ಬೆಂಗಳೂರು: ಬಿಜೆಪಿ (BJP) ಕಚೇರಿ ಇರೋದು ಪಕ್ಷ ಸಂಘಟನೆಗೆ ಮಾತ್ರ, ಗಾಸಿಪ್‌ಗಳೆಲ್ಲ ಮನೆಗಳಲ್ಲಿ ಆಗೋದು ಅಂತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ತಿರುಗೇಟು ನೀಡಿದ್ದಾರೆ.
ಬಿಜೆಪಿ ಕಚೇರಿ ಗಾಸಿಪ್ ಕೇಂದ್ರ ಎಂಬ ರೇಣುಕಾಚಾರ್ಯ (Renukacharya) ಹೇಳಿಕೆಗೆ ತಿರುಗೇಟು ನೀಡಿದ ಯತ್ನಾಳ್, ಗಾಸಿಪ್‌ಗೆ ಅಂತಾನೇ ನಾಲ್ಕು ಬೇರೆ ಮನೆಗಳಿವೆ. ಅವರ ಮನೆಗಳಲ್ಲಿ ಗಾಸಿಪ್ ಸೃಷ್ಟಿ ಆಗ್ತಾವೆ ಅಲ್ಲ್ಯಾಕೆ ಹೋಗಿ ಗಾಸಿಪ್ ಮಾಡಬೇಕು? ಅಂತ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಹಲವು ವರ್ಷಗಳ ಹೆತ್ತವರ ಕನಸನ್ನು ಸಾಕಾರಗೊಳಿಸಿದ್ದೀರಿ- ಆನಂದ್ ಮಹೀಂದ್ರಾಗೆ ಪ್ರಜ್ಞಾನಂದ ಥ್ಯಾಂಕ್ಸ್
ಕೆಲವರು ಪಾರ್ಟಿ ಬಿಡ್ತೀವಿ ಅಂತ ಬೆದರಿಕೆ ಹಾಕೋದು ಸರಿಯಲ್ಲ. ಪಕ್ಷದಿಂದ ಗೆದ್ದಿದ್ದೀವಿ, ಮಂತ್ರಿಗಳಾಗಿದ್ದೀವಿ, ಸೋಲು-ಗೆಲುವು ಸಾಮಾನ್ಯ, ಸೋತಾಗ ಹತಾಶರಾಗೋದು ಬೇಡ. ಏನು ಕರ್ನಾಟಕದಲ್ಲಿ ಬಿಜೆಪಿ ಮುಗಿದೋಯ್ತಾ? ಬಿಜೆಪಿ ಒಳಗೆ ಅಸಮಾಧಾನ ಇರೋದು ನಿಜ. ಆದರೆ ಇಲ್ಲಿದ್ದುಕೊಂಡೇ ಪಕ್ಷದ ಬಗ್ಗೆ ಹೇಳಿಕೆ ಕೊಡೋದು ಸರಿಯಲ್ಲ ಅಂತ ಹೇಳಿದ್ದಾರೆ.
ಇನ್ನೂ ರೇಣುಕಾಚಾರ್ಯ ಪಕ್ಷ ಬಿಡ್ತಾರೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಅವರು ಪಕ್ಷ ಬಿಡೋದಿಲ್ಲ, ಯಾಕೋ ಅವರ ಮನಸ್ಸಿಗೆ ಬೇಜಾರಾಗಿದೆ. ಹೈಕಮಾಂಡ್ ಎಲ್ಲ ಗಮನಿಸ್ತಿದೆ, ಖಂಡಿತಾ ಒಳ್ಳೆಯ ದಿನ ಬರುತ್ತೆ. ಗಡಿಬಿಡಿ ಯಾಕೆ? ಜನ ರೆಸ್ಟ್ ಕೊಟ್ಟಿದ್ದಾರೆ ಸ್ವಲ್ಪ ದಿನ ರೆಸ್ಟ್ ಮಾಡಲಿ ಅಂತ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: AsiaCup 2023, ವಿಶ್ವಕಪ್ ಟೂರ್ನಿಗೆ ಹೊಸ ಜೆರ್ಸಿ ಅನಾವರಣ – ಮಾಸ್ ಲುಕ್‌ನಲ್ಲಿ ಪಾಕ್ ತಂಡ
ರೇಣುಕಾಚಾರ್ಯ ಲೋಕಸಭಾ ಟಿಕೆಟ್ ಕೇಳಿದ್ರಲ್ಲಿ ತಪ್ಪಿಲ್ಲ. ದಾವಣಗೆರೆ ಲೋಕಸಭೆಗೆ ಅಲ್ಲಿನ ಎಂಪಿ ನಿಲ್ಲಲ್ಲ ಅಂತಿದ್ದಾರೆ. ಹಾಗಾಗಿ ಟಿಕೆಟ್ ಕೇಳಿದ್ದಾರೆ, ಅದರಲ್ಲಿ ತಪ್ಪೇನಿದೆ? ಅವರಿಗೆ ಟಿಕೆಟ್ ಕೇಳುವ ಅಧಿಕಾರ, ಹಕ್ಕೂ ಎರಡೂ ಇದೆ. ಟಿಕೆಟ್ ಸಿಗುತ್ತೆ ಅನ್ನೋದಾದ್ರೆ ಹೋರಾಟ ಮಾಡಲಿ ಅಂತಾ ಹೇಳಿದ್ದಾರೆ.
Web Stories