ಒಂದೇ ಕೊಠಡಿಯಲ್ಲಿ 5 ತರಗತಿಗೆ ಒಬ್ಬರೇ ಮೇಷ್ಟ್ರು- ಶಾಲೆಗೆ ಬೇಕಿದೆ ಅಭಿವೃದ್ಧಿಯ ಅಭಯಾಸ್ತ

Public TV
3 Min Read
CHIKKAMAGALURU SCHOOL 2

– 8 ದಿನ ಕಳೆದ್ರೂ ಶಾಲೆಗೆ ಬಾರದ ಮಕ್ಕಳು

ಚಿಕ್ಕಮಗಳೂರು: ಒಬ್ಬನೇ ಶಿಕ್ಷಕ. ಒಂದೇ ಕೊಠಡಿ. ಐದು ತರಗತಿಗಳು. ಒಂಬತ್ತೇ ಮಕ್ಕಳು. 1ನೇ ಕ್ಲಾಸಿಗೆ ಎರಡು, 2ನೇ ಕ್ಲಾಸಿಗೆ ಎರಡು, 3ಕ್ಕೆ ಇಲ್ಲ. 4ನೇ ಕ್ಲಾಸಿಗೆ ಇಬ್ರು, 5ಕ್ಕೆ ಮೂವರು. ಎಲ್ಲರಿಗೂ ಒಬ್ಬನೇ ಪಾಠ ಮಾಡ್ಬೇಕು. ಕನ್ನಡ, ಹಿಂದಿ, ಇಂಗ್ಲೀಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಎಲ್ಲವಕ್ಕೂ ಅವನೊಬ್ಬನೇ ಮೇಷ್ಟ್ರು. ಶಾಲೆ ಆರಂಭವಾಗಿ 8 ದಿನವಾದ್ರು ಒಂದೇ ಒಂದು ಮಗುವೂ ಶಾಲೆಗೆ ಬಂದಿಲ್ಲ. ಪೋಷಕರು ಆ ಮೇಷ್ಟ್ರು ಹೋಗೋತನಕ ಮಕ್ಕಳನ್ನ ಶಾಲೆಗೆ ಕಳಿಸಲ್ಲ ಅಂತಿದ್ದಾರೆ. ಇದು ಸಮಸ್ಯೆಯ ಆಗರವಾಗಿರೋ ಕಾಫಿನಾಡ ಸರ್ಕಾರಿ ಸ್ಕೂಲ್ ಕಥೆ.

CHIKKAMAGALURU SCHOOL 1

ಹೌದು. ಚಿಕ್ಕಮಗಳೂರು (Chikkamagaluru School) ಜಿಲ್ಲೆ ಶೃಂಗೇರಿ ತಾಲೂಕಿನ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಗೋಳ ಸರ್ಕಾರಿ ಶಾಲೆಯಲ್ಲಿ 1 ಟು 5ನೇ ತರಗತಿಯಲ್ಲಿ 9 ಜನ ಮಕ್ಕಳಿದ್ದಾರೆ. 1ನೇ ಕ್ಲಾಸಿಗೆ ಇಬ್ಬರು, 2ನೇ ಕ್ಲಾಸಿಗೂ ಇಬ್ರು, 3ಕ್ಕೆ ಇಲ್ಲ. 4ನೇ ಕ್ಲಾಸಿಗೆ ಇಬ್ರು, 5ಕ್ಕೆ ಮೂವರು. ಎಲ್ಲರಿಗೂ ಒಬ್ಬನೇ ಪಾಠ ಮಾಡ್ಬೇಕು. ಕನ್ನಡ, ಹಿಂದಿ, ಇಂಗ್ಲೀಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಎಲ್ಲಾ ವಿಷಯಕ್ಕೂ ಅವನೊಬ್ಬನೇ ತಜ್ಞ.

ಈ ಶಾಲೆಯಲ್ಲಿ ಇರುವುದು ಒಂದೇ ಒಂದು ಕೊಠಡಿ. ಒಂದರಿಂದ ಐದನೇ ತರಗತಿಯ 9 ಜನ ಮಕ್ಕಳು ಇದೊಂದೇ ಕೊಠಡಿಯಲ್ಲಿ ಪಾಠ ಕೇಳಬೇಕು. ಇರೋದು ಒಬ್ಬನೇ ಶಿಕ್ಷಕ. ಆತ ಯಾರಿಗೆ ಯಾವ ಸಮಯದಲ್ಲಿ ಹೇಗೆ ಪಾಠ ಮಾಡಬಹುದು ನೀವೇ ಊಹಿಸಿ. ಯಾವ ತರಗತಿಯ ಯಾವ ಪಾಠವನ್ನು ಯಾವ ಮಕ್ಕಳು ಕೇಳುತ್ತಾರೆ ಎಂದು ಪಾಠ ಮಾಡುವ ಶಿಕ್ಷಕರಿಗೂ ಗೊತ್ತಿಲ್ಲ. ಕೇಳುವ ಮಕ್ಕಳಿಗೆ ಮೊದಲೇ ಗೊತ್ತಿಲ್ಲ. ಶಾಲೆಗೆ ಸೂಕ್ತ ಕೊಠಡಿ ಹಾಗೂ ಶಿಕ್ಷಕರಿಗಾಗಿ ಸ್ಥಳೀಯರು ಮತ್ತು ಎಸ್‍ಡಿಎಂಸಿ ಸದಸ್ಯರು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ನೋಡ್ತೀವಿ, ಮಾಡ್ತೀವಿ, ಕಳಿಸ್ತೀವಿ ಅನ್ನೋ ಮೇಲಾಧಿಕಾರಿಗಳಿಂದ ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಕಾರಣದಿಂದಲೂ 30 ಮಕ್ಕಳಿದ್ದ ಕಾಡಂಚಿನ ಕುಗ್ರಾಮದ ಶಾಲೆಯಲ್ಲಿ ಇಂದು ಇರುವುದು ಕೇವಲ ಒಂಬತ್ತು ಮಕ್ಕಳು ಮಾತ್ರ. ಸರ್ಕಾರಕ್ಕೆ ಮನವಿ ಮಾಡಿ… ಮಾಡಿ… ಸಾಕಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಇದನ್ನೂ ಓದಿ: ಭತ್ತ, ಬೇಳೆ ಕಾಳು, ರಾಗಿಗಳ ಎಂಎಸ್‍ಪಿ ಹೆಚ್ಚಳ – ಹಿಂದೆ ಎಷ್ಟಿತ್ತು? ಎಷ್ಟು ಏರಿಕೆಯಾಗಿದೆ?

