CinemaKarnatakaLatestMain PostSandalwoodTV Shows

‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

ಬಿಗ್ ಬಾಸ್ ಓಟಿಟಿ ಮುಗಿದ ಒಂದು ವಾರದ ಗ್ಯಾಪ್ ನಂತರ ಬಿಗ್ ಬಾಸ್ ಸೀಸನ್ 9 ಶುರುವಾಗುತ್ತಿದೆ. ಸೆ.24 ಕ್ಕೆ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಕಾಲಿಡಲಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಗೆ ಆಯ್ಕೆಯಾದವರು ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ಅದರಲ್ಲೂ ಹಳೆ ಮತ್ತು ಹೊಸ ಸ್ಪರ್ಧಿಗಳು ಈ ಬಾರಿ ಮನೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತದೆ. ಹಾಗೊಂದು ವೇಳೆ ಏನಾದರೂ ಮಾಜಿಗಳಿಗೂ ಅವಕಾಶ ಸಿಕ್ಕರೆ ಬ್ರಹ್ಮಾಂಡ ಗುರೂಜಿಯನ್ನು ಒಳಗೆ ಕಳುಹಿಸಿ ಎಂದು ಹೇಳುತ್ತಿದ್ದಾರೆ ನೋಡುಗರು.

ಈಗಾಗಲೇ ಜಿಂಗಲಕಾ ಲಕಾ ಲಕಾ ಅನ್ನುತ್ತಾ ಬಿಗ್ ಬಾಸ್ ಓಟಿಟಿಗೆ ಕಾಲಿಟ್ಟಿದ್ದ ಆರ್ಯವರ್ಧನ್ ಗುರೂಜಿ ಕೂಡ ಬಿಗ್ ಬಾಸ್ 9 ನಲ್ಲಿ ಭಾಗಿ ಆಗುತ್ತಿರುವುದರಿಂದ ಗುರೂಜಿಗಳ ಕಾಂಬಿನೇಷನ್ ಸಖತ್ತಾಗಿ ಇರಲಿದೆ ಎನ್ನುವುದು ಪ್ರೇಕ್ಷಕರು ಊಹೆ. ಅಲ್ಲದೇ, ಇಬ್ಬರೂ ಉತ್ತರ ದಕ್ಷಿಣ ಧೃವಗಳು ಆಗಿರುವುದರಿಂದ ಒಳ್ಳೆಯ ಮನರಂಜನೆಯೇ ಪ್ರೇಕ್ಷಕರಿಗೆ ಸಿಗಲಿದೆ ಎನ್ನುವ ಅಂದಾಜು ನೋಡುಗರದ್ದು. ಹಾಗಾಗಿ ಮತ್ತೆ ಬ್ರಹ್ಮಾಂಡ ಗುರೂಜಿಯನ್ನು ಮನೆ ಒಳಗೆ ಕಳುಹಿಸಿ ಎಂದು ನೆಟ್ಟಿಗರು ವಾಹಿನಿಯನ್ನು ಕೇಳುತ್ತಿದ್ದಾರೆ. ಇದನ್ನೂ ಓದಿ:ಟಿವಿ ಬಿಗ್ ಬಾಸ್ ಸೀಸನ್ 9ಕ್ಕೆ ಭರ್ಜರಿ ತಯಾರಿ: ಹೇಗಿದೆ ಗೊತ್ತಾ ದೊಡ್ಮನೆ?

ಈ ನಡುವೆ ಸೀಸನ್ 9ಗೆ ಯಾರೆಲ್ಲ ದೊಡ್ಮನೆ ಪ್ರವೇಶ ಮಾಡಲಿದ್ದಾರೆ ಎನ್ನುವ ಪಟ್ಟಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಯಾರು ಹೋಗುತ್ತಾರೋ, ಯಾರು ಗಾಸಿಪ್ ಕಾಲಂನಲ್ಲೇ ಉಳಿಯುತ್ತಾರೋ ಕಾದು ನೋಡಬೇಕು. ಆದರೆ, ಈ ಬಾರಿ ಹೊಸ ಬಗೆಯ ಸ್ಪರ್ಧಿಗಳನ್ನೇ ಆಯ್ಕೆ ಮಾಡಿದ್ದಾರೆ ಎನ್ನುವ ಮಾಹಿತಿಯೂ ಇದೆ. ಜೊತೆಗೆ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಮತ್ತು ಸಾನ್ಯ ಐಯರ್ ಆಯ್ಕೆ ಆಗಿರುವುದರಿಂದ ಅವರು ಹೇಗೆ ಪೈಪೋಟಿ ನೀಡಲಿದ್ದಾರೆ ಎನ್ನುವ ಕುತೂಹಲವೂ ಇದೆ.

ಈಗಾಗಲೇ ದೊಡ್ಮನೆ ಒಳಗೆ ಹೋಗುವವರು ಅಂತಿಮ ಪಟ್ಟಿ ಸಿದ್ಧವಾಗಿದೆ. ನಾಳೆಯಿಂದಲೇ ಅಥವಾ ಶನಿವಾರ ಬೆಳಗ್ಗೆಯಿಂದ ಗ್ರ್ಯಾಂಡ್ ಓಪನಿಂಗ್ ಎಪಿಸೋಡ್ ಗಳು ಚಿತ್ರೀಕರಣವಾಗಲಿವೆ. ಶನಿವಾರ ಸಂಜೆ ಹೊತ್ತಿಗೆ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲ ಹೋಗಬಹುದು ಎನ್ನುವ ಅರ್ಧ ಮಾಹಿತಿ, ರಾತ್ರಿ ಒಳಗೆ ಪೂರ್ಣ ಮಾಹಿತಿ ಹೊರ ಬರಲಿದೆ.

Live Tv

Leave a Reply

Your email address will not be published.

Back to top button