ಚಿಕ್ಕಮಗಳೂರು: ರಾಜ್ಯದಲ್ಲಿನ ಕೋಮು ಸಂಘರ್ಷ ಹಾಗೂ ಜಾತಿ ದ್ವೇಷದ ಹೆಸರಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯಿಂದ ನಗರಸಭೆ ಸದಸ್ಯರು ಆತಂಕಗೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಗನ್ ಮ್ಯಾನ್ ಕೇಳಿದ್ದಾರೆ.
ನಗರಸಭೆಯ 8ನೇ ವಾರ್ಡಿನ ಜೆಡಿಎಸ್ ಸದಸ್ಯ ಎ.ಸಿ.ಕುಮಾರ್ ಗನ್ ಮ್ಯಾನ್ ಕೋರಿ ಎಸ್‌ಪಿ ಅಕ್ಷಯ್‍ಗೆ ಪತ್ರ ಬರೆದಿದ್ದಾರೆ. ನಗರಸಭೆಯಲ್ಲಿ ಈ ಹಿಂದೆ ಹಾಗೂ ಈಗ ನಡೆಯುತ್ತಿರುವ ಕಾನೂನುಬಾಹಿರ ಕಾಮಗಾರಿಗಳು, ಟೆಂಡರ್‌ಗಳು, ಅಕ್ರಮ ನೇಮಕಾತಿ, ಕಾನೂನು ಬಾಹಿರವಾಗಿ ಇಟ್ಟಿರುವ ಖಾತೆಗಳು, ಕಾನೂನು ಉಲ್ಲಂಘಿಸಿ ನಿರ್ಮಿಸುತ್ತಿರುವ ಅನಧಿಕೃತ ಕಟ್ಟಡಗಳು, ಸರ್ಕಾರಿ ಆಸ್ತಿ ಒತ್ತುವರಿಗಳ ಬಗ್ಗೆ ಮಾಹಿತಿ ಹಕ್ಕಿನಡಿ ದಾಖಲೆಗಳನ್ನು ಪಡೆದು ಅಕ್ರಮ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದೇನೆ. ನಗರದ ಜನತೆಗೂ ಕೂಡ ನಗರಸಭೆಯಲ್ಲಿನ ಭ್ರಷ್ಟಾಚಾರದ ಮಾಹಿತಿಯನ್ನು ತಿಳಿಸುತ್ತಿದ್ದೇನೆ. ಇದನ್ನೂ ಓದಿ: ಕಳ್ಳ-ಪೊಲೀಸ್ ಆಟವಾಡುತ್ತಾ ನೆರೆ ಮನೆಯ ಬಾಲಕನನ್ನು ಕೊಂದ ಬಿಜೆಪಿ ಮುಖಂಡನ ಮಗ
Advertisement
Advertisement
ಹಾಗಾಗಿ, ನನ್ನ ಮೇಲೆ ಜಾತಿ ನಿಂದನೆ ಕಾಯ್ದೆಯಡಿ ಸುಳ್ಳು ದೂರು ದಾಖಲಿಸಿದ್ದು, ನಗರಸಭೆ ಪೌರಾಯುಕ್ತರು ಹಾಗೂ ಅಧ್ಯಕ್ಷರು ಸಿಬ್ಬಂದಿಗಳನ್ನು ಪ್ರಚೋದಿಸಿ ನನ್ನ ವಿರುದ್ಧ ದೂರು ತೆಗೆದುಕೊಂಡಿದ್ದಾರೆ. ನಾನು ಮಾಹಿತಿ ನೀಡಿರುವ ಅಕ್ರಮ ಕಟ್ಟಡಗಳ ಮಾಲೀಕರು ನನ್ನ ವಿರುದ್ಧ ದೂರು ನೀಡುವಂತೆ ಎತ್ತಿಕಟ್ಟಿದ್ದಾರೆ. ನನ್ನ ವಾಸದ ಮನೆಯನ್ನು ಕೂಡ ಅಕ್ರಮವಾಗಿ ಕಟ್ಟಿದ್ದೀರಿ ಎಂದು ಗುರು ಅರ್ಜಿಯನ್ನು ಪಡೆದುಕೊಂಡು ನನ್ನ ವಾಸದ ಮನೆಗೆ ನೋಟಿಸ್ ನೀಡಿದ್ದಾರೆ.
Advertisement
Advertisement
ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಹಾಗೂ ನಗರದಲ್ಲಿ ನಡೆಯುತ್ತಿರುವ ನನ್ನ ವಿರುದ್ಧದ ಪಿತೂರಿಯಿಂದ ಅಸುರಕ್ಷತೆಯ ವಾತಾವರಣ ನಿರ್ಮಾಣವಾಗಿದೆ. ನನಗೆ ನೀವು ಗನ್ ಮ್ಯಾನ್ ನೀಡಿ ಕಾನೂನುಬದ್ಧ ರಕ್ಷಣೆ ನೀಡಬೇಕೆಂದು ಎಸ್‍ಪಿಗೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಭಾವನಾತ್ಮಕ ವಿಷಯ ಕೆದಕಿ ಕೆಲ ಪಕ್ಷಗಳು ರಾಜಕೀಯ ಲಾಭ ಪಡೆಯಲು ಹೊರಟಿವೆ: ಹೆಚ್‍ಡಿಕೆ