ಚಿಕ್ಕೋಡಿ: ಭಾರತ (Bharatha) ಎಂದು ಹೆಸರು ಕೊಟ್ಟದ್ದೇ ಮುಸಲ್ಮಾನ ದೊರೆಗಳು ಎಂದು ಕಾಂಗ್ರೆಸ್ ಮುಖಂಡರು (Congress Leaders) ಹೇಳಿದರೂ ಅಚ್ಚರಿಯಿಲ್ಲ ಎಂದು ಶಾಸಕ ಹಾಗೂ ಬಿಜೆಪಿ (BJP) ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ವ್ಯಂಗ್ಯವಾಡಿದರು.
ಉಡುಪಿ ಕೃಷ್ಣ ಮಠ (Udupi Krishna Math) ಜಾಗ ಕೊಟ್ಟದ್ದು ಮುಸ್ಲಿಂ ರಾಜರು ಎಂಬ ಕಾಂಗ್ರೆಸ್ ಮುಖಂಡ ಮಿಥುನ್ ರೈ(Mithun Rai) ಹೇಳಿಕೆಗೆ ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ (Chikkodi) ತಾಲೂಕಿನ ಅಂಕಲಿ (Ankali) ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು: ಮಿಥುನ್ ರೈ ವಿವಾದ
ಬರೀ ಕೃಷ್ಣ ಮಠ ಅಲ್ಲ, ಭಾರತ ಎಂದು ಹೆಸರು ಕೊಟ್ಟದ್ದು ಮುಸಲ್ಮಾನ ದೊರೆಗಳು. ಮುಸಲ್ಮಾನ ದೊರೆಗಳೇ ರಾಮ ಮಂದಿರ ನಿರ್ಮಾಣ ಮಾಡಿದ್ದು. ಮುಸಲ್ಮಾನ ದೊರೆಗಳೇ ಕಾಶಿ ವಿಶ್ವನಾಥನ ಪ್ರತಿಷ್ಠಾಪನೆ ಮಾಡಿದ್ದು ಎಂದು ಹೇಳಿದರೂ ಅಚ್ಚರಿ ಪಡಬೇಕಿಲ್ಲ. ಸುಳ್ಳು ಮತ್ತು ಕಾಂಗ್ರೆಸ್ (Congress) ಒಂದೇ ನಾಣ್ಯದ ಮುಖಗಳು. ಸುಳ್ಳನ್ನು ಸತ್ಯದ ರೀತಿಯಲ್ಲಿ ಹೇಳುವುದು ಅವರಿಗಿರುವ ಕಾಯಿಲೆ ಎಂದು ಟೀಕೆ ಮಾಡಿದರು. ಇದನ್ನೂ ಓದಿ: ಮಾನವ ಹಕ್ಕುಗಳನ್ನು ಬಳಸಿ ನಮ್ಮಲ್ಲಿ ಇರಲು ಸಾಧ್ಯವಿಲ್ಲ: ಅಕ್ರಮ ವಲಸಿಗರ ನಿಯಂತ್ರಣಕ್ಕೆ ಮುಂದಾದ ಬ್ರಿಟನ್
ಸಿ.ಟಿ.ರವಿ ನೀಡಿದ್ದ ಸೀರೆ ಸುಟ್ಟು ಹಾಕಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರೆಲ್ಲಾ ಡ್ರಾಮಾ (Drama) ಮಾಡುತ್ತಾರೆ. ಆ ರೀತಿ ನಾವು ಸೀರೆ ಕೊಡುತ್ತಿಲ್ಲ. ಅವೆಲ್ಲಾ ಕಾಂಗ್ರೆಸ್‌ನವರ ಹಳೇ ಡ್ರಾಮಾ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಹೆಂಡತಿ ಕೋಪ ಮಾಡಿಕೊಂಡಿದ್ದಾಳೆ – ಅತ್ತೆ ಮನೆಯಲ್ಲಿ ಹೋಳಿ ಆಚರಿಸೋಕೆ 10 ದಿನ ರಜೆ ಕೇಳಿದ ಇನ್ಸ್‌ಪೆಕ್ಟರ್