-ಬಡಾವಣೆ, ಮುಖ್ಯರಸ್ತೆಗೆ ಹೋದರೂ ಬೀದಿ ದೀಪಗಳಿಲ್ಲ
ರಾಯಚೂರು: ಇತ್ತೀಚಿಗೆ ಕಲಬುರಗಿಯಲ್ಲಿ (Kalaburagi) ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಯಚೂರು (Raichuru) ನಗರಸಭೆಯನ್ನು ಪಾಲಿಕೆಯಾಗಿ ಸರ್ಕಾರ ಮೇಲ್ದರ್ಜೆಗೆ ಏರಿಸಿದೆ. ನಗರದ ಜನರು ಇದಕ್ಕೆ ಒಂದೆಡೆ ಖುಷಿ ವ್ಯಕ್ತಪಡಿಸಿದರೆ, ಇನ್ನೊಂದೆಡೆ ನಗರಸಭೆಯ ನಿರ್ಲಕ್ಷ್ಯಕ್ಕೆ ನಿತ್ಯ ಹಿಡಿಶಾಪ ಹಾಕುವಂತಾಗಿದೆ. ರಾತ್ರಿಯಾದರೆ ಸಾಕು ಬಡಾವಣೆಗಳಲ್ಲಿ ಜನ ಓಡಾಡಲು ಹೆದರುವ ಪರಸ್ಥಿತಿಯಿದೆ. ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳಿಗೆ ನಗರಸಭೆ ನಿರ್ಲಕ್ಷ್ಯ ಕಾರಣವಾಗುತ್ತಿದೆ.
Advertisement
ಬಿಸಿಲನಾಡು ರಾಯಚೂರಿನ ಜಿಲ್ಲಾ ಕೇಂದ್ರ ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಗರದ ಯಾವುದೇ ಬಡಾವಣೆ, ಮುಖ್ಯರಸ್ತೆಗೆ ಹೋದರೂ ಬೀದಿ ದೀಪಗಳಿಲ್ಲ. ಕೇವಲ ಕಂಬಗಳು ಮಾತ್ರ ನಿಂತಿವೆ. ಬೀದಿದೀಪಗಳು ಹಾಳಾಗಿ ಸುಮಾರು ತಿಂಗಳುಗಳೇ ಕಳೆದರೂ ಜಿಲ್ಲಾಡಳಿತ ಹಾಗೂ ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸಂಜೆಯಾದರೆ ಸಾಕು ಜನ ಮನೆಯಿಂದ ಹೊರಬರಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿಗೆ ಫುಲ್ ಡಿಮ್ಯಾಂಡ್ – 69 ಪ್ರಶಸ್ತಿಗೆ 2,000ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ
Advertisement
Advertisement
ಮಹಿಳೆಯರಿಗಂತೂ ಸುರಕ್ಷತೆಯೇ ಇಲ್ಲವಾಗಿದೆ. ಕಳೆದ ಕೆಲ ತಿಂಗಳುಗಳಿಂದ ನಗರದಲ್ಲಿ ಕಳ್ಳತನ, ಅಪಹರಣ ಯತ್ನ, ದರೋಡೆಯಂತ ಪ್ರಕರಣಗಳು ನಡೆಯುತ್ತಿದ್ದರೂ ನಗರಸಭೆ ಕಣ್ಮುಚ್ಚಿ ಕುಳಿತಿದೆ. ಇನ್ನೂ ಸಿಸಿ ಕ್ಯಾಮರಾಗಳನ್ನು ಅಲ್ಲಲ್ಲಿ ಅಳವಡಿಸಿದ್ದರೂ ಯಾವುದೇ ಕೆಲಸ ಮಾಡುತ್ತಿಲ್ಲ. ನಗರಸಭೆಯನ್ನು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಿದ್ದರೂ ಜನರಲ್ಲಿ ಖುಷಿ ಕಾಣುತ್ತಿಲ್ಲ. ಜನರನ್ನು ಕಳ್ಳಕಾಕರಿಂದ ರಕ್ಷಿಸಲು, ರಾತ್ರಿ ವೇಳೆ ಸುರಕ್ಷಿತವಾಗಿ ಓಡಾಡಲು ಕೂಡಲೇ ಬೀದಿದೀಪಗಳನ್ನು ಅಳವಡಿಸಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಬೀದಿದೀಪಗಳ ನಿರ್ವಹಣೆಗಾಗಿ ಫೆಬ್ರವರಿಯಲ್ಲಿ ಒಂದುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿತ್ತು. ಗುತ್ತಿಗೆದಾರರು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆ ಗುತ್ತಿಗೆ ರದ್ದು ಮಾಡಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಮಾತನಾಡಿ, ಹೊಸ ಟೆಂಡರ್ ಕರೆಯುತ್ತೇವೆ. ಇನ್ನೂ ಎರಡು ಮೂರು ದಿನಗಳಲ್ಲಿ ಹೊಸ ಟೆಂಡರ್ ಕರೆಯುತ್ತಿದ್ದೇವೆ. ಆದಷ್ಟು ಬೇಗ ಬೀದಿದೀಪ ಅಳವಡಿಸುತ್ತೇವೆ ಎಂದು ಹೇಳಿದ್ದಾರೆ
ಒಟ್ಟಿನಲ್ಲಿ ನಗರಸಭೆಯ ನಿಧಾನಗತಿಯ ಧೋರಣೆ ಜನರಲ್ಲಿ ಅಸುರಕ್ಷಿತೆಯ ಭಾವನೆ ಮೂಡಿಸಿದೆ. ರಾತ್ರಿಯಾದರೆ ಸಾಕು ಜನ ರಸ್ತೆಯಲ್ಲಿ ಓಡಾಡಲು ಹೆದರುವ ಪರಸ್ಥಿತಿ ಉಂಟಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಬೀದಿದೀಪಗಳ ಅಳವಡಿಕೆಗೆ ಮುಂದಾಗಬೇಕಿದೆ.ಇದನ್ನೂ ಓದಿ: ಇಡೀ ವಿಶ್ವದಲ್ಲಿ ಜನರ ಖಾತೆಗೆ ಹಣ ಹಾಕುತ್ತಿರುವ ಏಕೈಕ ಸರ್ಕಾರ ನಮ್ಮದು – ಯತೀಂದ್ರ