ಬೆಂಗಳೂರು: ಮಾಜಿ ಮೇಯರ್ (Former Mayor) ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ (Theft) ಮಾಡಿರುವ ಘಟನೆ ಬೆಂಗಳೂರಿನ (Bengaluru) ಸಂಜಯನಗರದಲ್ಲಿ (Sanjay Nagar) ನಡೆದಿದೆ.
ನಗರದ ಆರ್‌ಎಂವಿ 2ನೇ ಹಂತದಲ್ಲಿರುವ ಮನೆಯಲ್ಲಿ ಘಟನೆ ನಡೆದಿದ್ದು, ಮನೆಯ ಸೆಕ್ಯೂರಿಟಿ ಗಾರ್ಡ್ ನರಬಹದ್ದೂರ ಶಾಯಿಯಿಂದ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಮಂಡ್ಯದಿಂದ ಸುಮಲತಾ ದೂರ; ಹೆಚ್‌ಡಿಕೆ ಪರ ಪ್ರಚಾರಕ್ಕಿಳಿಯದ ಸಂಸದೆ – ಬರ್ತಾರೆ ನೋಡೋಣ ಎಂದ ಮಾಜಿ ಸಿಎಂ
ಒಟ್ಟು 1,29,17,000 ಮೌಲ್ಯದ ಚಿನ್ನಾಭರಣ, ಬೆಳ್ಳಿ, ವಾಚ್‌ಗಳು ಹಾಗೂ ನಗದು ಕಳ್ಳತನ ಮಾಡಲಾಗಿದೆ. 99,75,000 ರೂ. ಮೌಲ್ಯದ 1,425 ಗ್ರಾಂ ಚಿನ್ನಾಭರಣ, 18,92,000 ರೂ. ಮೌಲ್ಯದ 22 ಕೆಜಿ ಬೆಳ್ಳಿ ವಸ್ತುಗಳು, 6.50 ಲಕ್ಷ ರೂ. ಮೌಲ್ಯದ 3 ವಾಚ್‌ಗಳು ಹಾಗೂ 4 ಲಕ್ಷ ರೂ. ನಗದು ಹಣ ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಆರ್.ನಾರಾಯಣಸ್ವಾಮಿ ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೆಕ್ಯೂರಿಟಿ ಗಾರ್ಡ್ ನರಬಹದ್ದೂರ ಶಾಯಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಇಂದು, ನಾಳೆ ರಾಜ್ಯದಲ್ಲಿ ಗುಡುಗು-ಮಿಂಚು ಸಹಿತ ಮಳೆ ಮುನ್ಸೂಚನೆ