ರಾಮನಗರ: ನೂತನ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಶಿಕ್ಷಣ ಇಲಾಖೆಯಲ್ಲಿ ಕಳೆದ ಕೆಲ ವರ್ಷಗಳಿಂದ ನಿಂತಿದ್ದ ವರ್ಗಾವಣೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಶಿಕ್ಷಣ ಇಲಾಖೆಯ (Education Department) ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ಕೌನ್ಸಿಲಿಂಗ್ ಮೂಲಕ 30 ಸಾವಿರಕ್ಕೂ ಅಧಿಕ ಶಿಕ್ಷಕರ ವರ್ಗಾವಣೆಗೆ ಕಳೆದ ಜೂನ್‍ನಲ್ಲಿ ಕೌನ್ಸಿಲಿಂಗ್ ನಡೆದಿತ್ತು.
ಕೌನ್ಸಿಲಿಂಗ್‍ನಲ್ಲಿ ತಮಗೆ ಬೇಕಾದ ಊರುಗಳಿಗೆ ಶಿಕ್ಷಕರು ವರ್ಗಾವಣೆ ಮಾಡಿಸಿಕೊಂಡಿದ್ರು. ಇಷ್ಟು ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ಮಾಡಿದ ಸರ್ಕಾರ ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಂಡು 43 ಸಾವಿರ ಅತಿಥಿ ಶಿಕ್ಷಕರ ನೇಮಕವನ್ನ ಸಹ ಮಾಡಿಕೊಂಡಿದೆ. ಇದರಿಂದ ಕನಿಷ್ಠ 10 ವರ್ಷಗಳ ಕಾಲ ಒಂದೇ ಕಡೆ ಸೇವೆ ಸಲ್ಲಿಸಿದ್ದ ತಮ್ಮ ಊರು ಕುಟುಂಬವನ್ನ ಬಿಟ್ಟಿದ್ದ ಶಿಕ್ಷಕರು ತಮಗೆ ಬೇಕಾದ ಜಾಗಗಳಿಗೆ ವರ್ಗಾವಣೆ ಪತ್ರ ಪಡೆದು ಅಲ್ಲಿ ಸೇವೆ ಶುರು ಮಾಡಿದ್ದಾರೆ.
ಇಡೀ ರಾಜ್ಯಕ್ಕೆ ಅನ್ವಯವಾಗಿದ್ದ ರೂಲ್ಸ್ ಮಾನ್ಯ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತವರು ಕ್ಷೇತ್ರ, ಸಂಸದ ಡಿಕೆ ಸುರೇಶ್ (DK Suresh) ಅವರ ಸ್ವಕ್ಷೇತ್ರವಾದ ಕನಕಪುರ ತಾಲೂಕಿನ ಶಿಕ್ಷಕರಿಗೆ ಮಾತ್ರ ವರ್ಗಾವಣೆ ಆಗಿದ್ರು ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಇದಕ್ಕೆ ಕಾರಣವಾಗಿರೋದು ಡಿಸಿಎಂ ಡಿಕೆಶಿ, ಮತ್ತು ಸಂಸದ ಡಿ.ಕೆ ಸುರೇಶ್, ತಮ್ಮ ತಾಲೂಕಿನ ಮಕ್ಕಳ ಹಿತ ದೃಷ್ಟಿಯಿಂದ ಶೈಕ್ಷಣಿಕ ವರ್ಷ ಮುಗಿಯೋವರೆಗೆ ಬಿಡುಗಡೆ ಮಾಡದಂತೆ ತಡೆಹಿಡಿದಿದ್ದಾರೆ ಅನ್ನೋ ಮಾತುಗಳು ತಾಲೂಕಿನ ಶಿಕ್ಷಕರಿಂದ ಕೇಳಿ ಬರುತ್ತಿದೆ. ಇದನ್ನೂ ಓದಿ: ಬೆಂಗಳೂರಲ್ಲಿ 12 ಪಬ್, ಬಾರ್‌ಗಳಿಗೆ ಬೀಗ
ಸಿಎಂಗೂ ಈ ಬಗ್ಗೆ ಗಮನಕ್ಕೆ ತಂದಿರೋ ಶಿಕ್ಷಕರು, ಶಿಕ್ಷಣ ಸಚಿವರಿಗೂ, ವರ್ಗಾವಣೆ ತಡೆದಿರೋದನ್ನ ತಿಳಿಸಿದ್ದಾರೆ. ಸಿಎಂ ಖುದ್ದು ಆದೇಶ ಹೊರಡಿಸಿದ್ದು, ಅಕ್ಟೋಬರ್ 5 ರೊಳಗೆ ಅತಿಥಿ ಶಿಕ್ಷಕರ ನೇಮಕ ಮಾಡಿಕೊಂಡು ವರ್ಗಾವಣೆ ಆಗಿರೋ ಶಿಕ್ಷಕರನ್ನ ಬಿಡುಗಡೆ ಮಾಡಿ ಎಂದು ಸೂಚಿಸಿದ್ದಾರೆ. ಆದರೂ ಇನ್ನೂ ಇಲ್ಲಿನ ಶಿಕ್ಷಕರಿಗೆ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಡಿಸಿಎಂ ಹಾಗೂ ಸಂಸದ ಡಿಕೆ ಸುರೇಶ್ ಅವ್ರಿಗೂ ಶಿಕ್ಷಕರು ಮನವಿ ಮಾಡಿದ್ದು, ಅದಷ್ಟು ಬೇಗ ಬಿಡುಗಡೆಯ ಪತ್ರ ನೀಡಿ ಎಂದು ಕೇಳಿಕೊಂಡಿದ್ದಾರೆ.
Web Stories