ಚಿಕ್ಕೋಡಿ: ಅಪರಿಚಿತ ಮಹಿಳೆಯೊಬ್ಬಳು ನರ್ಸ್ ವೇಷದಲ್ಲಿ ಬಂದು ನವಜಾತ ಶಿಶುವನ್ನು ತಾಯಿ ಮಡಿಲಿನಿಂದ ಕಳ್ಳತನ ಮಾಡಿ ಪರಾರಿಯಾದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ (Hospital) ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಗಂಡು ನವಜಾತ ಶಿಶುವೊಂದು ಜನಿಸಿತ್ತು. ನರ್ಸ್ (Nurse) ವೇಷದಲ್ಲಿ ಆಸ್ಪತ್ರೆಗೆ ಎಂಟ್ರಿ ಕೊಟ್ಟ ಅಪರಿಚಿತ ಮಹಿಳೆಯೊಬ್ಬಳು ಮಗುವನ್ನು ತೂಕ ಮಾಡಿಸಬೇಕು ಎಂದು ಹೇಳಿ ತಾಯಿ ಮಡಿಲಿನಿಂದ ಕಳ್ಳತನ ಮಾಡಿ ಪರಾರಿಯಾಗಿದ್ದಾಳೆ. ಇತ್ತ ಅರ್ಧ ಘಂಟೆ ಕಳೆದರೂ ಮಗು ತಂದು ಕೊಡದ ನರ್ಸ್ ಬಗ್ಗೆ ಅನುಮಾನಗೊಂಡಿದ್ದಾರೆ. ಇದರಿಂದ ಪೋಷಕರು ಗಾಬರಿಗೊಂಡಾಗ ಆಸ್ಪತ್ರೆ ಸಿಬ್ಬಂದಿ ಎಚ್ಚೆತ್ತು ಅಥಣಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಉದ್ಯೋಗ ಇಲ್ಲದ್ದಕ್ಕೆ ಯುವಕರು ತಪ್ಪು ದಾರಿ ಹಿಡಿಯುತ್ತಿದ್ದಾರೆ: ಶಂಕಿತ ಉಗ್ರರು ಅರೆಸ್ಟ್ ಪ್ರಶ್ನೆಗೆ ನಲಪಾಡ್ ಉತ್ತರ
ಸ್ಥಳಕ್ಕೆ ಆಗಮಿಸಿದ ಅಥಣಿ ಪಿಎಸ್‍ಐ ಶಿವಶಂಕರ ಮುಖರಿ ಮಗು ಕಳೆದುಕೊಂಡ ಪೋಷಕರಿಂದ ಮಾಹಿತಿ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಸಿ ಟಿವಿಯನ್ನು ತಪಾಸಣೆ ನಡೆಸಿದ್ದಾರೆ. ಸಿಟಿ ಟಿವಿ ದೃಶ್ಯಾವಳಿಯಲ್ಲಿ ನರ್ಸ್ ವೇಷದಲ್ಲಿ ಮಹಿಳೆಯೊಬ್ಬಳು ಆಸ್ಪತ್ರೆಗೆ ಬಂದು ಮಗುವನ್ನು ಅಪಹರಿಸುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಥಣಿ ಪೊಲೀಸರು ಮಗು ಕದ್ದ ಕಳ್ಳಿಯನ್ನು ಹಿಡಿಯಲು ಬಲೆಬೀಸಿದ್ದಾರೆ. ಇದನ್ನೂ ಓದಿ: PayCM ಪೋಸ್ಟರ್‌ಗೆ ಸಿಎಂ ಗರಂ – ಎಫ್‌ಐಆರ್ ದಾಖಲು