ಬೆಂಗಳೂರು: ಓದಿದ್ದು 7ನೇ ತರಗತಿ ಆದರೆ ಮನೆ ದೋಚುವುದರಲ್ಲಿ ನಂಬರ್ 1 ಕಳ್ಳನಾಗಿದ್ದ ಗ್ಯಾರೇಜ್ ಮೆಕ್ಯಾನಿಕ್‍ನೊಬ್ಬನನ್ನು ಆರ್ ಟಿ ನಗರ ಪೊಲೀಸರು ಬಂಧಿಸಿದ್ದಾರೆ.
ಮುರುಳಿ ಬಂಧಿತ ಆರೋಪಿ. ಆರೋಪಿಯು ವರ್ಷಕ್ಕೆ ಒಂದೇ ಕಳ್ಳತನ, ಮಾಡುತ್ತಿದ್ದನು. ಉಳಿದ ಸಮಯ ಗ್ಯಾರೇಜ್‍ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದನು. ವರ್ಷಕ್ಕೆ ಒಂದರಂತೆ 13 ವರ್ಷದಲ್ಲಿ ಈತ 13 ಕಳ್ಳತನಗಳನ್ನು ಮಾಡಿದ್ದಾನೆ. 2009ರಲ್ಲಿ ಕಳ್ಳತನ ಶುರು ಮಾಡಿದ್ದವನು ಕೊನೆಗೆ 2022ರಲ್ಲಿ ಸಿಕ್ಕಿಬಿದ್ದಿದ್ದಾನೆ. ಅವನು ತುಂಬಾ ಅಚ್ಚುಕಟ್ಟಾಗಿ ಯೋಜನೆ ಹಾಕಿಕೊಂಡು ಕಳ್ಳತನ ಮಾಡುತ್ತಿದ್ದನು. ಇದನ್ನೂ ಓದಿ: ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಇಲ್ಲ: ಶಶಿ ತರೂರ್
Advertisement
Advertisement
ಪ್ರತಿನಿತ್ಯ ಯಾರೂ ಶಾಲೆಗೆ ಮಕ್ಕಳನ್ನು ಬಿಡಲು ಹೋಗುತ್ತಾರೆ ಅವರ ಮನೆಗಳನ್ನೇ ಈತ ಗುರಿಯಾಗಿಸಿಕೊಳ್ಳುತ್ತಿದ್ದನು. ಶಾಲೆಗೆ ಹೋಗುವಾಗ ಮೊದಲು ಅವರನ್ನು ಹಿಂಬಾಲಿಸುತ್ತಿದ್ದನು. ಪೋಷಕರು ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದಕ್ಕೆ ಎಷ್ಟು ಸಮಯ ಹಿಡಿಯುತ್ತೆ ನೋಡಿಕೊಂಡು ಉಪಾಯ ಮಾಡುತ್ತಿದ್ದನು. 1 ಮನೆ ಕಳ್ಳತನ ಮಾಡಲು ಸುಮಾರು 1 ತಿಂಗಳು ಉಪಾಯ ಮಾಡುತ್ತಿದ್ದನು. ಇದನ್ನೂ ಓದಿ: ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡುವ ಬಜೆಟ್: ಶಶಿಕಲಾ ಜೊಲ್ಲೆ
Advertisement
ನಂತರ ಆ ಮನೆಯ ಡೋರ್ ಕೀ ಮಾದರಿಯ ನಾಲ್ಕೈದು ನಕಲಿ ಕೀ ತಯಾರು ಮಾಡಿಸುತ್ತಿದ್ದನು. ನಂತರ ಪೊಷಕರು ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದರ ಒಳಗೆ ಮನೆ ದೋಚುತ್ತಿದ್ದನು. ಮುರುಳಿ ಒಂದು ಬಾರಿ ಕಳ್ಳತನ ಮಾಡಿದರೆ ಮತ್ತೆ ವರ್ಷವಿಡಿ ಕಳ್ಳತನದ ಸಹವಾಸಕ್ಕೆ ಹೋಗುತ್ತಿರಲಿಲ್ಲ.
Advertisement
ಇಂತಹ ಚಾಲಾಕಿ ಕಳ್ಳನಿಂದ 3 ಠಾಣೆಯ ಪೊಲೀಸರು ಒಂದೂವರೆ ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಖಾಕಿ ಸಿನಿಮಾದ ರೀತಿಯಲ್ಲಿ ಫಿಂಗರ್ ಪ್ರಿಂಟ್ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ 2009ರಲ್ಲಿ ಒಂದು ಮನೆ ಕಳ್ಳತನದ ಕೇಸ್ ಆಗಿತ್ತು. ಈ ವೇಳೆ ಪೊಲೀಸರು ವಿಚಾರಣೆಗಾಗಿ ಆ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಕಳ್ಳನ ಫಿಂಗರ್ ಪ್ರಿಂಟ್ ಶೇಖರಿಸಿದ್ದರು. ಜನವರಿ ತಿಂಗಳಿನ ಕೊನೆಯ ವಾರದ ಹಿಂದೆ ಆರ್ ಟಿ ನಗರ ಪೊಲೀಸರಿಗೆ ಸಿಕ್ಕಿ ಬಿದ್ದಾಗ ಈತನ ಫಿಂಗರ್ ಪ್ರಿಂಟ್ ಕಳ್ಳತನ ಕೇಸ್‍ನಲ್ಲಿ ಮ್ಯಾಚ್ ಆಗಿದೆ.
ಆರೋಪಿಯನ್ನು ಪೊಲೀಸರು ಹೆಬ್ಬಾಳ ಕೇಸ್ ಬಗ್ಗೆ ವಿಚಾರಣೆ ಮಾಡುವಾಗ ಒಟ್ಟು 13 ಕಳ್ಳತನಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಆರ್ ಟಿ ನಗರ, ಡಿಜೆಹಳ್ಳಿ, ಅಮೃತಹಳ್ಳಿ, ಹೆಬ್ಬಾಳ, ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಸದ್ಯ ಎಲ್ಲಾ ಪ್ರಕರಣಗಳಿಂದ ಒಟ್ಟು ಒಂದೂವರೆ ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಸದ್ಯ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಅವನನ್ನು ಪಡೆದಿದ್ದು, ಮತ್ತಷ್ಟು ವಿಚಾರಣೆಗೆ ತಯಾರಾಗಿದ್ದಾರೆ.