ಧರ್ಮಶಾಲಾ: ನ್ಯೂಜಿಲೆಂಡ್ (New Zealand) ವಿರುದ್ಧ ಭಾನುವಾರ ನಡೆದ ವಿಶ್ವಕಪ್ (World Cup 2023) ರೋಚಕ ಪಂದ್ಯದಲ್ಲಿ 274 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೊನೆಗೂ ಕಿವೀಸ್ ವಿರುದ್ಧ ಗೆದ್ದು ಜಯದ ಓಟ ಮುಂದುವರಿಸಿತು. ಆದ್ರೆ ಕೊನೆಯವರೆಗೂ ಹೋರಾಡಿ 4 ವಿಕೆಟ್‌ಗಳ ಜಯ ತಂದುಕೊಟ್ಟ ವಿರಾಟ್ ಕೊಹ್ಲಿ, ವಿಶ್ವಶ್ರೇಷ್ಠ ಚೇಸ್ ಮಾಸ್ಟರ್ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ಹಾಡಿ ಹೊಗಳಿದ್ದಾರೆ.
ಭಾನುವಾರ (ಅಕ್ಟೋಬರ್ 22) ಧರ್ಮಶಾಲಾದ HPCA ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕಿವೀಸ್ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ 46 ರನ್ ಹಾಗೂ ಶುಭಮನ್ ಗಿಲ್ 26 ರನ್ ಗಳಿಸಿ ಮೊದಲ ವಿಕೆಟ್‌ಗೆ 71 ರನ್‌ಗಳ ಜೊತೆಯಾಟ ನೀಡಿದರೂ, 191 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಶ್ರೇಯಸ್ ಅಯ್ಯರ್ 33 ರನ್, ಕೆ.ಎಲ್ ರಾಹುಲ್ (KL Rahul) 27 ರನ್ ಗಳಿಸಿದ್ರೆ ಸೂರ್ಯಕುಮಾರ್ 2 ರನ್ ಗಳಿಸಿ ರನೌಟ್‌ಗೆ ತುತ್ತಾದರು. ಆ ಬಳಿಕ ಗೆಲ್ಲಿಸುವ ಜವಾಬ್ದಾರಿ ತೆಗೆದುಕೊಂಡ ಕೊಹ್ಲಿಗೆ ಜಡೇಜಾ ಸಾಥ್ ನೀಡಿದರು. ಕೊಹ್ಲಿ 95 ರನ್ ಗಳಿಸಿ ವಿಶ್ವದಾಖಲೆಯ ಶತಕದಿಂದ ವಂಚಿತರಾದರು. ನಂತರ 48ನೇ ಓವರ್‌ನ ಕೊನೇ ಎಸೆತವನ್ನು ರವೀಂದ್ರ ಜಡೇಜಾ ಬೌಂಡರಿ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿದರು.
ನ್ಯೂಜಿಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ಸಿಡಿಸಿದ 95 ರನ್‌ಗಳ ಪ್ರದರ್ಶನದ ಬಗ್ಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮಾತನಾಡಿದ್ದಾರೆ. ಇದನ್ನೂ ಓದಿ: ಹಮಾಸ್ ರಾಕೆಟ್ ಲಾಂಚರ್‌ಗಳು ಧ್ವಂಸ – ಇಸ್ರೇಲ್ ಬಳಸಿದ Iron Sting ಬಾಂಬ್ ಎಷ್ಟು ಪವರ್‌ಫುಲ್?
ಆಧುನಿಕ ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿಗಿಂತ ಅತ್ಯುತ್ತಮ ಫಿನಿಷರ್ ಆಟಗಾರ ಮತ್ತೊಬ್ಬರು ಸಿಗುವುದಿಲ್ಲ. 5 ರಿಂದ 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಬ್ಯಾಟರ್ ಗಳಷ್ಟೇ ಅಲ್ಲ. ಎಲ್ಲ ವಿಕೆಟ್‌ಗಳ ಆಧಾರದಲ್ಲೂ ವಿರಾಟ್ ಕೊಹ್ಲಿ ಚೇಸಿಂಗ್ ಮಾಸ್ಟರ್ ಆಗಿದ್ದಾರೆ ಎಂದು ಗಂಭೀರ್ ಹಾಡಿ ಹೊಗಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 40 ಎಸೆತಗಳಲ್ಲಿ 4 ಬೌಂಡರಿ 4 ಸಿಕ್ಸರ್ ಸಹಿತ 46 ರನ್ ಸಿಡಿಸಿದ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರ ಆಟವನ್ನು ಕೂಡ ಗೌತಮ್ ಗಂಭೀರ್ ಹೊಗಳಿದ್ದಾರೆ. ಇದನ್ನೂ ಓದಿ: Israel Hamas War: ಸಂಕಷ್ಟದಲ್ಲಿರುವ ಪ್ಯಾಲೆಸ್ತೀನಿಯರಿಗೆ ಭಾರತದಿಂದ ಮಾನವೀಯ ನೆರವು
Web Stories