ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ (The Vaccine War) ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಬಿಡುಗಡೆಯಾದ ಟ್ರೈಲರ್ (Trailer) ನಲ್ಲಿ ಹಲವಾರು ವಿಷಯಗಳನ್ನು ಹೇಳಿದ್ದಾರೆ ನಿರ್ದೇಶಕರು. ಈ ಚಿತ್ರದಲ್ಲಿ ಕನ್ನಡದ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ (Saptami Gowda) ಕೂಡ ನಟಿಸಿದ್ದು, ಈ ಸಿನಿಮಾದಲ್ಲಿ ಅವರು ವಿಜ್ಞಾನಿ ಪಾತ್ರವನ್ನು ನಿರ್ವಹಿಸಿದ್ದಾರೆ.
ಅಗಸ್ಟ್ ತಿಂಗಳಲ್ಲಿ ಟೀಸರ್ ರಿಲೀಸ್ ಆಗಿತ್ತು. ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಕುರಿತ ಪ್ರಯೋಗದ ದೃಶ್ಯದೊಂದಿಗೆ ಆರಂಭವಾಗುವ ಟೀಸರ್ ನಲ್ಲಿ ಭಾರತೀಯ ವಿಜ್ಞಾನಿಗಳು ವ್ಯಾಕ್ಸಿನ್ ಗಾಗಿ ಪಟ್ಟ ಶ್ರಮವನ್ನು ಟೀಸರ್ ನಲ್ಲಿ ಕಟ್ಟಿಕೊಡಲಾಗಿತ್ತು. ಅಲ್ಲದೇ ಕುತೂಹಲ ಮೂಡಿಸುವಂತಹ ಸಾಕಷ್ಟು ಸಂಗತಿಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿತ್ತು. ಇದನ್ನೂ ಓದಿ:ಲೋಕೇಶ್ ಕನಗರಾಜ್ ಜೊತೆ ರಜನಿಗೆ ಮುನಿಸಿಲ್ಲ : ಹೊಸ ಸಿನಿಮಾ ಘೋಷಣೆ
ಕೋವಿಡ್ ವ್ಯಾಕ್ಸಿನ್ ಸುತ್ತ ಸಾಗುವ ಕಥೆಯಲ್ಲಿ ಪಲ್ಲವಿ ಜೋಶಿ, ಅನುಪಮ್ ಖೇರ್, ನಾನಾ ಪಾಟೇಕರ್ ಮತ್ತು ಕಾಂತಾರ ಸಿನಿಮಾ ಖ್ಯಾತಿಯ ಸಪ್ತಮಿ ಗೌಡ (Saptami Gowda)ಪ್ರಮುಖ ಪಾತ್ರಗಳಲ್ಲಿದ್ದಾರೆ. ಕಾಶ್ಮೀರಿ ಫೈಲ್ಸ್ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಬಂಡವಾಳ ಹೂಡಿದ್ದು, ಐ ಆ್ಯಮ್ ಬುದ್ಧ ಸಹಯೋಗದಲ್ಲಿ ಪಲ್ಲವಿ ಜೋಶಿ ಕೂಡ ಸಿನಿಮಾಕ್ಕೆ ಹಣ ಹಾಕಿದ್ದಾರೆ.
ಸೆಪ್ಟಂಬರ್ 28ರಂದೇ ‘ದಿ ವ್ಯಾಕ್ಸಿನ್ ವಾರ್’ ಚಿತ್ರ 11 ಭಾಷೆಯಲ್ಲಿ ತೆರೆ ಕಾಣಲಿದೆ. ಇದೇ ದಿನ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬೋದ ಸಲಾರ್ ಸಿನಿಮಾ ಕೂಡ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಆ ದಿನಾಂಕವನ್ನು ಮುಂದೂಡಲಾಗಿದೆ.
Web Stories