ಕೋಲಾರ: ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧ ಪ್ರಕರಣಗಳು ವರದಿಯಾಗುತ್ತಿದ್ದು, ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗಿ ಪ್ರಾಣಕ್ಕೆ ಕುತ್ತು ತರುತ್ತಿವೆ. ಅದೇ ರೀತಿ ಖತರ್ನಾಕ್ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ (Lovers) ಸೇರಿ ಪತಿಯನ್ನೇ ಮುಗಿಸಿದ್ದಾಳೆ. ಅಲ್ಲದೇ ಅದನ್ನು ಅಪಘಾತವೆಂದು (Accident) ಬಿಂಬಿಸಲು ಹೋಗಿ ಪೊಲೀಸರಿಗೆ ತಗಲಾಕಿಕ್ಕೊಂಡಿರುವ ಘಟನೆ ಕೋಲಾರ ತಾಲೂಕಿನಲ್ಲಿ ನಡೆದಿದೆ.
Advertisement
ಕೋಲಾರ ತಾಲೂಕಿನ ಕನ್ನಘಟ್ಟ ಬಳಿ ಘಟನೆ ನಡೆದಿದ್ದು ಮೃತನ ಪತ್ನಿ ಸೌಮ್ಯಾ, ಆಕೆಯ ಪ್ರಿಯಕರ ಚೊಕ್ಕರೆಡ್ಡಪಲ್ಲಿ ಶ್ರೀಧರ್ ಮತ್ತವನ ಸ್ನೇಹಿತನನ್ನ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಜಾನಪದ ಕಲಾವಿದ ಜನ್ನಘಟ್ಟ ಕೃಷ್ಣ ಮೂರ್ತಿ, ಸೌಮ್ಯಾಳ ಪತಿ. ಇದನ್ನೂ ಓದಿ: ರಾಜಕಾರಣ ಬದಿಗಿಟ್ಟು ಪುತ್ರನ ಮದುವೆಗೆ ಮುಖ್ಯಮಂತ್ರಿಯನ್ನು ಆಹ್ವಾನಿಸಿದ ಸುಮಲತಾ
Advertisement
Advertisement
ಪ್ರಿಯಕರನಿಗಾಗಿ ಪತಿಗೆ ಸ್ಕೆಚ್:
ಸೋಮವಾರ ರಾತ್ರಿ ಪ್ರಿಯಕರ ಮತ್ತವನ ಸ್ನೇಹಿತನ ಜೊತೆ ಸೇರಿದ ಆರೋಪಿ ಸೌಮ್ಯಾ ಪತಿಯನ್ನ ಹತ್ಯೆ ಮಾಡಿಸಿದ್ದಾಳೆ. ಬಳಿಕ ಎಸ್ಕೇಪ್ ಆಗಲು, ತನ್ನ ಪತಿ ಬೈಕ್ನಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಬಿಂಬಿಸಿದ್ದಳು. ಆದ್ರೆ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಅನುಮಾನ ಮೂಡಿತ್ತು. ಸೌಮ್ಯಾಳನ್ನ ವಿಚಾರಣೆಗೆ ಒಳಪಡಿಸಿದಾಗ ಬಣ್ಣ ಬಯಲಾಗಿ ತಗಲಾಕಿಕೊಂಡಿದ್ದಾಳೆ. ಆರೋಪಿಗಳನ್ನ ಕೋಲಾರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಐಪಿಎಸ್ ಅಧಿಕಾರಿ ಜೊತೆಗಿನ ಕಿರಿಕ್: ಬಾಲಯ್ಯನ ವಿಡಿಯೋ ಹಾಕಿ ಹಯಾತಿ ಟಾಂಗ್