ಹಾಸನ: ಇತ್ತೀಚೆಗಷ್ಟೇ ಫ್ರಾನ್ಸ್‌ನಿಂದ ಆಗಮಿಸಿ ಜ್ವರದಿಂದ ಬಳಲುತ್ತಿದ್ದ ಹಾಸನದ ಯುವಕನಲ್ಲಿ ಕೊರೊನಾ ಲಕ್ಷಣಗಳಿಲ್ಲ ಎಂದು ಪ್ರಯೋಗಾಲಯದ ವರದಿ ಬಂದಿದ್ದು, ಹಾಸನದ ಜನ ನಿರಾಳರಾಗಿದ್ದಾರೆ.
ಫ್ರಾನ್ಸ್‌ನಿಂದ ಹಾಸನಕ್ಕೆ ಆಗಮಿಸಿದ ನಂತರ ಯುವಕನಲ್ಲಿ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿತ್ತು. ಹೀಗಾಗಿ ಯುವಕನಿಗೆ ಹಿಮ್ಸ್ ನ ವಿಶೇಷ ವಾರ್ಡ್‍ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಯುವಕನಿಗೆ ಕೊರೊನಾ ಸೋಂಕು ಏನಾದರೂ ತಗುಲಿದೆಯೇ ಎಂದು ಪರೀಕ್ಷಿಸಲು ಯುವಕನ ರಕ್ತದ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು.
Advertisement
Advertisement
ಇದೀಗ ಪ್ರಯೋಗಾಲಯದಿಂದ ವರದಿ ಬಂದಿದ್ದು, ಯುವಕನ ದೇಹದಲ್ಲಿ ಯಾವುದೇ ಕೊರೊನಾ ವೈರಸ್ ಅಂಶ ಪತ್ತೆಯಾಗಿಲ್ಲ ಎಂದು ತಿಳಿದಿದೆ. ಇದರಿಂದ ಹಾಸನದ ಜನತೆ ನಿರಾಳರಾಗಿದ್ದಾರೆ.
Advertisement
ಸದ್ಯ ಕರ್ನಾಟಕದಲ್ಲೂ ಕೊರೊನಾ ಸೋಂಕಿತ ಶಂಕಿತರ ಕೇಸ್‍ಗಳು ವರದಿ ಆಗುತ್ತಿದ್ದರೂ ಇದೇ ಮೊದಲ ಬಾರಿಗೆ ಕೊರೊನಾದ ಮೊದಲ ಪಾಸಿಟಿವ್ ಪ್ರಕರಣ ಬೆಂಗಳೂರಲ್ಲಿ ವರದಿ ಆಗಿದೆ. ಮಾರ್ಚ್ 1ರಂದು ಅಮೆರಿಕದಿಂದ ಬಂದಿದ್ದ ಬೆಂಗಳೂರು ಮೂಲದ ಟೆಕ್ಕಿಯಲ್ಲಿ ಕೊರೋನಾ ಜ್ವರ ದೃಢಪಟ್ಟಿದೆ.