ಬೆಂಗಳೂರು: ಡಿಕೆ ಸಾಹೇಬ್ರು ಹೇಳಿರುವುದರಲ್ಲಿ ತಪ್ಪೇನಿಲ್ಲ, ಎಲ್ಲರೂ ಬರಲಿ ಅನ್ನೋದಷ್ಟೇ ಅವರ ಉದ್ದೇಶವಾಗಿತ್ತು ಎಂದು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ (Sadhu Kokila) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಪರ ಬ್ಯಾಟ್ ಬೀಸಿದ್ದಾರೆ.ಇದನ್ನೂ ಓದಿ: ಹಕ್ಕಿಜ್ವರ ಭೀತಿ – ಚಿತ್ರದುರ್ಗ ಜಿಲ್ಲಾಡಳಿತದಿಂದ ಕೋಳಿ ಫಾರಂಗಳಲ್ಲಿ ಜಾಗೃತಿ
ನಗರದಲ್ಲಿ ಡಿಕೆಶಿ ನಟ್ಟು, ಬೋಲ್ಟು, ಟೈಟ್ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಡಿಕೆಶಿ ಅವರು ಹೇಳಿರುವುದರಲ್ಲಿ ತಪ್ಪೇನಿಲ್ಲ. ಸಿಎಂ, ಡಿಸಿಎಂ ಸಿನಿಮಾದವರನ್ನು ತಮ್ಮ ಮನೆಯವರು ಅಂದುಕೊಂಡಿದ್ದಾರೆ. ಅವರು ಚಿತ್ರರಂಗಕ್ಕೆ ದೂರದವರಲ್ಲ, ತುಂಬಾ ಹತ್ತಿರದವರು. ಸಿನಿಮಾದವರು ಅವರಿಗೆ ಆತ್ಮೀಯರು. ಅವರು ಹೇಳಿರುವುದು ದೊಡ್ಡ ವಿಷಯ ಆಗಲ್ಲ, ದೊಡ್ಡ ವಿಷಯ ಮಾಡುತ್ತಿದ್ದಾರೆ ಅಷ್ಟೇ. ಅವರು ಹೇಳಿರುವುದರಲ್ಲಿ ಹಾಗೂ ಕೇಳಿರುವುದರಲ್ಲಿ ತಪ್ಪಿಲ್ಲ. ನೀರಿನ ವಿಚಾರದಲ್ಲಿ ಎಲ್ಲರೂ ಬರಬೇಕಿತ್ತು ಅನ್ನೋದು ಅವರ ಉದ್ದೇಶ, ಚಲನಚಿತ್ರೋತ್ಸವಕ್ಕೂ ಕೂಡ ಎಲ್ಲರೂ ಬರಲಿ ಅನ್ನೋದಷ್ಟೇ ಅವರ ಉದ್ದೇಶವಾಗಿತ್ತು ಎಂದರು.
ಇನ್ನೂ ಇದೇ ವೇಳೆ ಬೆಂಗಳೂರು ಫಿಲ್ಮ್‌ಫೆಸ್ಟ್‌ಗೆ ಕೊನೆ ಕ್ಷಣದಲ್ಲಿ ಆಹ್ವಾನ ನೀಡಿದ ಆರೋಪ ವಿಚಾರವಾಗಿ, ಕಲಾವಿದರಿಗೆ ಕೊನೆಯ ಕ್ಷಣದಲ್ಲಿ ಆಮಂತ್ರಣ ಹೋಗಿಲ್ಲ. ಚಲನಚಿತ್ರೋತ್ಸವ ಜನವರಿ 6ಕ್ಕೆ ನಿರ್ಧಾರವಾಗಿದೆ. ಪಾಸ್ ಬಗ್ಗೆ ಕೇಳೋಕೆ ಆಗುತ್ತದೆ. ಉದ್ಘಾಟನೆ ಬಗ್ಗೆ ಗೊತ್ತಾಗುವುದಿಲ್ಲವಾ? ಬೇರೆಯವರ ಮೇಲೆ ಗೂಬೆ ಕೂರಿಸುವುದಲ್ಲ. ಆಹ್ವಾನ ಪತ್ರಿಕೆ ಎಲ್ಲೆಲ್ಲಿ ಹೋಗಿದೆ ಎನ್ನುವ ಲಿಸ್ಟ್ ತೆಗೆದರೆ ಎಲ್ಲ ಗೊತ್ತಾಗುತ್ತದೆ. ಎಲ್ಲರೂ ಬರಬೇಕು, ಇದು ನಮಗಾಗಿ ನಡೆಯುತ್ತಿರುವುದು ಎಂದು ತಿಳಿದುಕೊಳ್ಳಬೇಕು. ಹಿಂದಿನ ವರ್ಷಗಳ ಲಿಸ್ಟ್ ತೆಗಿತೀನಿ, ನೋಡೋಣ ಯರ‍್ಯಾರು ಬಂದಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಕೊಡಗಿನಲ್ಲೂ ಹಕ್ಕಿ ಜ್ವರದ ಭೀತಿ – ಬಿರಿಯಾನಿ ಹೋಟೆಲ್‌ಗಳು ಖಾಲಿ ಖಾಲಿ!