CinemaKarnatakaLatestMain PostTV Shows

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಇನ್ಮುಂದೆ ಅನಿರುದ್ಧ ಫೋಟೋನೂ ಇರಲ್ಲ

ಕೊನೆಗೂ ಅನಿರುದ್ಧ (Aniruddha) ಅವರನ್ನು ಜೊತೆ ಜೊತೆಯಲಿ ಧಾರಾವಾಹಿಯಿಂದ (Serial) ಸಂಪೂರ್ಣವಾಗಿ ಹೊರ ಹಾಕಿದಂತಾಗಿದೆ. ಈವರೆಗೂ ಟೈಟಲ್ ಕಾರ್ಡ್ ನಲ್ಲಿ ಮತ್ತು ಕಥಾಭಾಗದಲ್ಲೂ ಅನಿರುದ್ಧ ಅವರು ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಸಂಪೂರ್ಣವಾಗಿ ಧಾರಾವಾಹಿಯಿಂದ ಅವರನ್ನು ಹೊರ ಹಾಕಲಾಗಿದೆ. ಈಗ ಜೊತೆ ಜೊತೆಯಲಿ (Jote Joteyali) ಧಾರಾವಾಹಿಯ ಟೈಟಲ್ ಕಾರ್ಡ್ ಬದಲಾಗಿದೆ. ಆದರೆ, ಕಥೆಯಲ್ಲಿ ಅವರು ಉಳಿದುಕೊಳ್ಳುವ ಸಾಧ್ಯತೆ ಇತ್ತು. ಅದನ್ನೂ ಇಲ್ಲದಂತೆ ಮಾಡಿದೆ ಟೀಮ್.

ಕಥೆಯ ಪ್ರಕಾರ ಹರೀಶ್ ರಾಜ್ ನಿರ್ವಹಿಸುತ್ತಿದ್ದ ಪಾತ್ರ ಸತ್ತಿದೆ. ಅನು (Anu) ಪ್ರಕಾರ ಅನಿರುದ್ಧ ನಟಿಸುತ್ತಿದ್ದ ಆರ್ಯವರ್ಧನ್ ಪಾತ್ರ ಸತ್ತಿದೆ. ಹಾಗಾಗಿ ಮನೆಯಲ್ಲಿ ಆರ್ಯವರ್ಧನ್ ಫೋಟೋಗೆ ಪೂಜೆ ಮತ್ತು ಹಾರ ಹಾಕಿದ್ದ ಸನ್ನಿವೇಶವೊಂದು ಇತ್ತು. ಆರ್ಯವರ್ಧನ್ (Aryavardhan) ಸತ್ತಿದ್ದಾನೆ ಅಂದರೆ, ಅನು ಮನೆಯಲ್ಲಿ ಅವನ ಫೋಟೋ ಇರದೇ ಇದ್ದರೆ ಹೇಗೆ? ಒಂದು ವೇಳೆ ಫೋಟೋವಿದ್ದರೆ ನೋಡುಗರಿಗೆ ಕನ್ಫೂಷನ್, ಈ ಕಡೆ ಅನಿರುದ್ಧ ಅವರ ಫೋಟೋ. ಆದರೆ, ಪಾತ್ರ ಮಾಡುತ್ತಿರುವುದು ಸದ್ಯ ಹರೀಶ್ ರಾಜ್. ಈ ಗೊಂದಲವೇ ಬೇಡವೆಂದು ಬೇರೆ ಉಪಾಯ ಮಾಡಿದೆ ಟೀಮ್. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

ಆರ್ಯವರ್ಧನ್ ಸತ್ತಿದ್ದಾನೆ ಎಂದೇ ಈವರೆಗೂ ಕಥಾ ನಾಯಕಿ ಅನು ಅಂದುಕೊಂಡಿದ್ದಾಳೆ. ಹಾಗಾಗಿಯೇ ಆರ್ಯವರ್ಧನ್ ಫೋಟೋವನ್ನು ಅವರ ಮನೆಯಲ್ಲಿ ಹಾಕಿ, ಅದಕ್ಕೆ ಹೂವಿನ ಹಾರವನ್ನೂ ಹಾಕಲಾಗಿತ್ತು. ಅದನ್ನು ನೋಡಿದ ಅನು, ಆರ್ಯವರ್ಧನ್ ಫೋಟೋಗೆ ಹಾರ ಹಾಕುವುದನ್ನು ನೋಡಲು ನನಗೆ ಇಷ್ಟವಿಲ್ಲ ಎನ್ನುವ ಡೈಲಾಗ್ ಹೇಳಿಸುವ ಮೂಲಕ ಆರ್ಯವರ್ಧನ್ ಫೋಟೋವನ್ನೂ ತೆಗಿಸಿ ಹಾಕಿದ್ದಾಳೆ. ಅಲ್ಲಿಗೆ ಅನಿರುದ್ಧ ಸಂಪೂರ್ಣವಾಗಿ ಧಾರಾವಾಹಿಯಿಂದ ಹೊರ ನಡೆದಂತಾಗಿದೆ.

ಇದೀಗ ಹೊಸ ಆರ್ಯವರ್ಧನ್ ಆಗಿ ಹರೀಶ್ ರಾಜ್ (Harish Raj) ಪ್ರವೇಶ ಮಾಡಿದ್ದಾರೆ. ಇವರೇ ಆರ್ಯವರ್ಧನ್ ಎಂದು ಒಪ್ಪಿಸುವ ಜವಾಬ್ದಾರಿ ಇನ್ಮುಂದೆ ಟೀಮ್ ನದ್ದು. ಅದಕ್ಕೆ ಯಾವ ರೀತಿಯ ಕಥೆಯನ್ನು ಹೊಸೆಯುತ್ತಾರೆ ಕಾದು ನೋಡಬೇಕು. ಏನೇ ಆಗಲಿ, ಈವರೆಗೂ ಅನಿರುದ್ಧ ಅವರೇ ಆರ್ಯವರ್ಧನ್ ಆಗಿಯೇ ಇದ್ದರು. ಇದೀಗ ಎಲ್ಲವೂ ಬದಲಾಗಿದೆ. ಕಥೆ ಮತ್ತು ಪಾತ್ರ ಕೂಡ ಬದಲಾವಣೆಗೆ ತೆರೆದುಕೊಂಡಿದೆ.

Live Tv

Leave a Reply

Your email address will not be published.

Back to top button