ಮಂಡ್ಯ: ರಾಜ್ಯದಲ್ಲಿ ಹೃದಯಾಘಾತ (Heart Attack) ಸುದ್ದಿ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಇತ್ತ ಹೃದಯ ಸಂಬಂಧಿ ರೋಗಗಳಿಗೆ (Heart Disease) ಚಿಕಿತ್ಸೆ ನೀಡಬೇಡಬೇಕಾದ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಹೃದಯ ವಿಭಾಗವೇ ಇಲ್ಲ. ಇಲ್ಲಿಗೆ ಬರುವ ಹೃದಯ ಸಂಬಂಧಿ ರೋಗಿಗಳು ಬೇರೆ ಜಿಲ್ಲೆಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸದ್ಯ ರಾಜ್ಯದಲ್ಲಿ ಹಾಸನ (Hassan) ಜಿಲ್ಲೆಯಲ್ಲಿ ಹೃದಯಾಘಾತದಿಂದ (Heart Attack) ಸರಣಿಯಾಗಿ ಸಾವನ್ನಪ್ಪುತ್ತಿದ್ದಾರೆ. ಹಾಸನ ಮಾತ್ರವಲ್ಲ ರಾಜ್ಯದ ಹಲವೆಡೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ವಿಚಾರದಲ್ಲಿ ಸಕ್ಕರೆ ನಾಡು ಮಂಡ್ಯ ಜಿಲ್ಲೆ ಏನು ಹೊರತಾಗಿಲ್ಲ. ಸದ್ಯ ಮಂಡ್ಯ ಮಿಮ್ಸ್ ಆಸ್ಪತ್ರೆ (MIMS Hospital) ಒಂದರಲ್ಲಿಯೇ ಕಳೆದ 3 ತಿಂಗಳಲ್ಲಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹೃದಯಾಘಾತದಿಂದ ಮನೆಯಲ್ಲಿ ಹಾಗೂ ಬೇರೆ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಇನ್ನೂ ಹೆಚ್ಚಿದೆ. ಇದನ್ನೂ ಓದಿ: ಬೆಂಗಳೂರು ಸ್ಫೋಟದ ಸೂತ್ರಧಾರಿ ಅರೆಸ್ಟ್ – ಶಂಕಿತರ ಮನೆಯಲ್ಲಿ ಭಾರೀ ಪ್ರಮಾಣದ ದೇಶ ವಿನಾಶಕಾರಿ ವಸ್ತುಗಳು ಪತ್ತೆ
ಮೊದಲೆಲ್ಲಾ ಮಿಮ್ಸ್ ಆಸ್ಪತ್ರೆಗೆ ಎದೆ ನೋವು ಎಂದು ಕಡಿಮೆ ಸಂಖ್ಯೆಯಲ್ಲಿ ಬರ್ತಾ ಇದ್ದರು. ಆದರೆ ಇದೀಗ ಗಣನೀಯ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಪ್ರಸ್ತುತ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ, ಆದರೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಹೃದಯದ ವಿಭಾಗವೇ ಇಲ್ಲ, ಹೀಗಾಗಿ ಹೃದಯ ಸಂಭವಿಸಿದ ವೈದ್ಯರು ಕೂಡ ಇಲ್ಲ. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಗೆ ಮಹಿಳಾ ಸಾರಥ್ಯ?
ಎದೆ ನೋವು ಎಂದು ಮಿಮ್ಸ್ ಆಸ್ಪತ್ರೆಗೆ ಹೋದರೆ ಕೇವಲ ಇಸಿಜಿ, ಎಕೋ, ಸಿಪಿಕೆಎಂಬಿ ಪರೀಕ್ಷೆಯಷ್ಟೇ ಮಾಡ್ತಾರೆ. ಹೆಚ್ಚಿನ ಚಿಕಿತ್ಸೆ ಬೇಕು ಅಂದ್ರೆ ಮೈಸೂರು ಅಥವಾ ಬೆಂಗಳೂರು ಆಸ್ಪತ್ರೆಗೆ ಇಲ್ಲಿನ ವೈದ್ಯರು ಚಿಕಿತ್ಸೆಗೆ ರೆಫರ್ ಮಾಡುತ್ತಾರೆ. ಇದನ್ನೂ ಓದಿ: ಟ್ರಿನಿಡಾಡ್‌ನ ಸಾಂಪ್ರದಾಯಿಕ ಸೊಹರಿ ಎಲೆಯಲ್ಲಿ ಭೋಜನ ಸವಿದ ಪ್ರಧಾನಿ ಮೋದಿ
ಹೃದಯಾಘಾತವಾದ ವ್ಯಕ್ತಿಗೆ ಒಂದೂವರೆ ಗಂಟೆಯ ಅವಧಿಯ ಒಳಗೆ ಚಿಕಿತ್ಸೆ ನೀಡಿದರೆ ಆ ವ್ಯಕ್ತಿಯನ್ನು ಬದುಕಿಸುವ ಅವಕಾಶ ಇರುತ್ತೆ. ಆದ್ರೆ ಮಂಡ್ಯದ ಮಿಮ್ಸ್‌ನಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ವೈದ್ಯರೇ ಇಲ್ಲ ಎಂದರೆ ದುರದೃಷ್ಟಕರ ಸಂಗತಿ. ಈಗಲಾದರು ಮಂಡ್ಯ ಮಿಮ್ಸ್‌ನಲ್ಲಿ ಹೃದಯದ ವಿಭಾಗ ಓಪನ್ ಆಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.