ರಾಮನಗರ: ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಅನ್ನೋ ಪ್ರಶ್ನೆಯೇ ಇಲ್ಲ ಎಂದು ರಾಮನಗರ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಹಾಗೂ ಹೆಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸ್ಪಷ್ಟಪಡಿಸಿದ್ದಾರೆ.
Advertisement
`ಕುಮಾರಸ್ವಾಮಿ (HD Kumaraswamy) ಕುಟುಂಬದ ವಂಶಪಾರಂಪರ್ಯ ರಾಜಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ (Election) ಜನತೆ ಅಂತ್ಯ ಹಾಡಲಿದ್ದಾರೆ’ ಎಂಬ ಎಂಎಲ್‌ಸಿ ಸಿ.ಪಿ ಯೋಗೇಶ್ವರ್ (CP Yogeshwara) ಹೇಳಿಕೆಗೆ ತಿರುಗೇಟು ನೀಡಿದ ನಿಖಿಲ್, ಹಿಂದೆ ರಾಮನಗರದಲ್ಲಿ ರಾಜು ಎಂಬವರಿಗೆ ಟಿಕೆಟ್ ನೀಡಿ ಶಾಸಕರಾಗಿ ಮಾಡಿದ್ವಿ. ಆದ್ರೆ ಅವರಿಗೆ ಕೃತಜ್ಞತೆಯೇ ಇಲ್ಲ. ಈಗ ಕಾಂಗ್ರೆಸ್ (Congress) ಸೇರಿಕೊಂಡಿದ್ದಾರೆ. ಚನ್ನಪಟ್ಟಣದಲ್ಲಿ ಸಿಂ.ಲಿಂ. ನಾಗರಾಜು ಎಂಬವರಿಗೆ ಟಿಕೆಟ್ ನೀಡಿದ್ದೆವು. ಸಿ.ಪಿ.ಯೋಗೇಶ್ವರ್ ಅವರಿಗೆ ಇದರ ಅರಿವು ಇಲ್ಲದಂತೆ ಕಾಣುತ್ತದೆ. ಬಿಜೆಪಿಯಲ್ಲಿ ಯಡಿಯೂರಪ್ಪ, ಈಶ್ವರಪ್ಪನವರ ಮಕ್ಕಳು ರಾಜಕೀಯದಲ್ಲಿದ್ದಾರೆ. ಡಿ.ಕೆ ಶಿವಕುಮಾರ್ (DK Shivakumar) ಅವರ ಮನೆಯಲ್ಲಿ ನಾಲ್ಕು ಜನ ಸದಸ್ಯರಿದ್ದಾರೆ. ಎಲ್ಲಾ ಪಕ್ಷದಲ್ಲೂ ಸಹ ಈ ವ್ಯವಸ್ಥೆ ಇದೆ. ಆದ್ರೆ ರಾಮನಗರದಲ್ಲಿ (Ramanagara) ಕುಟುಂಬ ರಾಜಕಾರಣ ಅನ್ನುವ ಪ್ರಶ್ನೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
Advertisement
Advertisement
`ಜೆಡಿಎಸ್ (JDS) ಪಂಚರತ್ನ ಯಾತ್ರೆ ಫೇಲ್ಯೂರ್’ ಎಂಬ ಸಿಪಿವೈ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿ.ಪಿ.ಯೋಗೇಶ್ವರ್ ಅವರಿಗೆ ಹತಾಶೆ ಉಂಟಾಗಿದೆ. ಹಣ ಕೊಟ್ರೂ ಸಹ ರಾಷ್ಟ್ರೀಯ ಪಕ್ಷಗಳಿಗೆ ಜನ ಸೇರುತ್ತಿಲ್ಲ. ಆದರೆ ಮಧ್ಯರಾತ್ರಿವರೆಗೂ ಜನ ಕುಮಾರಣ್ಣನ ಸ್ವಾಗತ ಮಾಡ್ತಿದ್ದಾರೆ. ಪಂಚರತ್ನ ಯೋಜನೆ ಬಗ್ಗೆ ಮಾಹಿತಿ ಪಡೆದುಕೊಳ್ತಿದ್ದಾರೆ. ಸಿಪಿವೈ 18 ವರ್ಷಗಳ ಕಾಲ ಚನ್ನಪಟ್ಟಣ ಶಾಸಕರಾಗಿದ್ದರು. ಆದ್ರೆ ಕ್ಷೇತ್ರದ ರಸ್ತೆಗಳ ಬಗ್ಗೆ ಗಮನ ಹರಿಸಿರಲಿಲ್ಲ. ಕುಮಾರಣ್ಣನ ಕಾಲದಲ್ಲಿ ಈಗ ಪ್ರತಿಯೊಂದು ರಸ್ತೆ ಬಹಳ ಅಚ್ಚುಕಟ್ಟಾಗಿದೆ. 130 ಕೆರೆಗಳು ತುಂಬಿವೆ. ಚನ್ನಪಟ್ಟಣ ಅಭಿವೃದ್ಧಿ ವಿಚಾರದಲ್ಲಿ ಯೋಗೇಶ್ವರ್ ಅವರಿಗೆ ಮಾಹಿತಿಯೇ ಇಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ನಾನು ಕನಸಿನಲ್ಲೂ ಯೋಚನೆ ಮಾಡಿರಲಿಲ್ಲ: ನಿಖಿಲ್ ಕುಮಾರಸ್ವಾಮಿ
Advertisement
ಪಂಚರತ್ನ ಯಾತ್ರೆ ತಡೆಯಲು ಕೋವಿಡ್ ನೆಪ:
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ನಿಖಿಲ್, ಕೋವಿಡ್ ವಿಚಾರವಾಗಿ ಸರ್ಕಾರ ನಿಯಮ ಮಾಡಿದ್ರೆ ಎಲ್ಲರಿಗೂ ಅನ್ವಯವಾಗುವಂತಿರಬೇಕು. ಆದರೆ ಈ ಸರ್ಕಾರ ಪಂಚರತ್ನ ಯಾತ್ರೆ ತಡೆಯಲು ಕೋವಿಡ್ ನೆಪ ಹೇಳುತ್ತಿದೆ. ಬಿಜೆಪಿಯವರು ಸಹ ಸಂಕಲ್ಪಯಾತ್ರೆ ಮಾಡ್ತಿದ್ದಾರೆ. ಅದರಿಂದ ಏನೂ ಆಗೋದಿಲ್ವಾ? ಏನೇ ನಿಯಮ ಮಾಡಿದ್ರೂ ಅದು ಎಲ್ಲರಿಗೂ ಅನ್ವಯವಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: JDS ವಂಶಪಾರಂಪರ್ಯ ಶೀಘ್ರ ಅಂತ್ಯ – 2023ಕ್ಕೆ ಜನ ಬುದ್ದಿ ಕಲಿಸ್ತಾರೆ: ಸಿಪಿ ಯೋಗೇಶ್ವರ್