಯಕ್ಕೆ ಸರಬರಾಜು ಮಾಡುವ ಕಲ್ಲಿದ್ದಲು ಪ್ರಮಾಣದಲ್ಲಿ ಸ್ವಲ್ಪ ವ್ಯತ್ಯಯವಾಗಿದೆ. ಆದರೆ ಕಾಂಗ್ರೆಸ್ ಆರೋಪ ಮಾಡುವಷ್ಟು ಸಮಸ್ಯೆಯಾಗುವುದಿಲ್ಲ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಪ್ರಹ್ಲಾದ ಜೋಶಿ, ದೇಶದಲ್ಲಿ ಪ್ರತೀ ದಿನ ಗರಿಷ್ಟ 320 ಕೋಟಿ ಯೂನಿಟ್ಸ್ ಡಿಮ್ಯಾಂಡ್ ಮೇಲೆ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಆದರೆ ಈಗ ಡಿಮ್ಯಾಂಡ್ 340 -350 ಕೋಟಿ ಯೂನಿಟ್ಸ್ಗೆ ಹೆಚ್ಚಿದೆ. ರಷ್ಯಾದಿಂದ ಬರುತ್ತಿದ್ದ ಗ್ಯಾಸ್, ಹೈಡ್ರೋ ಪವರ್ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಹೀಗಾಗಿ ಕಲ್ಲಿದ್ದಲಿನ ಮೇಲೆ ಹೆಚ್ಚು ಅವಲಂಬನೆಯಾಗಿರುವುದರಿಂದ ಅಂದಿನ ಕಲ್ಲಿದ್ದಲು ಅಂದಿಗೆ ಖಾಲಿಯಾಗುತ್ತಿದೆ ಎಂದರು. ಇದನ್ನೂ ಓದಿ: ಮಸೀದಿಗಳ ಮೇಲಿನ ಧ್ವನಿವರ್ಧಕ ವಿಚಾರದಲ್ಲಿ ಕೋರ್ಟ್ ಆದೇಶ ಪಾಲಿಸುತ್ತೇವೆ: ಬೊಮ್ಮಾಯಿ

coal

ನಿಯಮದ ಪ್ರಕಾರ ವಿದ್ಯುತ್ ಕೇಂದ್ರಗಳಲ್ಲಿ 17 ದಿನಕ್ಕಾಗುವಷ್ಟು ಕಲ್ಲಿದ್ದಲು ಸಂಗ್ರಹ ಇರಬೇಕು. ಆದರೆ ಈಗ 8-10 ದಿನಕ್ಕೆ ಆಗುವಷ್ಟು ಮಾತ್ರ ಸಂಗ್ರಹ ಇದೆ. ಇದರಿಂದ 8-10 ದಿನದ ಬಳಿಕ ಸಂಪೂರ್ಣ ಖಾಲಿಯಾಗುವುದಿಲ್ಲ, ಪುನಃ ಕಳುಹಿಸುತ್ತೆವೆ. ರಾಜ್ಯದಲ್ಲಿ ಅಂದಾಜು ಪ್ರತೀ ದಿನ 20 ಲಕ್ಷ ಟನ್ ಖರ್ಚಾಗುತ್ತಿದೆ. ಅಷ್ಟನ್ನು ಗಣಿಗಳಿಂದ ಸರಬರಾಜು ಮಾಡುತ್ತೇವೆ. ಕಾಂಗ್ರೆಸ್ 10 ವರ್ಷದಲ್ಲಿ ರಾಜ್ಯಕ್ಕೆ ಕೊಟ್ಟ ಕಲ್ಲಿದ್ದಲಿಗಿಂತ ಒಂದುವರೆ ಪಟ್ಟು ಹೆಚ್ಚು ಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ಕೋಮು ಗಲಭೆ ಮಾಡುವ ವ್ಯಕ್ತಿಗಳಿಗೆ ಸರ್ಕಾರ ರಕ್ಷಣೆ ನೀಡಲ್ಲ: ಮುನೇನಕೊಪ್ಪ

Prahlad Joshi

ಸಿಂಗರೇಣಿ ಕೋಲ್ ಫೀಲ್ಡ್ ನಿಂದ ಬರುವ ಕಲ್ಲಿದ್ದಲನ್ನು ಪ್ರತಿದಿನ 7ರಿಂದ 10 ರೇಕ್‌ಗೆ ಏರಿಸಿದ್ದೇವೆ. ಮಹಾನದಿ ಕೋಲ್ ಫೀಲ್ಡ್ಸ್ ನಿಂದ ಹಾಗೂ ಡಬ್ಲ್ಯೂಸಿಎಲ್‌ನಿಂದ ರೋಡ್ ಕಮ್ ರೇಲ್ ಮೂಲಕ ಆಫರ್ ಮಾಡಿದ್ದೇವೆ. ರಾಜ್ಯಕ್ಕೆ ಬೇರೆ ಮೂಲಗಳಿಂದ ವಿದ್ಯುತ್ ಸಿಗುತ್ತಿರುವುದರಿಂದ ಕಲ್ಲಿದ್ದಲು ಬಳಕೆ ಸ್ಥಗಿತಗೊಳಿಸಿರುವುದಾಗಿ ರಾಜ್ಯದ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಸದ್ಯಕ್ಕೆ ಕರ್ನಾಟಕಕ್ಕೆ ಯಾವುದೇ ರೀತಿ ಕಲ್ಲಿದ್ದಲು ಕೊರತೆಯಿಲ್ಲ ಎಂದು ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *