ಹಿಟ್ ಆಂಡ್ ರನ್ ಪ್ರಶ್ನೆಯೇ ಇಲ್ಲ, ಹನಿಟ್ರ್ಯಾಪ್‌ ಹಿಂದಿರುವವರ ಹೆಸರು ಬರಬೇಕು: ಸತೀಶ್‌ ಜಾರಕಿಹೊಳಿ

Public TV
1 Min Read
Satish Jarkiholi

ಬೆಳಗಾವಿ: ರಾಜಣ್ಣ (KN Rajanna) ಈಗಾಗಲೇ ಹೇಳಿದ್ದಾರೆ. ಈ ಪ್ರಕರಣದಲ್ಲಿ ಹಿಟ್‌ ಆಂಡ್‌ ರನ್‌ (Hit and Run) ಪ್ರಶ್ನೆಯೇ ಇಲ್ಲ. ಹನಿಟ್ರ್ಯಾಪ್‌ (Honeytrap) ಹಿಂದೆ ಯಾರಿದ್ದಾರೆ ಅವರ ಹೆಸರು ಹೊರಗಡೆ ಬರಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

ರಾಜಣ್ಣ ಹನಿಟ್ರಾಪ್ ವಿಚಾರದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಆಗಾಗ ಸಿಡಿ ಸದ್ದು ಆಗುತ್ತಿರುತ್ತದೆ ಸರಿಯಾದ ದಾರಿಯಲ್ಲಿ ತನಿಖೆ ಆಗಬೇಕು ಎಂದರು.

ಸಹೋದರ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಹೀಗೆ ಆಯ್ತು. ಚರ್ಚೆಯಾಯಿತು, ತನಿಖೆಯಾಯಿತು. ಆದರೆ ಮಾಡಿದವರು ಯಾರು ಅಂತ ಬರಲಿಲ್ಲ. ಕೇವಲ ಇಬ್ಬರು ಮೂವರನ್ನು ಬಂಧಿಸಿದರು‌, ಆ ಪ್ರಕರಣದ ಹಿಂದೆ ಯಾರಿದ್ದರು ಎಂಬುದರ ಕುರಿತು ತಾರ್ಕಿಕ ಅಂತ್ಯ ಆಗಲಿಲ್ಲ‌ ಎಂದು ತಿಳಿಸಿದರು.

ಗಂಭೀರ ಸಮಸ್ಯೆ ಕುರಿತು ಕಾಂಗ್ರೆಸ್‌ ಹೈಕಮಾಂಡ್‌ ಸೀರಿಯಸ್‌ ಆಗಿ ಅವರಾಗಿಯೇ ವರದಿ ತರಿಸಿಕೊಳ್ಳಬೇಕು. ರಾಜಣ್ಣ ಹನಿಟ್ರ್ಯಾಪ್‌ ಗಾಳಿಯಲ್ಲಿ ಹೇಳುವ ಮಾತಿಲ್ಲ, ತನಿಖೆಯಾಗಲಿ, ಸ್ಚಪಕ್ಷೀಯರು ಇರಬಹುದು ಬೇರೆ ಪಕ್ಷದವರು ಇರಬಹುದು. ಇವರೇ, ಅವರೇ ಎಂದು ಹೇಳಲು ಆಗುವುದಲ್ಲ ಎಂದರು.

 

ದೂರು ನೀಡಿದರೆ ಗ್ರಹ ಮಂತ್ರಿಗಳು ತನಿಖೆ ಮಾಡುವುದಾಗಿ ಹೇಳಿದ್ದಾರೆ. ರಾಜಕಾರಣಿಗಳ ಹೆಸರಿನಲ್ಲಿ ಕರ್ನಾಟಕದ ಹೆಸರನ್ನು ಹಾಳು ಮಾಡುವುದು ಬೇಡ. ಹೋರಾಟ ಮಾಡುವುದಾರೆ ಮಾಡಿ ಆದರೆ ಇಂಥ ಹೀನ ಕೃತ್ಯಮಾಡಿಸಿ ಬಲಿಪಶು ಮಾಡಬೇಡಿ ಎಂದು ಹೇಳಿದರು.

Share This Article