ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡೋದಕ್ಕೆ ಎಂಜಿನಿಯರ್ ಗಳೇ ಇಲ್ಲ. ಇದ್ದ ಎಂಜಿನಿಯರ್ ಗಳು ಸ್ವರ್ಗದಂತಹ ಸ್ಥಳಕ್ಕೆ ಎಸ್ಕೇಪ್ ಆಗಿರುವ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
115ಕ್ಕೂ ಹೆಚ್ಚು ಎಂಜಿನಿಯರ್ ಗಳ ನಿಯೋಜನೆ ನೆಪದಲ್ಲಿ ಶಿಫ್ಟ್ ಮಾಡಲಾಗಿದೆ. ಬಿಬಿಎಂಪಿಯೇ ನಮಗೆ ಸ್ವರ್ಗ ಅಂತಾ ಡೆಪ್ಯುಟೇಶನ್ ಮೇಲೆ ಶಿಫ್ಟ್ ಆಗಿದ್ದು, ನಿಯೋಜನೆ ಆಗಿ 5 ವರ್ಷ ಕಳೆದರೂ ಬಿಬಿಎಂಪಿ ಬಿಡೋದಕ್ಕೆ ತಯಾರಿಲ್ಲ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
Advertisement
Advertisement
ನಿಯಮದ ಪ್ರಕಾರ ಕೇವಲ 3 ವರ್ಷ ಮಾತ್ರ ನಿಯೋಜನೆ ಮೇಲೆ ಹೋಗಬಹದು. ಆದರೂ 115ಕ್ಕೂ ಹೆಚ್ಚು ಎಂಜಿನಿಯರ್‍ಗಳು ಬಿಬಿಎಂಪಿಯಲ್ಲಿ ನಿಯೋಜನೆ ಮೇಲೆ ಇದ್ದಾರೆ. ಬಿಬಿಎಂಪಿಗೆ ಡೆಪ್ಯುಟೇಶನ್ ಮೇಲೆ ಹೋದ ಎಂಜಿನಿಯರ್ ಗಳಿಗೆ ರಾಜಕಾರಣಿಗಳ ಕೃಪಾಕಟಾಕ್ಷವಿದ್ದು, ಡೆಪ್ಯುಟೇಷನ್ ಅವಧಿ ಮೀರಿ ಬಿಬಿಎಂಪಿಯಲ್ಲೇ ಉಳಿದ ಎಂಜಿನಿಯರ್‍ಗಳ ಮೇಲೆ ಕ್ರಮ ಏಕಿಲ್ಲ ಅನ್ನೋ ಪ್ರಶ್ನೆಯೊಂದು ಮೂಡಿದೆ.