ಕನ್ನಡ ಸಿನಿಮಾ ರಂಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಗುರುತಿಸುವಂತೆ ಮಾಡಿದ್ದ ತಿಥಿ ಸಿನಿಮಾದ ನಾಯಕಿ ಪೂಜಾ ಕೆಲವು ವರ್ಷಗಳಿಂದ ಸಿನಿಮಾ ರಂಗದಿಂದಲೇ ದೂರವಾಗಿದ್ದರು. ಓದಿನ ಕಡೆ ಗಮನ ಕೊಟ್ಟಿದ್ದ ಪೂಜಾ ಇದೀಗ ಹೊಸ ಜೀವನಕ್ಕೆ ಕಾಲಿಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿರುವ ಅವರು, ಡಿಸೆಂಬರ್ ನಲ್ಲಿ ಸಪ್ತಪದಿ ತುಳಿಯಲಿದ್ದಾರೆ.
Advertisement
ಸಿನಿಮಾ ರಂಗದಿಂದ ದೂರವಾಗಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪೂಜಾ, ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪ್ರೇಮ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸದ್ಯ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ತಿಥಿ ಸಿನಿಮಾದ ಕಾವೇರಿಗೂ ಕಂಕಣ ಭಾಗ್ಯ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ. ವೈವಾಹಿಕ ಜೀವನ ಚೆನ್ನಾಗಿರಲಿ ಎಂದು ಶುಭಾಶಯ ಕೋರಿದ್ದಾರೆ. ಇದನ್ನೂ ಓದಿ:ಕಂಗನಾ ರಣಾವತ್ ವಿರುದ್ಧ ತಿರುಗಿ ಬಿದ್ದ ಠಾಕ್ರೆ ಅಭಿಮಾನಿಗಳು
Advertisement
Advertisement
ತಿಥಿ ಸಿನಿಮಾ ಬಂದಾಗ ದಿಢೀರ್ ಅಂತ ಪೂಜಾ ಫೇಮಸ್ ಆದರು. ಕುರಿ ಕಾಯುವ ಕಾವೇರಿಯ ಪಾತ್ರದಲ್ಲಿ ಅವರು ಎಲ್ಲರ ಗಮನ ಸೆಳೆದಿದ್ದರು. ಅವರಿಗೆ ರಾಜ್ಯ ಪ್ರಶಸ್ತಿ ಕೂಡ ಬಂತು. ಅಲ್ಲಿಂದ ಹಲವು ಸಿನಿಮಾಗಳಲ್ಲೂ ನಟಿಸಿದರು. ನಂತರ ಸಿನಿಮಾ ರಂಗದಿಂದ ದೂರವಾದರು. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸುದ್ದಿಯೂ ಆಗಿತ್ತು. ಇದೀಗ ಪ್ರೇಮ್ ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದು, ಡಿಸೆಂಬರ್ 3 ಮತ್ತು 4 ರಂದು ಈ ಜೋಡಿ ಹಸೆಮಣೆ ಏರುತ್ತಿದೆ.