CHIKKAMAGALURU SCHOOL 3

ಈ ಶಾಲೆಯಲ್ಲಿ ಸಮಸ್ಯೆ ಇಲ್ಲ. ಶಾಲೆಯೇ ಸಮಸ್ಯೆಯಲ್ಲಿ ಇದೆ. ಈ ಶಾಲೆಯ ಪರಿಸ್ಥಿತಿ ಹೀಗಿರುವಾಗ ಇಲ್ಲಿನ ಶಿಕ್ಷಕರದ್ದು ಮತ್ತೊಂದು ಸಮಸ್ಯೆ. ಶಾಲೆ ಆರಂಭವಾಗಿ ವಾರವಾದರೂ ಮಕ್ಕಳು ಮನೆಯಲ್ಲಿ ಆಟವಾಡುತ್ತಿದ್ದಾರೋ ವಿನಃ ಶಾಲೆಗೆ ಬರುತ್ತಿಲ್ಲ. ಕಾರಣ ಇಲ್ಲಿನ ಮೇಷ್ಟ್ರು. ಇಡೀ ಶಾಲೆಗೆ ಇರುವುದು ಒಬ್ಬರೇ ಶಿಕ್ಷಕರು. ಅವರು ಬೆಳಗ್ಗೆ 11.30ಕ್ಕೆ ಬಂದರೆ 2.30ಕ್ಕೆ ಮನೆ ಸೇರುತ್ತಾರೆ. ಸಂಜೆ ಮಕ್ಕಳೇ ಶಾಲೆಯ ಬೀಗ ಹಾಕಿಕೊಂಡು ಮನೆಗೆ ಹೋಗಬೇಕು. ಇದರಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯೂ ಇಳಿಮುಖವಾಗಿ ಈಗ 9ಕ್ಕೆ ಬಂದು ನಿಂತಿದೆ. ಹಾಗಾಗಿ ಇಲ್ಲಿನ ಪೆÇೀಷಕರು ಹೀಗಿರುವ ಶಿಕ್ಷಕ ಚಂದ್ರೇಗೌಡ ಇಲ್ಲಿಂದ ಬೇರೆಡೆಗೆ ಸ್ಥಳಾಂತರಗೊಂಡು ಬೇರೆ ಶಿಕ್ಷಕರು ಬರುವವರೆಗೂ ಮಕ್ಕಳನ್ನ ಶಾಲೆಗೆ ಕಳುಹಿಸುವುದಿಲ್ಲ ಎಂದು ಇಲ್ಲಿನಾ ಶಿಕ್ಷಕರನ್ನ ಬೇರೆ ಕಡೆ ವರ್ಗಾವಣೆ ಮಾಡಿದರೆ ಶಾಲೆಗೆ ಮಕ್ಕಳ ಸಂಖ್ಯೆಯು ಹೆಚ್ಚುತ್ತದೆ ಶಾಲೆಯು ಉಳಿಯುತ್ತೆ ಅಂತಿದ್ದಾರೆ ಸ್ಥಳೀಯರು.

CHIKKAMAGALURU SCHOOL

ಕೂಲಿ ಕಾರ್ಮಿಕರ ಮಕ್ಕಳೇ ಓದುವ ಕುಗ್ರಾಮದಲ್ಲಿ ಸರ್ಕಾರಿ ಶಾಲೆಯೊಂದು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಬೀಗ ಬೀಳುವ ಸ್ಥಿತಿ ತಲುಪಿದೆ. ಸರ್ಕಾರ ರಾಜ್ಯದ ಉದ್ದಗಲಕ್ಕೂ ಫ್ರೀ… ಫ್ರೀ…ಫ್ರೀ… ಅಂತ ಉಚಿತಗಳ ಮಹಾಪೂರವನ್ನೇ ಹರಿಸಿದೆ. ಆದರೆ, ಸರ್ಕಾರದ ಆ ಉಚಿತತೆಗಳಿಗೆ ಬೆಲೆ ಬರಬೇಕು ಅಂದರೆ ಸರ್ಕಾರಿ ಶಾಲೆಗಳಿಗೆ ಜೀವ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.

Share This Article