ಮಂಡ್ಯ: ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದ ಒಳಗೆ ಗಂಧದ ಮರ ಕಡಿದು ಕಳವು ಮಾಡಲು ಯತ್ನಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ರಾತ್ರಿ ಕಳ್ಳರು ಅರಣ್ಯ ಇಲಾಖೆ ಕಚೇರಿ ಆವರಣಕ್ಕೆ ಬಂದು ಗರಗಸದಿಂದ ಮರವನ್ನು ಕತ್ತರಿಸಿದ್ದಾರೆ. ಈ ವೇಳೆ ಮರ ಬಿದ್ದ ಶಬ್ಧ ಕೇಳಿ ಅರಣ್ಯ ಇಲಾಖೆ ಸಿಬ್ಬಂದಿ ಓಡಿ ಬಂದಿದ್ದಾರೆ. ಸಿಬ್ಬಂದಿಯನ್ನು ನೋಡಿ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ.
ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಸಿಬ್ಬಂದಿ ಇರುವಾಗಲೇ ಗಂಧದ ಮರ ಕಳವಿಗೆ ಯತ್ನಿಸಿರುವುದು ಇದೀಗ ಟೀಕೆಗೆ ಗುರಿಯಾಗಿದೆ. ಕಚೇರಿ ಆವರಣದಲ್ಲೇ ಮರವನ್ನು ರಕ್ಷಿಸಲಾಗದ ಸಿಬ್ಬಂದಿ ಇನ್ನು ಅರಣ್ಯ ಪ್ರದೇಶದಲ್ಲಿ ಹೇಗೆ ಮರಗಳನ್ನು ರಕ್ಷಿಸುತ್ತಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.