ಬೆಂಗಳೂರು: ಬಹುನಿರೀಕ್ಷಿತ `ದಿ ವಿಲನ್’ ಚಿತ್ರದ 2 ಟೀಸರ್ ರಿಲೀಸ್ ಆಗಿದ್ದು ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದಿದೆ.
ದಿ ವಿಲನ್ ಟೀಸರ್ ಬಿಡುಗಡೆಯಾದ ಒಂದು ದಿನ ನಂತರ ಪ್ರೇಮ್ ಯ್ಯೂಟ್ಯೂಬ್ ಸ್ಕ್ರೀನ್ ಶಾಟ್ ತೆಗೆದು ಅದನ್ನು ಸಾಮಜಿಕ ಜಾಲತಾಣದಲ್ಲಿ ಹಾಕಿ ಕಿಚ್ಚ ಸುದೀಪ್ ಹಾಗೂ ಶಿವರಾಜ್‍ಕುಮಾರ್ ಅವರಿಗೆ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ.
Advertisement
ದಿ ವಿಲನ್ ತನ್ನ ಮೊದಲೇ ದಿನವೇ ಸ್ಯಾಂಡಲ್‍ವುಡ್‍ನಲ್ಲಿ ದಾಖಲೆಯನ್ನು ಸೃಷ್ಟಿ ಮಾಡಿದೆ. ಯ್ಯೂಟ್ಯೂಬ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ 10 ಲಕ್ಷ ವ್ಯೂ ತಲುಪಿದೆ. ಎರಡು ಟೀಸರ್ 10 ಲಕ್ಷ ಹಾಗೂ 15 ಲಕ್ಷ ತಲುಪಿದೆ. ಡಾರ್ಲಿಂಗ್ ಸುದೀಪ್ ಹಾಗೂ ಶಿವಣ್ಣಗೆ ಧನ್ಯವಾದಗಳು ಹಾಗೂ ಎಲ್ಲ ವೀಕ್ಷಕರಿಗೂ ಧನ್ಯವಾದಗಳು. ನೀವು ನನ್ನ ಈ ದಿನವನ್ನು ವಿಶೇಷ ಮಾಡಿದ್ದೀರಿ. ಆಡಿಯೋ ಅತೀ ಶೀಘ್ರದಲ್ಲೇ ಬರಲಿದೆ ಎಂದು ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
Advertisement
#TheVillain day1 completed with a new record. #Fastest reach #Million views in #YouTube history. 1m n 1.5m Both teaser rocking ????Thanks to darling @KicchaSudeep and #Dr.Shivanna
Thanks to all viewers.
All of you made my day special. #AudioComingSoon love all ???? pic.twitter.com/JlGg0sm0HX
— PREM❣️S (@directorprems) June 29, 2018
Advertisement
ಅನೆಬಂತೊಂದಾನೆ ಅನ್ನುವ ಧ್ವನಿಯಲ್ಲಿ ಕಿಚ್ಚ ಡೈಲಾಗ್ ಅಬ್ಬರಿಸಿ ಬೊಬ್ಬಿರೆದ್ರೆ, ಶಿವರಾಜ್‍ಕುಮಾರ್ ನಾನ್ ಸೈಲೆಂಟಾಗಿದ್ರೆ ರಾಮಾ, ವೈಲೆಂಟಾದ್ರೆ ರಾವಣ ಎಂಬುದಾಗಿ ಡೈಲಾಗ್ ಹೊಡೆದಿದ್ದಾರೆ. ನಿರ್ದೇಶಕ ಪ್ರೇಮ್ ಇಬ್ಬರ ಪಾತ್ರದಲ್ಲೂ ಸಖತ್ ಕ್ಯೂರಿಯಾಸಿಟಿ ಸೃಷ್ಟಿಸಿದ್ದಾರೆ.
Advertisement
ದಿ ವಿಲನ್ ಟೀಸರ್ ಅರ್ಧಗಂಟೆಯಲ್ಲೇ ಲಕ್ಷ ವೀವರ್ಸ್ ದಾಟಿತ್ತು. ಗಂಟೆ ಗಂಟೆಗೂ ವೀವ್ಸ್ ದ್ವಿಗುಣಗೊಳ್ಳುತ್ತಲೇ ಇತ್ತು. ಅಂದಹಾಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ನಗರದ ಜಿ ಟಿ ಮಾಲ್‍ನಲ್ಲಿ `ದಿ ವಿಲನ್’ ಚಿತ್ರದ ಎರಡೂ ಟೀಸರ್ ಅಧಿಕೃತವಾಗಿ ರಿಲೀಸ್ ಮಾಡಿದ್ದರು.
`ದಿ ವಿಲನ್’ ಚಿತ್ರಕ್ಕೆ ಟೈಮೆಕ್ಸ್ ವಾಚ್ ಕಂಪೆನಿ ಪ್ರಾಯೋಜಕತ್ವ ನೀಡಿದೆ. ದಕ್ಷಿಣ ಭಾರತದಲ್ಲೇ ಕನ್ನಡ ಚಿತ್ರಕ್ಕೆ ಮೊದಲ ಬಾರಿಗ ಪ್ರಾಯೋಜಕತ್ವ ನೀಡಿದೆ. ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಶಿವರಾಜ್ ಕುಮಾರ್, ನಿರ್ದೇಶಕ ಪ್ರೇಮ್ ಅವರಿಗೆ ಟೈಮೆಕ್ಸ್ ಕಂಪೆನಿ ಮಾಲೀಕರು ವಾಚ್ ಕಟ್ಟಿದರು. ಅಲ್ಲದೇ `ದಿ ವಿಲನ್’ ಡೈರಿ ಡೇ ಐಸ್ ಕ್ರೀಂ ಬಿಡುಗಡೆ ಮಾಡಿದರು.