ಬೆಂಗಳೂರು: ವಿಜಯೇಂದ್ರ (BY Vijayendra) ಭೇಟಿಯಾಗೋ ಅವಶ್ಯಕತೆ ನನಗಿಲ್ಲ, ವಿಜಯೇಂದ್ರ ಬಂದು ನನ್ನ ಜೊತೆ ಮಾತನಾಡಿಸಿದರೂ ನಾನು ಮಾತನಾಡುವುದಿಲ್ಲ ಎಂದು ವಿಜಯಪುರ (Vijayapura) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅಮಿತ್ ಶಾ ಭೇಟಿ ಮಾಡಿ ದೂರು ನೀಡಿರುವ ವಿಚಾರವಾಗಿ, ನಮಗೆ ಹೊಸ ವರ್ಷ ಯುಗಾದಿ. ವಿಜಯೇಂದ್ರ ಅವರಿಗೆ ಯಾವುದು ಹೊಸ ವರ್ಷ ಎಂದು ನನಗೆ ಗೊತ್ತಿಲ್ಲ. ಪಕ್ಷದಿಂದ ನನ್ನ ಉಚ್ಚಾಟನೆ ಆಗುವುದಿಲ್ಲ. ಉಚ್ಚಾಟನೆ ಎನ್ನುವುದು ಮಾಧ್ಯಮಗಳು ಸೃಷ್ಟಿ ಮಾಡಿರುವುದು. ನನ್ನನ್ನ ಯಾಕೆ ಉಚ್ಚಾಟನೆ ಮಾಡುತ್ತಾರೆ? ನಾನು ಯಾರ ಜೊತೆಯೂ ಅಡ್ಜೆಸ್ಟ್ಮೆಂಟ್ ಮಾಡಿಕೊಂಡಿಲ್ಲ. ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಜೊತೆ ನನ್ನ ಅಡ್ಜೆಸ್ಟ್ಮೆಂಟ್ ಇಲ್ಲ. ವಿಜಯೇಂದ್ರಗೆ ದೆಹಲಿ ನಾಯಕರು ಪದೇ ಪದೇ ಅಪಾಯಿಟ್‌ಮೆಂಟ್ ಕೊಡುತ್ತಿದ್ದಾರೆ ಅದಕ್ಕೆ ಹೋಗುತ್ತಾರೆ. ಆದರೆ ನಾವು ಯಾರ ಅಪಾಯಿಟ್‌ಮೆಂಟ್ ಕೇಳಿಲ್ಲ. ನಾವು ಯಾರ ಮೇಲೂ ದೂರು ಕೊಡುವುದಿಲ್ಲ. ನಮ್ಮದು ಜನರ ಆಂದೋಲ. ನಮ್ಮದು ದಿಲ್ಲಿ ಆಂದೋಲ ಅಲ್ಲ. ನನ್ನಂತ ಪಕ್ಷ ನಿಷ್ಠ ಯಾರು ಇಲ್ಲ. ನಾನು ಕಾಂಗ್ರೆಸ್ ಭಿಕ್ಷೆಯಿಂದ ಶಾಸಕನಾಗಿಲ್ಲ, ನಾನು ಹಿಂದೂಗಳಿಂದ ಬಿಜೆಪಿಯಿಂದ ಶಾಸಕ ಆಗಿರೋದು. ವಿಜಯೇಂದ್ರ ಭೇಟಿಯಾಗುವ ಅವಶ್ಯಕತೆ ನನಗೆ ಇಲ್ಲ. ಯತ್ನಾಳ್ ಏನು ಎಂದು ಎಲ್ಲರಿಗೂ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.ಇದನ್ನೂ ಓದಿ: ಸರಸಕ್ಕೆ ಒಪ್ಪದ ಪತ್ನಿ, ಮಗಳ ಮೇಲೆ ರೇಪ್‌ಗೆ ಯತ್ನ – ಸಿಟ್ಟಿಗೆದ್ದು ಪತಿ ಕೊಂದ ಮಹಿಳೆ
ಇದೇ ವೇಳೆ ವಿಜಯೇಂದ್ರ ಮಾತನಾಡಿಸಿದರೆ ಮಾತನಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾಕೆ ವಿಜಯೇಂದ್ರ ಜೊತೆ ಮಾತನಾಡಬೇಕು? ಹೈಕಮಾಂಡ್ ಕರೆದು ಮಾತನಾಡಿಸಿದರೆ ಮಾತನಾಡುತ್ತೇನೆ. ನಮಗೆ ಏನು ಅನ್ಯಾಯ ಆಗಿದೆ ಎಂದು ನಮಗೆ ಗೊತ್ತಿದೆ. ನಮ್ಮ ನೋವು ನಮಗೆ ಇದೆ. ಹೈಕಮಾಂಡ್ ನಾಯಕರು ಕರೆದು ಮಾತಾಡಲಿ ಎಂದು ಹೇಳುತ್ತೇವೆ ಎಂದಿದ್ದಾರೆ.
ಇದೇ ವೇಳೆ ವಕ್ಫ್ ವಿಚಾರವಾಗಿ ಮಾತನಾಡಿ, ವಕ್ಫ್ ಎರಡನೇ ಹಂತದ ಪ್ರವಾಸ ನಾಳೆ ನಿರ್ಧಾರ ಮಾಡುತ್ತೇವೆ. ನಾಳೆ ಸಭೆಯಲ್ಲಿ ನಿರ್ಧಾರ ಆಗುತ್ತದೆ. ನಮ್ಮ ನಡೆ ಜನರ ಕಡೆ. ನಮ್ಮ ನಡೆ ದೆಹಲಿ ಕಡೆಯಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಬಾಂಗ್ಲಾ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಜಾಮೀನು ಅರ್ಜಿ ವಜಾ