ನವದೆಹಲಿ: ಪಾಕಿಸ್ತಾನ ಭಾರತದ ವಿಚಾರ ಬಂದಾಗ ಹೇಳುವುದೇ ಸುಳ್ಳು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಮತ್ತೊಂದು ಸುಳ್ಳು ಹೇಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದೆ.
ಇಂದು ಬೆಳಗ್ಗೆ ಪಾಕಿಸ್ತಾನ ಜನರಲ್ ಅಸಿಫ್ ಗಫೂರ್ ಟ್ವೀಟ್ ಮಾಡಿ ನಮ್ಮ ಬಳಿ ಇಬ್ಬರು ಭಾರತದ ವಾಯು ಸೇನಾ ಪೈಲಟ್ ಗಳು ಇದ್ದಾರೆ ಎಂದು ಹೇಳಿದ್ದರು. ಇದನ್ನು ಓದಿ: ಭಾರತ V/S ಪಾಕಿಸ್ತಾನ: ಭೂ, ವಾಯು, ನೌಕಾ ಸೇನೆಯ ಸಾಮರ್ಥ್ಯ ಏನು?
ಗಫೂರ್ ಟ್ವೀಟ್ ಬೆನ್ನಲ್ಲೇ ರೇಡಿಯೋ ಪಾಕಿಸ್ತಾನದ ಇಬ್ಬರು ಭಾರತದ ಪೈಲಟ್‍ಗಳನ್ನು ನಾವು ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಇಬ್ಬರನ್ನು ಉತ್ತಮವಾಗಿ ನೋಡಿಕೊಳ್ಳುತ್ತೇವೆ. ಒಬ್ಬರಿಗೆ ಉತ್ತಮವಾಗಿ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಗಫೂರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿತ್ತು.
ಮಧ್ಯಾಹ್ನ ಭಾರತ ಸುದ್ದಿಗೋಷ್ಠಿ ನಡೆಸಿ, ನಮ್ಮ ಒಬ್ಬರು ಪೈಲಟ್ ನಾಪತ್ತೆಯಾಗಿದ್ದಾರೆ ಎಂದು ಹೇಳಿತ್ತು. ಭಾರತದಿಂದ ಅಧಿಕೃತ ಹೇಳಿಕೆ ಬಂದಲ್ಲೇ ಪಾಕಿಸ್ತಾನ ಸಂಜೆ ಉಲ್ಟಾ ಹೊಡೆದಿದ್ದು ನಮ್ಮ ಬಳಿ ಒಬ್ಬರು ಪೈಲಟ್ ಕಸ್ಟಡಿಯಲ್ಲಿ ಇದ್ದಾರೆ ಎಂದು ಮೇಜರ್ ಜನರಲ್ ಗಫೂರ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಇದನ್ನು ಓದಿ: ಭಾರತ ದಾಳಿಗೆ ಪಾಕ್ ಗಢ ಗಢ – ಮತ್ತೆ ಶಾಂತಿ ಮಂತ್ರ ಪಠಿಸಿದ ಇಮ್ರಾನ್ ಖಾನ್
ಆರಂಭದ ಟ್ವೀಟ್ ನಲ್ಲಿ ಅಸಿಫ್ ಗಫೂರ್, ಗಡಿ ನಿಯಂತ್ರಣ ರೇಖೆಯನ್ನು ದಾಟಿದ್ದ ಭಾರತೀಯ ವಾಯು ಪಡೆಯ ಎರಡು ಯುದ್ಧ ವಿಮಾನಗಳನ್ನು ನಾವು ಹೊಡೆದು ಹಾಕಿದ್ದೇವೆ ಎಂದು ಹೇಳಿದ್ದರು. ಆದರೆ ಭಾರತ ಪಾಕಿಸ್ತಾನದ ವಿಮಾನ ಭಾರತದ ಗಡಿ ದಾಟಿ ಬರುವ ವೇಳೆ ನಡೆದ ದಾಳಿ ವೇಳೆ ಒಂದು ಮಿಗ್ ವಿಮಾನ ಪತನಗೊಂಡಿದೆ. ಒಬ್ಬರು ಪೈಲಟ್ ನಾಪತ್ತೆಯಾಗಿದ್ದಾರೆ ಎಂದು ಹೇಳಿಕೆ ನೀಡಿತ್ತು.
ಪಾಕಿಸ್ತಾನ ಸೇನೆಯ ಜೊತೆ ಅಲ್ಲಿನ ಮಾಧ್ಯಮಗಳು ಸುಳ್ಳು ವರದಿ ಪ್ರಕಟಿಸಿವೆ. ಹಳೆಯ ಫೋಟೋ ಮತ್ತು ವಿಡಿಯೋಗಳನ್ನು ಪ್ರಸಾರ ಮಾಡಿ ಮಿಗ್ ವಿಮಾನವನ್ನು ಹೊಡೆದಿದ್ದೇವೆ ಎಂದು ವರದಿ ಮಾಡಿವೆ. ಈ ವರದಿಯಲ್ಲಿ ಏರ್ ಶೋ ಅಭ್ಯಾಸದ ವೇಳೆ ಸೂರ್ಯ ಕಿರಣ್ ವಿಮಾನ ಪತನಗೊಂಡ ಬಳಿಕ ಬೆಂಗಳೂರಿನ ಜನತೆ ಪೈಲಟ್ ಅವರನ್ನು ರಕ್ಷಿಸುವ ವಿಡಿಯೋವನ್ನು ಸಹ ಪ್ರಸಾರ ಮಾಡಿ ನಮ್ಮ ಸೇನೆ ಹೇಗೆ ಸಾಹಸ ಮಾಡಿದೆ ಎಂದು ಹೇಳಿ ಬೊಗಳೆಯನ್ನು ಬಿಟ್ಟಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv