ಬೆಳಗಾವಿ: ಹೆಂಡತಿ ಕಾಟ ತಾಳಲಾರದೇ 26 ಲಕ್ಷ ಕ್ಯಾಶ್ ತೆಗೆದುಕೊಂಡು ಮುಂಬೈ (Mumbai) ನಿಂದ ಗೋವಾ (Goa) ಗೆ ಕಾರಲ್ಲಿ ಹೊರಟಿದ್ದ ಗುತ್ತಿಗೆದಾರ ಬೆಳಗಾವಿಯಲ್ಲಿ ಲಾಕ್ ಆಗಿರುವ ಘಟನೆ ನಡೆದಿದೆ.
ಬೆಳಗಾವಿಯ ಕರ್ನಾಟಕ ಚೌಕ್ ಬಳಿಯ ಚೆಕ್‍ಪೋಸ್ಟ್ ನಲ್ಲಿ 26 ಲಕ್ಷ ಹಣ ಜಪ್ತಿ ಮಾಡಿಕೊಳ್ಳಲಾಗಿದೆ. ಗೂಗಲ್ ಮ್ಯಾಪ್ (Google Map) ನೋಡಿ ಗೋವಾಗೆ ಹೋಗಲು ಹೋಗಿ ಬೆಳಗಾವಿ ಚೆಕ್‍ಪೋಸ್ಟ್ ನಲ್ಲಿ ತಗ್ಲಾಕ್ಕೊಂಡ ಗುತ್ತಿಗೆದಾರನಿಂದ ಹಣ ಜಪ್ತಿ ಮಾಡಿದ್ದು, ಆದಾಯ ತೆರಿಗೆ (Income Tax) ಇಲಾಖೆಗೆ ಪ್ರಕರಣ ವರ್ಗಾಯಿಸಲಾಗಿದೆ. ಈ ವೇಳೆ ಪೊಲೀಸರಿಗೆ ಮಾಹಿತಿ ನೀಡುವ ಗುತ್ತಿಗೆದಾರ ತಾನು ಒಯ್ಯುತ್ತಿದ್ದ ಹಣಕ್ಕೆ ದಾಖಲೆ ಇದೆ. ತಾನು ಮುಂಬೈನಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಆಗಿದ್ದೇನೆ ಎಂದು ತಿಳಿಸಿದ್ದಾನೆ.
Advertisement
Advertisement
ಅಲ್ಲದೇ ಇಷ್ಟೊಂದು ಮೊತ್ತದ ನಗದು ಏಕೆ ಒಯ್ಯುತ್ತಿದ್ದೀಯಾ ಎಂದು ಪೊಲೀಸರ ಪ್ರಶ್ನೆಗೆ ಹೆಂಡತಿ ಕಾಟ ತಾಳಲಾರದೇ ನೆಮ್ಮದಿ ಅರಸಿ ಹೋಗುತ್ತಿದ್ದೇನೆ. ಆನ್‍ಲೈನ್ ಪೇಮೆಂಟ್ ಮಾಡಿದ್ರೆ ಬ್ಯಾಂಕ್ ಟ್ರ್ಯಾನ್ಸ್ಯಾಕ್ಷನ್ ಮೂಲಕ ಗೊತ್ತಾಗುತ್ತದೆ. ಹೀಗಾಗಿ ಹೆಂಡತಿ ಕಾಟ ತಾಳಲಾರದೇ ಗೋವಾ (Goa) ಗೆ ಹೊರಟಿದ್ದೆ. ಗೂಗಲ್ ಮ್ಯಾಪ್ ಮೂಲಕ ಮಾರ್ಗ ನೋಡುತ್ತಿದ್ದಾಗ ತಪ್ಪಾಗಿ ಸಿಟಿಯೊಳಗೆ ಬಂದಿದ್ದೇನೆ ಎಂದು ತಿಳಿಸಿದ್ದಾನೆ.
Advertisement
ಇತ್ತ ಹಣದ ಮೂಲದ ಬಗ್ಗೆ ಪೊಲೀಸರು ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಟೋಲ್ ಶುಲ್ಕ ಹೆಚ್ಚಳ ನಿರ್ಧಾರ ಕೈಬಿಟ್ಟ ಹೆದ್ದಾರಿ ಪ್ರಾಧಿಕಾರ