ರಾಮನಗರ: ರಾಜ್ಯದಲ್ಲಿ ಕೆಟ್ಟ ಸರ್ಕಾರ ಇದೆ, ಇದನ್ನು ತೆಗೆಯಬೇಕು. ಅದಕ್ಕೆ ಮೈತ್ರಿ (Alliance) ಅವಶ್ಯಕತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (H.D.Kumaraswamy) ಹೇಳಿಕೆ ನೀಡಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಮೈತ್ರಿ ಬಗ್ಗೆ ಈಗಲೇ ಯಾವುದೇ ಚರ್ಚೆ ಮಾಡಿಲ್ಲ. ಮುಂದಿನ ಸೆ.21ರ ಬೆಳಗ್ಗೆ ದೆಹಲಿಗೆ (Delhi) ಹೋಗುತ್ತಿದ್ದೇನೆ. ಏನು ಚರ್ಚೆ ಆಗುತ್ತೆ ಎಂದು ನೋಡೋಣ. ಸರ್ಕಾರ ತೆಗೆಯಬೇಕು ಅಂದರೆ ನಾಳೆನೇ ಆಪರೇಷನ್ ಮಾಡುತ್ತೇವೆ ಅಂತಲ್ಲ. ಕೆಟ್ಟ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಅರ್ಥ. ಅದೇನೋ ಕಾಂಗ್ರೆಸ್‌ನವರೂ (Congress) ಆಪರೇಷನ್ ಮಾಡುತ್ತಿದ್ದಾರಂತೆ. ಬಿಜೆಪಿ, ಜೆಡಿಎಸ್ ಅವರನ್ನು ಕರೆದುಕೊಳ್ಳುತ್ತಿದ್ದಾರಂತೆ, ಹೋಗುವವರು ಹೋಗಲಿ ಸಂತೋಷ ಎಂದು ತಿಳಿಸಿದರು. ಇದನ್ನೂ ಓದಿ: NDRF ನಿಯಮದ ಪ್ರಕಾರ 6 ಸಾವಿರ ಕೋಟಿ ಬರ ಪರಿಹಾರಕ್ಕೆ ವರದಿ ಸಲ್ಲಿಕೆ: ಕೃಷ್ಣಭೈರೇಗೌಡ
Advertisement
Advertisement
ಚನ್ನಪಟ್ಟಣದಲ್ಲಿ ಸಂಸದ ಡಿ.ಕೆ.ಸುರೇಶ್ (DK Suresh) ಜನಸಂಪರ್ಕ ಸಭೆ ನಡೆಸುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ವ್ಯಕ್ತಿಗೆ ಆ ಪವರ್ ಇದೆಯಾ ಎಂದು ಪ್ರಶ್ನಿಸಿದರು. ಸಂಸದರು ಡಿಸಿ ಕಚೇರಿಯಲ್ಲಿ ಕೂತು ಅಭಿವೃದ್ಧಿ ಬಗ್ಗೆ ಮಾಹಿತಿ ಪಡೆಯಬೇಕು. ಆದರೆ ಅಧಿಕಾರಿಗಳನ್ನು ಕರೆದುಕೊಂಡು ಗ್ರಾಮ ಪಂಚಾಯ್ತಿಗೆ ಹೋಗುವ ಪವರ್ ಇಲ್ಲ. ಈ ಬಗ್ಗೆ ಹಕ್ಕುಚ್ಯುತಿ ಮಂಡಿಸುತ್ತೇನೆ. ನಾನು ಎಂಪಿ ಆಗಿದ್ದಾಗ ಅವರ ಅಣ್ಣ ಸಾತನೂರಿಗೆ ಹೋಗಲು ಬಿಡಲಿಲ್ಲ. ಈಗ ಇವರು ಹೇಗೆ ಹೋಗಿ ಸಭೆ ಮಾಡ್ತಿದ್ದಾರೆ ಎಂದು ಡಿ.ಕೆ.ಬ್ರದರ್ಸ್‌ಗೆ ಟಾಂಗ್ ನೀಡಿದರು. ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಟ್ಟು ಸುಪ್ರೀಂನಲ್ಲಿ ವಾದ ಮಾಡಲು ಏನಿದೆ?: ಬೊಮ್ಮಾಯಿ
Advertisement
Web Stories