ಕೋಲಾರ: ರಾಜ್ಯದಲ್ಲಿ ಯಾವ ನಾಯಕತ್ವ ಬದಲಾವಣೆ ಇಲ್ಲ, ಎಲ್ಲಾ ಊಹಾಪೋಹ ಅಷ್ಟೇ ಕೇಂದ್ರದ ವರಿಷ್ಠರು ನಮ್ಮ ಪಕ್ಷಕ್ಕೆ ಬದಲಾವಣೆ ಮಾಡುವ ಶಕ್ತಿ ಇದೆ ಎಂದು ಹೇಳಿದ್ದಾರೆ ಅಷ್ಟೆ. ಆದರೆ ಬದಲಾವಣೆ ಮಾಡ್ತೀನಿ ಅಂತಾ ಹೇಳಿಲ್ಲ ಎಂದು ಸಚಿವ ಮುನಿರತ್ನ ಹೇಳಿದ್ರು.
Advertisement
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹುಣಸಿಕೋಟಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಲ್ಲುಕುಟಿಕರ ಸಮಸ್ಯೆ ಆಲಿಸುವ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳಷ್ಟು ಕಡೆ ಶಾಸಕರ ಬದಲಾವಣೆ ಮಾಡದ್ದೀವಿ. ಬಹಳಷ್ಟು ಕಡೆ ಸಚಿವರಿಗೆ ಟಿಕೆಟ್ ಕೊಡದೆ ಇದ್ದೀವಿ ಎನ್ನಲಾಗಿದೆ. ಹಾಗಾಗಿ ಆಯಾ ಕಾಲಕ್ಕೆ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತೆ ಕರ್ನಾಟಕದಲ್ಲಿ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ರು. ಇದನ್ನೂ ಓದಿ: ನಾಯಕತ್ವ ಬದಲಾವಣೆ ಅಂದ್ರೆ ಯಾರ ಬದಲಾವಣೆ?: ಬಿಜೆಪಿಯಲ್ಲಿ ಬಿಎಲ್‍ಎಸ್ ಬಿಸಿ
Advertisement
Advertisement
ಚುನಾವಣೆ ಸಂದರ್ಭದಲ್ಲಿ ಬದಲಾವಣೆ ಮಾಡುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಿಮವಾಗಿ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ರಾಜ್ಯದ ಎಲ್ಲಾ ರಾಜ್ಯಗಳಲ್ಲೂ ಮಾಡಿ ಯಶಸ್ಸು ಕಂಡಿದ್ದಾರೆ. ಕುಟುಂಬ ರಾಜಕಾರಣ ವಿರೋಧ ಮಾಡುವವರಲ್ಲಿ ನಾನೂ ಸಹ ಒಬ್ಬ. ನೀವು ಆಯಿತು, ನಿಮ್ಮ ಮಕ್ಕಳು ಆಯಿತು, ಇನ್ನು ಎಷ್ಟು ವರ್ಷ ನಡೆಸಬೇಕು. ಏಕೆ ಬೇರೆಯವರು ಬರಬಾರದು..? ಜಾತಿ ರಾಜಕಾರಣ, ಕುಟುಂಬ ರಾಜಕಾರಣ ಹೋದರೆ ಮಾತ್ರ ದೇಶಕ್ಕೆ ಮತ್ತು ರಾಜ್ಯಕ್ಕೆ ಒಳ್ಳೆಯದು ಆಗುತ್ತೆ ಎಂದು ಹೇಳಿದರು.
Advertisement
ಕುಟುಂಬ ರಾಜಕಾರಣ ಮುಂದುವರಿಸಿಕೊಂಡು ಹೋದರೆ ಯಾವುದೇ ಪಕ್ಷಕ್ಕೂ ಒಳ್ಳೆಯದು ಆಗುವುದಿಲ್ಲ. ಪ್ರಧಾನ ಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಲೋಕಸಭಾ ಸದಸ್ಯರ ಮಕ್ಕಳಿಗೆ ಟಿಕೆಟ್ ಕೊಡಲಿಲ್ಲ, ಕುಟುಂಬ ರಾಜಕಾರಣಕ್ಕೆ ನಮ್ಮ ಪಕ್ಷ ಒಪ್ಪುದಿಲ್ಲವೆಂದು ಸ್ವತಃ ಪಿಎಂ ಅವರೇ ತಿಳಿಸಿದ್ದಾರೆ ಎಂದು ಹೇಳಿದ್ರು.