ಚಿಕ್ಕಬಳ್ಳಾಪುರ: ಬೈಕ್ನಲ್ಲಿ ಬಂದ ಅನಾಮಿಕ ಯುವಕನೊಬ್ಬ ಸಿಕ್ಕ ಸಿಕ್ಕವರ ಮೇಲೆ ಲಾಂಗ್ ಬೀಸಿ ಹುಚ್ಚಾಟ ನಡೆಸಿರುವ ಘಟನೆ ಚಿಕ್ಕಬಳ್ಳಾಪುರದ ಬಜಾರ್ ರಸ್ತೆಯ ಬಲಮುರಿ ವೃತ್ತದಲ್ಲಿ ನಡೆದಿದೆ.
ಸ್ಕೂಟಿಯಲ್ಲಿ ಜರ್ಸಿ ಧರಿಸಿ, ತಲೆಗೆ ಹೆಲ್ಮೆಟ್ ಹಾಕಿಕೊಂಡು ಬಂದು ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಇದರಿಂದ ಸದ್ಯ ಚಿಕ್ಕಬಳ್ಳಾಪುರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಇದನ್ನೂ ಓದಿ: ನಿಮ್ಮ ಬರ್ತ್ಡೇ ಇದ್ರೆ ಹೇಳಿ ಅದಕ್ಕೂ ಬರ್ತೀವಿ: ಡಿಕೆಶಿ
ಘಟನೆಯಿಂದ ಸ್ವಾತಿ, ಮನೋಹರ್, ಸಂತೋಷ್, ರೆಹಮಾನ್, ಅರೀಫ್ ಹಾಗೂ ಮುನಿರೆಡ್ಡಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಮಣಿಪಾಲದ ಹಿರಿಯ ಚೇತನ, ಉದಯವಾಣಿ ಸಂಸ್ಥಾಪಕ ಮೋಹನ್ ದಾಸ್ ಪೈ ನಿಧನ
ಯುವಕ 8ಕ್ಕೂ ಹೆಚ್ಚು ಮಂದಿಯ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಅವರಲ್ಲಿ 7ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಘಟನಾ ಸ್ಥಳಕ್ಕೆ ಹಾಗೂ ಖಾಸಗಿ ಆಸ್ಪತ್ರೆ ಎಸ್ಪಿ ಡಿ.ಎಲ್.ನಾಗೇಶ್ ಭೇಟಿ ನೀಡಿದ್ದು ಗಾಯಾಳುಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.